– ಕನಸು ನನಸು ಮಾಡಿಕೊಂಡು ಲೋಕೇಶ್
– ಡಿ.06 ರಂದು ನಡೆಯಲಿರುವ ವಿಶ್ವಕಪ್
– ಡಿ.06 ರಂದು ನಡೆಯಲಿರುವ ವಿಶ್ವಕಪ್
ಕೊಪ್ಪಳ: ಅಂಧರ (Blind) ವಿಭಾಗದ ಕ್ರಿಕೆಟ್‍ನ ಟಿ20 ವಿಶ್ವಕಪ್ ಪಂದ್ಯಾವಳಿಗಳು (T20 World Cup cricket) ಮುಂದಿನ ತಿಂಗಳು ಡಿಸೆಂಬರ್‌ನಲ್ಲಿ ನಡೆಯಲಿದ್ದು, ಭಾರತ ಪರವಾದ ತಂಡದಲ್ಲಿ ಕೊಪ್ಪಳದ ಗಂಗಾವತಿ (Gangavathi) ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಯಡಳ್ಳಿ ಯುವಕ ಆಯ್ಕೆಯಾಗುವ ಮೂಲಕ ಕೊಪ್ಪಳ (Koppala) ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾನೆ.
Advertisement
ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗುಡ್ಡಗಾಡು ಪ್ರದೇಶ ಯಡಳ್ಳಿ ಗ್ರಾಮದ ಲೋಕೇಶ್ ಎಂಬ ಯುವಕ ಅಂಧರ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡು ಸತತ ಪ್ರಯತ್ನದ ಫಲವಾಗಿ ಟಿ20 ವಿಶ್ವಕಪ್ ಭಾಗವಹಿಸಲು ಭಾರತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾನೆ. ಕಡು ಬಡತನವನ್ನು ಅನುಭವಿಸುತ್ತಿರುವ ರೇಣುಕಪ್ಪ, ಹುಲಿಗೆಮ್ಮ ದಂಪತಿಗಳ ನಾಲ್ಕನೇ ಮಗನಾಗಿರುವ ಲೋಕೇಶ್, ಕಣ್ಣು ಕಾಣದೇ ಹುಟ್ಟು ಅಂಧತ್ವವನ್ನು ಅನುಭವಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದ ಕಿಕ್ರೆಟ್ ಆಡುವುದನ್ನು ರೂಡಿಸಿಕೊಂಡಿದ್ದ ಲೋಕೇಶ್‍ಗೆ, ಮನೆಯವರಿಂದ ಸರಿಯಾಗಿ ಪ್ರೋತ್ಸಾಹ ದೊರೆಯದೇ ಇರುವುದರಿಂದ 15 ವರ್ಷಗಳ ಹಿಂದೆ ಮನೆ ಬಿಟ್ಟು ಬೆಂಗಳೂರಿಗೆ ಹೋಗಿ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದಾನೆ.
Advertisement
Advertisement
ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿ ಇರುವುದರಿಂದ ಕೂಲಿ ಕೆಲಸ ಜೊತೆಗೆ ಬೆಂಗಳೂರಿನ ಸಮರ್ಥಂ ಟ್ರಸ್ಟ್ ಸಂಸ್ಥೆಯಲ್ಲಿ ಕ್ರಿಕೆಟ್ ಅಭ್ಯಾಸವನ್ನು ಮಾಡುವ ಮೂಲಕ ರಣಜಿ ಪಂದ್ಯಾಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ನಂತರದಲ್ಲಿ ಭಾರತ ತಂಡದ ಅಂಧರ ವಿಭಾಗಕ್ಕೆ ಆಯ್ಕೆಯಾಗಿ, ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಮೊದಲ ಬಾರಿಗೆ 2006ರಲ್ಲಿ ಅಂಧರ ಏಷ್ಯ ಕಪ್‍ನಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಉತ್ತಮ ಆಲ್ ರೌಂಡರ್ ಎಂದು ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಇಂಡಿಯಾ ಹಾಗೂ ಇಂಗ್ಲೆಂಡ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. 2019ರಲ್ಲಿ ನೇಪಾಳದಲ್ಲಿ ಇಂಡಿಯಾ, ನೇಪಾಳ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮ್ಯಾನ್ ಆಗಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಕಲ್ಲು ತೂರಾಟದಿಂದ ಬಾಲಕನಿಗೆ ಗಾಯ – ಎಎಪಿ ಗುಜರಾತ್ ಮುಖ್ಯಸ್ಥನಿಂದ ಆರೋಪ
Advertisement
ವಿಶ್ವಕಪ್ ಕನಸು ನನಸು: ಅಂಧರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಕನಸು ಕಟ್ಟಿಕೊಂಡು, ಸತತ ಅಭ್ಯಾಸವನ್ನು ನಡೆಸುತ್ತಿದ್ದ ಲೋಕೇಶ್ ಕೊನೆಗೂ ಕನಸು ನನಸು ಮಾಡಿಕೊಂಡಿದ್ದಾರೆ. ಕ್ರಿಕೆಟ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಇನ್ ಇಂಡಿಯಾ ಸಂಸ್ಥೆಯು ದೇಶದ 56 ಆಟಗಾರರನ್ನು ಆಯ್ಕೆ ಮಾಡಿಕೊಂಡು, ಬೆಂಗಳೂರಿನಲ್ಲಿ ಶಿಬಿರವನ್ನು ನಡೆಸಿ, ತರಬೇತಿ ನೀಡಲಾಗಿತ್ತು. ನಂತರ ಆಯ್ಕೆ ಸಮಿತಿಯಿಂದ ಮೌಲ್ಯಮಾಪನ ಮಾಡಲಾಗಿದ್ದು, 56 ಜನ ಆಟಗಾರರಲ್ಲಿ ಕೇವಲ 29 ಜನ ಆಟಗಾರರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಯಿತು.
ಬಳಿಕ ಬೋಪಾಲ್‍ನಲ್ಲಿ 12 ದಿನಗಳ ಕಾಲ ಕಠಿಣ ಕ್ರಿಕೆಟ್ ತರಬೇತಿ ಹಾಗೂ ದೈಹಿಕ ಸದೃಢತೆಯ ಮೌಲ್ಯಮಾಪನವನ್ನು ನಡೆಸಲಾಗಿದ್ದು, ಕೊನೆಯಾಗಿ ಟಿ20 ವಿಶ್ವಕಪ್‍ಗೆ ಅವಶ್ಯಕ ಇರುವ 17 ಜನ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ 17 ಜನ ಆಟಗಾರರಲ್ಲಿ ಲೋಕೇಶ್ ಅವರು ಸ್ಥಾನವನ್ನು ಪಡೆದುಕೊಂಡು 4ನೇ ಟಿ20 ವಿಶ್ವಕಪ್‍ನಲ್ಲಿ ಭಾಗವಹಿಸಲಿದ್ದಾರೆ. 2022ರ ಡಿಸೆಂಬರ್ 6ರಂದು ಭಾರತದಲ್ಲಿ ನಡೆಯಲಿರುವ 3ನೇ ಟಿ20 ವಿಶ್ವಕಪ್‍ನಲ್ಲಿ ಭಾರತ ತಂಡದ ಪರವಾಗಿ ಲೋಕೇಶ್ ಪ್ರದರ್ಶನ ನೀಡಲಿದ್ದಾರೆ. ಡಿಸೆಂಬರ್ 6 ರಿಂದ ಡಿಸೆಂಬರ್ 17ರವರೆಗೆ ಟಿ20 ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿದ್ದು, ಪಂದ್ಯದಲ್ಲಿ ನೇಪಾಳ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ಸೇರಿ ಒಟ್ಟು 7 ದೇಶಗಳು ಭಾಗವಹಿಸಲಿದ್ದು, ಒಟ್ಟು 24 ಪಂದ್ಯಗಳು ನಡೆಯಲಿವೆ. ಭಾರತದ ನಾನಾ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.
ಚಿಕ್ಕ ವಯಸ್ಸಿನಿಂದ ಕ್ರಿಕೆಟ್‍ನಲ್ಲಿ ಸಾಧನೆ ಮಾಡಬೇಕು ಎನ್ನುವ ಕನಸು ಕಟ್ಟಿಕೊಂಡಿದ್ದೆ. ಅದಕ್ಕಾಗಿಯೇ ಗ್ರಾಮ ಬಿಟ್ಟು ಬೆಂಗಳೂರು ಹೋಗಿ, ಸಮರ್ಥಂ ಟ್ರಸ್ಟ್‌ನಲ್ಲಿ ತರಬೇತಿಯನ್ನು ಪಡೆದುಕೊಂಡು ಅಂತರಾಷ್ಟೀಯ ಅಂಧರ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವಕಪ್ ಆಡಬೇಕು ಎನ್ನುವ ಕನಸು ಕಟ್ಟಿಕೊಂಡು ಪ್ರತಿಯೊಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಕೊನೆಯ ಭಾರತ ತಂಡದಲ್ಲಿ ವಿಶ್ವಕಪ್ ಆಡಲು ಅವಕಾಶ ಸಿಕ್ಕಿದ್ದು, ಸಂತಸವಾಗಿದೆ. ವಿಶ್ವಕಪ್‍ನಲ್ಲಿ ಕೂಡ ಉತ್ತಮ ಪ್ರದರ್ಶನವನ್ನು ನೀಡಿ, ದೇಶದ ಕೀರ್ತಿ ಹಾರಿಸುವೆ. ಇದನ್ನೂ ಓದಿ: ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]