ಬೆಂಗಳೂರು: ನಾವೆಲ್ಲರೂ ಸಾವಿರ ಲವ್ ಸ್ಟೋರಿಗಳನ್ನು ಕೇಳಿದ್ದೇವೆ. ಮದುವೆಯಾದವರನ್ನೂ ನೋಡಿದ್ದೇವೆ. ಆದರೆ ಗುರುಗುಂಟೆಪಾಳ್ಯದಲ್ಲಿರುವ ಪ್ರೇರಣಾ ರಿಸೋರ್ಸ್ ಸೆಂಟರ್ ನಲ್ಲಿ ಅಂಧರಿಬ್ಬರು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಧು ತಾರಾಬಾಯಿ ಮತ್ತು ವರ ಮಾರುತಿ ಬಸಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ. ಹುಟ್ಟಿನಿಂದಲೂ ಅಂಧರು ಮತ್ತು ಅನಾಥರಾದ ತಾರಾಬಾಯಿ, ಮಾರುತಿ ಬಸಪ್ಪ ಜೋಡಿ ಇದೀಗ ವಾಲ್ಮೀಕಿ ಪದ್ಧತಿಯಂತೆ ಏಳೇಳು ಜನ್ಮಕ್ಕೂ ಒಂದಾಗಿರುತ್ತೇವೆಂದು ಸಪ್ತಪದಿ ತುಳಿದ್ದಾರೆ ಎಂದು ಪ್ರೇರಣಾ ರಿಸೋರ್ಸ್ ಸೆಂಟರ್ ನಿರ್ದೇಶಕರು ಮೇಘನಾ ಹೇಳಿದ್ದಾರೆ.
ವರ ಮಾರುತಿ ಸಂಗೀತ ಶಿಕ್ಷಕನಾಗಿದ್ದು, ತಾರಾ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಟ್ರೈನಿಂಗ್ ಒಂದರಲ್ಲಿ ಪರಿಚಿತರಾದ ಈ ಜೋಡಿ, ಪರಸ್ಪರ ಪ್ರೀತಿ ಮಾಡಲು ಶುರು ಮಾಡಿದ್ದರು. ಪ್ರೀತಿ ಕುರುಡು ಎಂಬ ಮಾತಿದೆ. ಆದರೆ ಅದೇ ಪ್ರೀತಿ ದೃಷ್ಟಿ ವಿಕಲಚೇತನರ ಬಾಳಿಗೆ ಇಂದು ಬೆಳಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv