ಮಂಗಳೂರು: ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಸಂಭ್ರಮ ಮನೆ ಮಾಡಲು ಹನುಮಂತನ ಕೃಪೆ ಕಾರಣ ಎನ್ನುವ ಮಾತುಗಳು ಈಗ ಕೇಳಿ ಬಂದಿವೆ.
ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿರುವ ಹನುಮಂತ ಕೃಪೆಯಿಂದ ಗಂಡು ಮಗು ಜನಿಸಿದೆ ಎನ್ನುವ ಮಾತನ್ನು ಆ ಕ್ಷೇತ್ರವನ್ನು ನಂಬುತ್ತಿರುವ ಭಕ್ತರು ಹೇಳಿದ್ದಾರೆ.
Advertisement
ಆಂಜನೇಯನ ಪರಮ ಭಕ್ತರಾಗಿರುವ ಯದುವೀರ್ ಅವರು ಕಳೆದ ತಿಂಗಳು ಈ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಮಾಡಿಸಿದ್ದರು. ಈ ಪೂಜೆಯ ವೇಳೆ ಗಂಡು ಮಗು ಜನಿಸಬೇಕೆಂದು ಅವರು ಪ್ರಾರ್ಥನೆ ಮಾಡಿಕೊಂಡಿದ್ದರು ಎಂದು ಆಡಳಿತ ಮಂಡಳಿಯ ಸದಸ್ಯರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
Advertisement
ಈ ಹಿಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದರು. ಆದರೆ ಯದುವೀರ್ ಒಡೆಯರ್ ನಾಲ್ಕು ಬಾರಿ ಈ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಮೊದಲು ಶ್ರೀಕಂಠದತ್ತ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಅವರ ಜೊತೆ ಆಗಮಿಸಿದ್ದ ಯದುವೀರ್ ನಂತರ ಪತ್ನಿ ಜೊತೆ ಎರಡು ಬಾರಿ ಕ್ಷೇತ್ರಕ್ಕೆ ಆಗಮಿಸಿದ್ದರು. ಪ್ರಮೋದಾ ದೇವಿ ಅವರ ಜೊತೆ ಬಂದಾಗ ಅವರನ್ನು ಮೆರವಣಿಗೆ ಮಾಡಿ ಕರೆದುಕೊಂಡು ಬರಲಾಗಿತ್ತು. ಪತ್ನಿ ಗರ್ಭಿಣಿಯಾದ ಬಳಿಕ ಒಂದು ಬಾರಿ ಭೇಟಿ ನೀಡಿದ್ದು ವಿಶೇಷ. ಕೊನೆಯದಾಗಿ ಕಳೆದ ತಿಂಗಳು ಅವರೊಬ್ಬರೆ ಈ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಮಾಡಿಸಿ ತೆರಳಿದ್ದರು.
Advertisement
ಕ್ಷೇತ್ರಕ್ಕೆ ಆಗಮಿಸುವ ಮೊದಲೇ ಆಡಳಿತ ಮಂಡಳಿಯವರ ಜೊತೆ ವಿಶೇಷ ಪೂಜೆ ನಡೆಸಲು ಬರುತ್ತಿದ್ದೇನೆ ಎಂದು ಯದುವೀರ್ ತಿಳಿಸಿದ್ದರು. ಅದೇ ರೀತಿಯಾಗಿ ಪೂಜೆಯ ಪ್ರಾರ್ಥನೆ ಸಲ್ಲಿಸುವ ವೇಳೆ ಆರ್ಚಕರ ಜೊತೆ ತಮ್ಮ ಗಂಡು ಮಗುವಿನ ಬೇಡಿಕೆಯನ್ನು ಅವರು ಇಟ್ಟಿದ್ದರು. ಇದನ್ನೂ ಓದಿ: ಮೈಸೂರು ರಾಜರಿಗೆ ಪುತ್ರ ಸಂತಾನ: ಅಲಮೇಲಮ್ಮ ಶಾಪ ವಿಮೋಚನೆ ಆಯ್ತಾ? ಶಾಪ ನೀಡಿದ್ದು ಯಾಕೆ?