– ಮೋದಿ ಭಾಷಣದಲ್ಲಿ ಕನ್ನಡ ಪ್ರೇಮ
ಮೈಸೂರು: ಕರ್ನಾಟಕದಲ್ಲಿರುವ ಬಡವರಿಗೆ ಸೂರು ಕಲ್ಪಿಸಿದ್ದೇವೆ, ಕುಡಿಯಲು ಶುದ್ಧ ನೀರು ಕೊಟ್ಟಿದ್ದೇವೆ. ನಿಮ್ಮ ಸೇವೆ ಮಾಡಲು ನನಗೆ ಸದಾ ಆಶೀರ್ವಾದ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Advertisement
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಬಳಿಕ ನಡೆದ ಸಾರ್ವಜನಿಕ ವೇದಿಕೆ ಕಾರ್ಯಕ್ರಮದಲ್ಲಿ ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಭಾಷಣ ಮಾಡಿದ್ದಾರೆ.
Advertisement
ಮೈಸೂರಿನ ಮಹಾರಾಜ ಕಾಲೇಜ್ ಗ್ರೌಂಡ್ ನಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದ ನಾಗನಹಳ್ಳಿ ರೈಲ್ವೆ ನಿಲ್ದಾಣದ ಕೋಚಿಂಗ್ ಟರ್ಮಿನಲ್ ಗೆ ಶಂಕುಸ್ಥಾಪನೆ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಶ್ರೇಷ್ಠತಾ ಕೇಂದ್ರ ಸಮರ್ಪಣಾ ಸಮಾರಂಭ. https://t.co/COwrIzAY3G
— Basavaraj S Bommai (@BSBommai) June 20, 2022
Advertisement
ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಕನ್ನಡದಲ್ಲೇ ಮಾತು ಪ್ರಾರಂಭಿಸಿದ ಮೋದಿ, ಮೈಸೂರು ಹಾಗೂ ಕರ್ನಾಟಕದ ಜನರಿಗೆ ನನ್ನ ಪ್ರೀತಿಯ ನಮಸ್ಕಾರಗಳು, ಫಲಾನುಭವಿಗಳ ಜೊತೆ ಸಂವಾದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಜನರು ಕೈ ಜೋಡಿಸಿದ್ರೆ ಏನೂ ಬೇಕಾದ್ರೂ ಮಾಡಬಹುದು: ಮೋದಿ ಮೆಚ್ಚುಗೆ
Advertisement
ಮೈಸೂರು ಐತಿಹಾಸಿಕ, ಸಾಂಸ್ಕೃತಿಕ, ಪರಂಪಾರಿಕ ಊರು. ಆರ್ಥಿಕತೆ, ಸಂಸ್ಕತಿ ವಿಚಾರದಲ್ಲಿ ಕರ್ನಾಟಕ ದೇಶದಲ್ಲಿ ಬಹಳ ಮುಖ್ಯವಾದ ರಾಜ್ಯ. ಪ್ರವಾಸಿಗರ ಆಕರ್ಷಣೀಯ ಕ್ಷೇತ್ರ. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಈ ಮಣ್ಣಿನ ಶ್ರೇಷ್ಠ ಗೌರವಾನ್ವಿತ ವ್ಯಕ್ತಿಗಳು ಎಂದು ಮೈಸೂರು ಪರಂಪರೆಯನ್ನು ನೆನೆದರು.
ಕಳೆದ 75 ವರ್ಷದಲ್ಲಿ ಅನೇಕ ಸರ್ಕಾರಗಳು ದೇಶ, ರಾಜ್ಯದಲ್ಲಿ ಬಂದು ಹೋದವು. ಎಲ್ಲರೂ ಬಡವರು, ದಲಿತರು, ಮಹಿಳೆಯರ ಕಲ್ಯಾಣದ ಬಗ್ಗೆ ಮಾತನಾಡಿದ್ದರು. ಆದರೆ ಯಾರ ಕಲ್ಯಾಣವೂ ಆಗಲಿಲ್ಲ. ನಮ್ಮ ಸರ್ಕಾರ ಜನರ ಕಲ್ಯಾಣಕ್ಕಾಗಿ ಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಜೊತೆ ಮಾತ್ರ ಹೆಚ್ಚು ಮಾತನಾಡಿದ ಮೋದಿ
ಆಯುಷ್ಮಾನ್ ಭಾರತದ ಲಾಭ ಇಡೀ ದೇಶಕ್ಕೆ ತಲುಪಿದೆ. ಪಡಿತರ ವಿತರಣೆ, ಆರೋಗ್ಯ ಸಮೃದ್ಧಿ ನಿಟ್ಟಿನಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದೇವೆ. ಬಡವರಲ್ಲಿ ಆತ್ಮವಿಶ್ವಾಸ ತುಂಬಿದ್ದೇವೆ. ರೈತರ ಕಲ್ಯಾಣಕ್ಕಾಗಿ ಮಹತ್ತರ ಪೂರ್ಣ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 8 ವರ್ಷದ ಆಡಳಿತದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದೇವೆ. ಯಾವುದೇ ಭೇದ ಭಾವ ಇಲ್ಲದೆ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ.
ಹಿಂದಿನ ಸರ್ಕಾರಗಳು 10 ವರ್ಷಗಳಲ್ಲಿ ಕರ್ನಾಟಕದ ರೈಲ್ವೆಯ 60 ಕಿ.ಮೀ ವಿದ್ಯುದೀಕರಣ ಮಾಡಿಸಿದ್ದವು. ಆದರೆ ನಾವು ಬಂದ 8 ವರ್ಷದಲ್ಲಿ 600 ಕಿ.ಮೀ ರೈಲ್ವೆ ವಿದ್ಯುದೀಕರಣವಾಗಿದೆ.