– ರಷ್ಯಾದ ಇಬ್ಬರು ದಂಪತಿ ಸಾವು
ಮಾಸ್ಕೋ: ಭಾರೀ ಸ್ಫೋಟ ಸಂಭವಿಸಿದ ಘಟನೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕನಸಿನ ಯುರೋಪಿನ ಉದ್ದದ ಕ್ರಿಮಿಯಾ ಸೇತುವೆಗೆ (Crimea Kerch Bridge) ಮತ್ತೆ ಹಾನಿಯಾಗಿದೆ. ಇದರಿಂದ ಕ್ರಿಮಿಯಾ-ರಷ್ಯಾ ಸಂಪರ್ಕ ಕಡಿತಗೊಂಡಿದೆ.
ಸೇತುವೆ ಮೇಲೆ ಸ್ಫೋಟಗಳು ಸಂಭವಿಸಿದ್ದು, ರಷ್ಯಾದ ಬೆಲ್ಗೊರೊಡ್ ಪ್ರದೇಶದ ದಂಪತಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹೆಣ್ಣುಮಗುವೊಂದು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇದರ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾ ಆರೋಪಿಸಿದೆ. ಇದನ್ನೂ ಓದಿ: ಪುಟಿನ್‌ಗೆ ಅಡುಗೆ ಭಟ್ಟನಾಗಿದ್ದ ಪ್ರಿಗೋಜಿನ್ – ರಷ್ಯಾ ಅಧ್ಯಕ್ಷನ ವಿರುದ್ಧವೇ ತಿರುಗಿ ಬಿದ್ದದ್ದು ಯಾಕೆ?
Advertisement
???? BREAKING: Traffic over the Kerch Bridge between occupied Crimea and Russia has been stopped. Russian media report the cause may have been a Ukrainian attack. Locals say they heard multiple explosions and at least one bridge span has collapsed. ???? Currently 5am. pic.twitter.com/ij7jhHlS8P
— Igor Sushko (@igorsushko) July 17, 2023
Advertisement
ರಷ್ಯಾದ (Russia) ಯೋಧರಿಗೆ ಸಾಮಗ್ರಿಗಳನ್ನ (Military Equipment) ತಲುಪಿಸುವ ಪ್ರಮುಖ ಮಾರ್ಗವಾಗಿರುವ ಕ್ರಿಮಿಯಾ ಸೇತುವೆ ಮೇಲೆ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ದಾಳಿ ನಡೆದಿತ್ತು. ಸೇತುವೆ ಮಧ್ಯಭಾಗ ಸಂಪೂರ್ಣ ಧ್ವಂಸಗೊಂಡಿತ್ತು. ಇದಕ್ಕೆ ಉಕ್ರೇನ್ ಸೇನೆ ಕಾರಣ ಎಂದು ರಷ್ಯಾ ರಕ್ಷಣಾ ವಲಯದ ಅಧಿಕಾರಿಗಳು ಆರೋಪಿಸಿದ್ದರು. ಹಲವು ತಿಂಗಳ ಬಳಿಕ ಸೇತುವೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಲಾಗಿತ್ತು. ಇದೀಗ ಮತ್ತೊಂದು ದಾಳಿ ನಡೆದಿದ್ದು, ದಂಪತಿಗಳಿಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆ ಉಡೀಸ್ -ಕ್ರಿಮಿಯಾ ಸಂಪರ್ಕ ಕಡಿತ
Advertisement
Advertisement
ಬೆಳಗ್ಗಿನ ಜಾವ 3:04 ಗಂಟೆಯಿಂದ 3:20ರ ಸುಮಾರಿಗೆ ಸೇತುವೆ ಮೇಲೆ ದಾಳಿ ನಡೆದಿದ್ದು, ಕ್ರಿಮಿಯಾ-ರಷ್ಯಾ ಸಂಪರ್ಕ ಸ್ಥಗಿತಗೊಂಡಿದೆ. ದಾಳಿಯ ವೀಡಿಯೋಗಳನ್ನು ಪರಿಶೀಲಿಸಿದ್ದೇವೆ. ಅಲ್ಲಿ ದಂಪತಿಗಳಿಬ್ಬರು ಸಾವನ್ನಪ್ಪಿದ್ದು, ಒಂದು ಹೆಣ್ಣು ಮಗು ಗಾಯಗೊಂಡಿದೆ ಎಂದು ಬೆಲ್ಗೊರೊಡ್‌ನ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್‌ಕೋವ್ ತಿಳಿಸಿದ್ದಾರೆ.
ಸೇತುವೆಯ 145ನೇ ಕಂಬದ ಬಳಿ ದಾಳಿ ಸಂಭವಿಸಿದ್ದು, ಸೇತುವೆಗೆ ಹಾನಿಯಾಗಿದೆ. ಕ್ರಿಮಿಯನ್ ದ್ವೀಪಕ್ಕೆ ಸಮೀಪದಲ್ಲಿರುವ ಮಾರ್ಗದಲ್ಲೇ ಹಾನಿಯಾದ್ದು, ಸೇತುವೆ ಪಿಲ್ಲರ್‌ಗಳು ಸುರಕ್ಷಿತವಾಗಿವೆ. ಆದ್ರೆ ದಾಳಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಪಾಕಿಸ್ತಾನದಲ್ಲಿ 150 ವರ್ಷದಷ್ಟು ಹಳೆಯ ಹಿಂದೂ ದೇವಾಲಯ ನೆಲಸಮ – ಬೆಳಗ್ಗೆ ಎದ್ದು ನೋಡಿದ ಹಿಂದೂಗಳಿಗೆ ಶಾಕ್!
ಉಕ್ರೇನ್‌ನ ಒಡೆಸಾ ಮಿಲಿಟರಿ ಆಡಳಿತದ ವಕ್ತಾರ ಸೆರ್ಹಿ ಬ್ರಾಚುಕ್ ಅವರು ತಮ್ಮ ಟೆಲಿಗ್ರಾಮ್ ಖಾತೆಯಲ್ಲಿ ಸೇತುವೆಯ ಭಾಗವು ಮುರಿದುಹೋಗಿರುವ ಫೋಟೋವನ್ನ ಹಂಚಿಕೊಂಡಿದ್ದಾರೆ. 2014ರಲ್ಲಿ ಮಾಸ್ಕೋ ಈ ಸೇತುವೆಯನ್ನು ವಶಪಡಿಸಿಕೊಂಡಿತ್ತು. ಕಪ್ಪುಸಮುದ್ರ ಮತ್ತು ಅಜೋವ್ ಸಮುದ್ರವನ್ನು ಸಂಪರ್ಕಿಸುವ ಕ್ರೆಚ್ ಜಲಸಂಧಿಗೆ (Kerch Bridge) ಅಡ್ಡಲಾಗಿ ನಿರ್ಮಿಸಿರುವ 19 ಕಿ.ಮೀ. ಉದ್ದದ ಈ ಸೇತುವೆಯನ್ನು 2018ರಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇದು ಯೂರೋಪ್‌ನಲ್ಲಿಯೇ ಅತಿ ಉದ್ದದ ಸೇತುವೆಯಾಗಿದೆ.
ಕಳೆದ ವರ್ಷ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 70ನೇ ವರ್ಷಕ್ಕೆ ಕಾಲಿಟ್ಟ ಮರುದಿನವೇ ಸೇತುವೆ ಮೇಲೆ ಭೀಕರ ಸ್ಫೋಟ ನಡೆದಿತ್ತು. ಸೇತುವೆಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಇಂಧನ ಸಾಗಿಸುತ್ತಿದ್ದ ರೈಲೊಂದರ 7 ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಆ ನಂತರ ರಷ್ಯಾ ಉಕ್ರೇನ್ ಕಾರಣವೆಂದು ಆರೋಪಿಸಿ ಉಕ್ರೇನ್ ಮೇಲೆ ತೀವ್ರತರ ದಾಳಿ ನಡೆಸಿತ್ತು. ಆದ್ರೆ ಉಕ್ರೇನ್ ತನ್ನ ವಿರುದ್ಧದ ಆರೋಪವನ್ನ ತಳ್ಳಿಹಾಕಿತ್ತು. ಸದ್ಯದ ದಾಳಿಗೆ ಕಾರಣ ತಿಳಿದುಬಂದಿಲ್ಲ.
Web Stories