ಟೆಹ್ರಾನ್: ಇರಾನ್‌ನಲ್ಲಿ ಅವಳಿ ಬಾಂಬ್ ಸ್ಫೋಟಗೊಂಡು 103 ಮಂದಿ ಸಾವನ್ನಪ್ಪಿ, 141 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಇರಾನ್‌ನ ದಕ್ಷಿಣ ನಗರಿ ಕೆರ್ಮಾನ್‌ನಲ್ಲಿ ಕಮಾಂಡರ್ ಕಾಸ್ಸೇಮ್ ಸೋಲೈಮನಿ (Iranian general Qasem Soleimani) ಅವರ ಸ್ಮರಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ದುರ್ಘಟನೆ ನಡೆದಿದ್ದು, ಭಾರೀ ಆತಂಕವನ್ನೂ ಸೃಷ್ಟಿ ಮಾಡಿದೆ.
Advertisement
Advertisement
2020ರಲ್ಲಿ ಅಮೆರಿಕಾವು ಬಾಗ್ದಾದ್‌ದ ವಿಮಾನ ನಿಲ್ದಾಣದ ಮೇಲೆ ಡ್ರೋಣ್ ದಾಳಿ (US drone strike in Iraq) ನಡೆಸಿತ್ತು. ಈ ದಾಳಿಯಲ್ಲಿ ಕಮಾಂಡರ್ ಕಾಸ್ಸೇಮ್ ಸೋಲೈಮನಿ ಹತರಾಗಿದ್ದರು. ಇವರ ಸ್ಮರಣಾರ್ಥ ಕಾರ್ಯಕ್ರಮವನ್ನು ಪ್ರತಿ ವರ್ಷ ಇರಾನ್‌ನಲ್ಲಿ ಆಯೋಜಿಸಲಾಗುತ್ತಿದೆ. ಕೆರ್ಮಾನ್‌ನಲ್ಲಿರುವ ಕಾಸ್ಸೇಮ್ ಸೋಲೈಮನಿ ಅವರ ಸ್ಮಾರಕದ ಬಳಿಯೇ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ.
Advertisement
ಈ ವರ್ಷದ ಕಾರ್ಯಕ್ರಮವನ್ನು ಇಂದು ಆಯೋಜನೆ ಮಾಡಲಾಗಿದ್ದು, ಇದೇ ಸಂದರ್ಭ ಅವಳಿ ಬಾಂಬ್ ಸ್ಫೋಟ (Bomb Blast) ನಡೆದಿದೆ. ಘಟನೆಯ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರು. ಈ ವೇಳೆ ಮೊದಲು ಅನಿಲ ತುಂಬಿದ ಡಬ್ಬಿಯನ್ನು ಎಸೆಯಲಾಯಿತು. ಇದು ಸಿಡಿಯುತಲೇ ಇನ್ನಷ್ಟು ಡಬ್ಬಗಳನ್ನು ನಿರಂತರವಾಗಿ ಎಸೆಯಲಾಯಿತು. ಆಗ ಭಯಾನಕ ಸ್ಪೋಟಗಳು ಸಂಭವಿಸಿದವು ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ.
Advertisement
ಈ ದಾಳಿಯಿಂದ ಮೊದಲು 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಸಂಜೆಯ ವೇಳೆಗೆ ಸಾವಿನ ಸಂಖ್ಯೆ ಹೆಚ್ಚಾಗಿದ್ದು, 103 ದಾಟಿತ್ತು. 141ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನು ಬಾಂಬ್ ಸ್ಟೋಟಗಳಿಂದ ಗಾಯಗೊಂಡ ಹಲವರ ಆಕ್ರಂದನ, ಅಲ್ಲಿನ ರಕ್ತಸಿಕ್ತ ಪರಿಸ್ಥಿತಿಯನ್ನು ಕಂಡು ಹಲವರು ನಿಂತಲ್ಲೇ ಕುಸಿದು ಬಿದ್ದ ಪ್ರಸಂಗವೂ ನಡೆದಿದೆ. ಇದನ್ನೂ ಓದಿ: ಜಪಾನ್ ಭೂಕಂಪ; ಮೃತರ ಸಂಖ್ಯೆ 62 ಕ್ಕೇರಿಕೆ – ಮತ್ತೆ ಭೂಕುಸಿತ, ಭಾರೀ ಮಳೆಯ ಎಚ್ಚರಿಕೆ
ಘಟನೆ ನಡೆಯುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಿದರು. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ. ಸದ್ಯ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಕೆರ್ಮಾನ್ ಪ್ರದೇಶದ ರೆಡ್ ಕ್ಸೆಸೆಂಟ್‌ನ ಮುಖ್ಯಸ್ಥ ರೇಝಾ ಫಲ್ಹಾಹ್ ತಿಳಿಸಿದ್ದಾರೆ.
ಈ ಸಂಬಂಧ ಇರಾನ್ ಸರ್ಕಾರ ಪ್ರತಿಕ್ರಿಯಿಸಿ, ಉಗ್ರರ ಕೈವಾಡ ಈ ದಾಳಿಗಳ ಹಿಂದೆ ಇರಬಹುದು ಎಂದು ಶಂಕಿಸಿದೆ. ರಕ್ಷಣಾ ಕಾರ್ಯದ ನಂತರ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.