ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಧರ್ಮ ದಂಗಲ್ ಮುಂದುವರೆದಿದೆ. ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ಭಾನುವಾರ ಸಂಜೆ ರಾಮನವಮಿ ಶೋಭಾಯಾತ್ರೆ (Rama Navami Procession) ವೇಳೆ ಹಿಂಸಾತ್ಮಕ ಘಟನೆಗಳು ನಡೆದಿದೆ.
ಹಿಂದೂ (Hindu) ಧರ್ಮೀಯರ ಮೇಲೆ ಕೆಲ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಶೋಭಾ ಯಾತ್ರೆ ಮಸೀದಿ ಮುಂದೆ ತೆರಳುವಾಗಲೇ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಹಿಂಸಾಚಾರದಲ್ಲಿ ಮಹಿಳೆ ಸೇರಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಬೀಸಿದ್ದಾರೆ. ಇದನ್ನೂ ಓದಿ: Exclusive: ಪ್ರತಿದಿನ 50 ಕೋಟಿ ಕಾಸು ಮಾಡದೇ ಡಿಕೆಶಿ ಮಲಗೋದಿಲ್ಲವಂತೆ: ಹೆಚ್‌ಡಿಕೆ ಬಾಂಬ್
Advertisement
Ram Navami procession attacked in Murshidabad, West Bengal:
1) Stones pelted from terrace of building.
2) Blast occurred at Ram Navami rally in Saktipur area. One woman injured & admitted in hospital.
Police is investigating whether blast was due to a bomb or some other reason pic.twitter.com/8C2p9WVQ2x
— Anshul Saxena (@AskAnshul) April 17, 2024
Advertisement
ಶೋಭಾಯಾತ್ರೆ ಸಮೀಪವೇ ಬಾಂಬ್ ಸ್ಫೋಟ (Bomb Blast) ಕೂಡ ನಡೆದಿದೆ. ಮೇದಿನಪುರದ ಎಗ್ರಾ ಎಂಬಲ್ಲಿಯೂ ಘರ್ಷಣೆ ನಡೆದಿದೆ. ಹಿಂಸಾಚಾರದ ದೃಶ್ಯಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
Advertisement
ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಿಎಂ ಮಮತಾ ಬ್ಯಾನರ್ಜಿಯ (Mamata Banerjee) ಪ್ರಚೋದನಾಕಾರಿ ಭಾಷಣವೇ ಕಾರಣ ಎಂದು ಬಿಜೆಪಿ (BJP) ಗಂಭೀರ ಆರೋಪ ಮಾಡಿದೆ. ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ರಾಜ್ಯಪಾಲರು ಮಧ್ಯಪ್ರವೇಶಿಸಿ ಹಿಂಸಾಚಾರದ ಬಗ್ಗೆ ಎನ್‌ಐಎ (NIA) ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ. ಇದನ್ನೂ ಓದಿ: ಅಣಕು ಮತ ಎಣಿಕೆ ವೇಳೆ ಬಿಜೆಪಿಗೆ ಹೆಚ್ಚುವರಿ ಮತ – ವರದಿ ಸುಳ್ಳೆಂದ ಚುನಾವಣಾ ಆಯೋಗ
Advertisement
ಈ ಆರೋಪಗಳನ್ನು ತಳ್ಳಿ ಹಾಕಿರುವ ಸಿಎಂ ಮಮತಾ ಬ್ಯಾನರ್ಜಿ, ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಮುರ್ಷಿದಾಬಾದ್ ಹಿಂಸಾಚಾರ ಪೂರ್ವನಿಯೋಜಿತ. ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿಯೇ ನಡೆಸಿರುವ ಕುತಂತ್ರವಿದು ಎಂದು ಮಮತಾ ಕಿಡಿಕಾರಿದ್ದಾರೆ. ಘರ್ಷಣೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.