ಗ್ಯಾಸ್ ಸೋರಿಕೆಯಾಗಿ ಬ್ಲಾಸ್ಟ್ – ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು

Public TV
1 Min Read
DVG Woman Death

ದಾವಣಗೆರೆ: ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ (Gas Leak) ಬ್ಲಾಸ್ಟ್ (Blast) ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ಗಾಯಗೊಂಡಿದ್ದ ಮಹಿಳೆ (Woman) ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

ಸ್ಮಿತಾ (55) ಸಾವನ್ನಪ್ಪಿದ ಮಹಿಳೆ. ದಾವಣಗೆರೆ (Davanagere) ವಿನೋಬ ನಗರದ ಮಾಚಿದೇವ ಚೌಟ್ರಿ ಪಕ್ಕದಲ್ಲಿ ಘಟನೆ ನಡೆದಿತ್ತು. ಇದೇ ನವೆಂಬರ್ 23ರಂದು ಘಟನೆ ನಡೆದಿದ್ದು, ಅನಿಲ ಸೋರಿಕೆ ಹಿನ್ನೆಲೆ ಬ್ಲಾಸ್ಟ್ನಲ್ಲಿ ಸ್ಮಿತಾ ಗಂಭೀರ ಗಾಯಗೊಂಡಿದ್ದರು. ಘಟನೆಯ ಬಳಿಕ ಮಹಿಳೆಯನ್ನು ತಕ್ಷಣವೇ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ಮಿತಾ ಇಂದು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ:‌ ಮಕ್ಕಳ ಮಾರಾಟ ಪ್ರಕರಣ; ಯಾರ್ಯಾರಿಗೆ ಯಾವ್ಯಾವ ಪಾತ್ರ? – ಇಲ್ಲಿದೆ ವಿವರ

ಮೃತ ಸ್ಮಿತಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಂಡಿನೋವಿನ ಕಾರಣದಿಂದ ಸ್ಮಿತಾ ಸ್ಟ್ಯಾಂಡ್ ಸಹಾಯದಿಂದ ನಡೆಯುತ್ತಿದ್ದರು. ಬ್ಲಾಸ್ಟ್ ರಭಸಕ್ಕೆ ಮನೆಯ ಕಿಟಕಿ, ಬಾಗಿಲು ಛಿದ್ರಗೊಂಡಿದ್ದು, ಮನೆಯ ಗೋಡೆ ಬಿರುಕು ಬಿಟ್ಟಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಇದನ್ನೂ ಓದಿ: ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ: ಪೊಲೀಸ್ ಆಯುಕ್ತ

Share This Article