ಕೋಲಾರ: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಹಲವೆಡೆ ಹಾಕಲಾಗಿದ್ದ ಶ್ರೀರಾಮನ ಕಟೌಟ್ ಹಾಗೂ ಫ್ಲೆಕ್ಸ್ಗಳಿಗೆ ಬ್ಲೇಡ್ನಿಂದ ಹಾನಿಗೊಳಿಸಿರುವ (Shri Ram Cut Out) ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ನಗರದಲ್ಲಿ ನಡೆದಿದೆ.
ಮಂಗಳವಾರ ತಡರಾತ್ರಿ 10.44ರ ಸುಮಾರಿಗೆ ಬ್ಲೇಡ್ ಹಾಕಿರುವ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ (Ayodhya Ram Lalla) ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ಕಟೌಟ್ಗಳನ್ನ ಅಳವಡಿಸಲಾಗಿತ್ತು. ಆದ್ರೆ ಕಿಡಿಗೇಡಿಗಳು ಶ್ರೀರಾಮನ ಕಟೌಟ್ ಹಾಗೂ ಫ್ಲೆಕ್ಸ್ಗಳಿಗೆ ಬ್ಲೇಡ್ ಹಾಕಿ ಹಾನಿಗೊಳಿಸಿದ್ದಾರೆ. ಇದನ್ನೂ ಓದಿ: ರಾಮ, ಕೃಷ್ಣ, ಪರಮೇಶ್ವರನ ಮೇಲೆ ನನಗೆ ಬಹಳ ಭಕ್ತಿ – ನಾನೂ ಅಯೋಧ್ಯೆಗೆ ಹೋಗ್ತೀನಿ: ಲಕ್ಷ್ಮಿ ಹೆಬ್ಬಾಳ್ಕರ್
Advertisement
Advertisement
ಶ್ರೀರಾಮನ ಕಟೌಟ್ಗಳು ಹಾನಿಗೊಂಡಿರುವ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಮುಳಬಾಗಿಲು ನಗರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದಾರೆ. ಸ್ಥಳೀಯ ಯುವಕರು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ್ರತಿದಿನ ಒಂದೊಂದು ಕೆಜಿ ಮೀಸಲು – ಶ್ರೀರಾಮನ ನೈವೇದ್ಯಕ್ಕೆ 1,265 KG ತೂಕದ ಲಡ್ಡು ಅರ್ಪಿಸಿದ ರಾಮಭಕ್ತ
Advertisement
Advertisement
ಇದೇ ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದೆ. ಇದನ್ನೂ ಓದಿ: ಶ್ರೀರಾಮನ ಜಪಿಸಿ ಎಂದು ಕರೆ ನೀಡಿದ ಗಾಯಕಿ ಚಿತ್ರಾಗೆ ಭಾರೀ ಟೀಕೆ