ಬೆಂಗಳೂರು: ತನ್ನ ಹೈಸ್ಕೂಲ್ ಗೆಳತಿಗೆ ಖಾಸಗಿ ವೀಡಿಯೋ (Private video) ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ 2.57 ಕೋಟಿ ರೂ. ಹಣ ಸುಲಿಗೆ ಮಾಡಿದ್ದ ಖತರ್ನಾಕ್‌ನನ್ನ ಸಿಸಿಬಿ ಪೊಲೀಸರು (CCB Police) ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬ್ಲಾಕ್ ಮೇಲರ್ (Black Mailer) ಪ್ರಿಯತಮ ಮೋಹನ್ ಕುಮಾರ್ ಬಂಧಿತ ಆರೋಪಿ. ಬೆಂಗಳೂರಿನ ಚಾಮರಾಜಪೇಟೆಯ 19 ವರ್ಷದ ಯುವತಿಗೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ‘ನೋಡಿದವರು ಏನಂತಾರೆ’ ಎನ್ನುತ್ತಾ ಫ್ಯಾನ್ಸ್‌ಗೆ ಸಿನಿಮಾ ಅಪ್‌ಡೇಟ್ ಕೊಟ್ಟ ನವೀನ್ ಶಂಕರ್
ಬೆಂಗಳೂರಿನ (Bengaluru) ಚಾಮರಾಜಪೇಟೆಯ 19 ವರ್ಷದ ಯುವತಿಗೆ 2019ರಿಂದಲೇ ಆರೋಪಿ ಪರಿಚಯವಾಗಿದ್ದ. ದೇವನಹಳ್ಳಿಯ ಖಾಸಗಿ ಬೋರ್ಡಿಂಗ್ ಸ್ಕೂಲ್ ನಲ್ಲಿ ಓದುತ್ತಿದ್ದಾಗ ಪರಸ್ಪರ ಪರಿಚಯವಾಗಿದ್ದರು. ಆಗ ಇಬ್ಬರಿಗೆ ಪರಿಚಯವಾಗಿ ಬಳಿಕ ಪ್ರೀತಿ ಶುರುವಾಗಿತ್ತು. ರಜೆಯಲ್ಲಿ ಮನೆಯವರಿಗೆ ತಿಳಿಯದಂತೆ ಗೋವಾ ಸೇರಿ ಹಲವು ಕಡೆಗೆ ಇಬ್ಬರೂ ಟ್ರಿಪ್ ಹೋಗ್ತಿದ್ರು. ಮೋಹನ್ ಕುಮಾರ್ ಹಾಗೂ ಆತನ ಗೆಳೆಯರೊಂದಿಗೆ ಯುವತಿ ಟ್ರಿಪ್ ಹೋಗ್ತಿದ್ದಳು. ಆಗ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಅದನ್ನ ವಿಡಿಯೋ ಚಿತ್ರೀಕರಣ ಸಹ ಮಾಡಿಕೊಂಡಿದ್ದಾನೆ. ಕೆಲ ದಿನಗಳ ನಂತರ ಖಾಸಗಿ ವಿಡಿಯೋ ಹಾಗೂ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡೋದಕ್ಕೆ ಶುರು ಮಾಡಿದ್ದಾನೆ.
ಖಾಸಗಿ ವೀಡಿಯೋ ತೋರಿಸಿ, ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಹಣ ಕೊಡದಿದ್ದರೆ, ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಗ ಯುವತಿ ತನ್ನ ಅಜ್ಜಿ ಅಕೌಂಟ್‌ನಿಂದ ಹಣ ವರ್ಗಾವಣೆ ಮಾಡಿದ್ದಾಳೆ. ಆರೋಪಿ ಮೋಹನ್ ಹೇಳಿದಂತೆ ಆತನ ಕುಟುಂಸ್ಥರು ಹಾಗೂ ಆತನ ಗೆಳಯರ ಖಾತೆಗೆ ಹಂತ ಹಂತವಾಗಿ 1.25 ಕೋಟಿ ರೂ. ಗಣ ವರ್ಗಾವಣೆ ಮಾಡಿದ್ದಾಳೆ, ಜೊತೆಗೆ ಬರೋಬ್ಬರಿ 1.32 ಕೋಟಿ ರೂ. ನಗದು ಹಣ ನೀಡಿದ್ದಾಳೆ. ಇದನ್ನೂ ಓದಿ: ಗಮನಿಸಿ, ಭಾನುವಾರ ಪಿಡಿಒ ಪರೀಕ್ಷೆ – ಬೆಳಗ್ಗೆ 5:30 ರಿಂದ ಮೆಟ್ರೋ ಸಂಚಾರ ಆರಂಭ
ಪೊಲೀಸರಿಗೆ ದೂರು ನೀಡಿದ್ರೆ ಆಕೆ ಹಾಗೂ ಕುಟುಂಬಸ್ಥರನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಇದರಿಂದ ಬೆದರಿದ ಯುವತಿ ಹೇಳಿದಂತೆ ದುಡ್ಡುಕೊಟ್ಟಿದ್ದಾಳೆ. ಇದಾದ ನಂತರವೂ ಆರೋಪಿ ಮೋಹನ್ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಕೊನೆಗೆ ರೋಸಿಹೋಗಿ ಮೋಹನ್ ಮತ್ತು ಆತನ ಕುಟುಂಸ್ಥರ ವಿರುದ್ಧ ಯುವತಿ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಮೋಹನ್, ತಂದೆ ಆಶ್ವತ್ಥ್ ನಾರಾಯಣ ಹಾಗೂ ಕುಟುಂಸ್ಥರಾದ ಪ್ರೀತಿ, ಲಿಖಿತಾ, ಲವಕುಮಾರ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
ಯುವತಿಯಿಂದ ಹಣ ಮಾತ್ರವಲ್ಲದೇ ಬಲವಂತವಾಗಿ ಚಿನ್ನ, ಗಾಡಿ, ದುಬಾರಿ ವಾಚ್ ಪಡೆದುಕೊಂಡಿರುವ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶಾಸಕರ ಭರ್ಜರಿ ಆಫರ್ – ಮದ್ವೆಯಾಗಲು ಅಪ್ರಾಪ್ತರಿಂದಲೂ ಅರ್ಜಿ!