ಬೆಂಗಳೂರು: ಬಿಜೆಪಿ ಶಾಸಕನಿಗೆ ಮಹಿಳೆ ಬ್ಲಾಕ್ ಮೇಲ್ ಕುರಿತು ಶಾಸಕ ರಾಜ್ಕುಮಾರ್ ಪಾಟೀಲ್ ತೇಲ್ಕೂರ್ ಅವರು ಮಗು ತಮ್ಮದು ಎಂದು ಒಪ್ಪಿಕೊಂಡಿದ್ದಾರೆ ಎಂದು ಮಹಿಳೆ ಹೇಳಿದರು.
ತಮ್ಮ ವಕೀಲ ಜಗದೀಶ್ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, ಶಾಸಕರು ಚೈಲ್ಡ್ವುಡ್ನಿಂದಲೂ ಪರಿಚಯ. ಅವರು ಮಗು ನಂದು ಎಂದು ಒಪ್ಪಿಕೊಂಡಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಆರು ತಿಂಗಳ ಹಿಂದೆ ಭೇಟಿ ಆಗಿದ್ದರು. ಅಲ್ಲಿ ಮಗನಿಗೆ ನ್ಯಾಯಕೊಡಿಸುವ ಭರವಸೆ ಪತ್ನಿ ಮುಂದೆಯೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನನ್ನ ಮಗುವಿಗೆ ನ್ಯಾಯಬೇಕು. ನನ್ನ ಮೇಲೆ ಕೇಸ್ ಹಾಕಲಿ ನನಗೆ ತೊಂದರೆ ಇಲ್ಲ ಎಂದು ಹೇಳಿದರು.
ಸಿಎಂಗೆ ಟ್ವೀಟ್ ಮಾಡಿದ್ದರಿಂದ ನಿನ್ನೆ ಕೆಲವು ಕಾರ್ಯಕರ್ತರು ಬಂದು ಕಾಂಗ್ರೆಸ್ನವರು ಮಾಡಿಸಿದ್ದಾರೆ ಅಂತಾ ಹೇಳು ಎಂದು ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ವಿಧಾನಸೌಧ ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿ ನಿನ್ನೆ ಇಡೀ ದಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದಾರೆ ಎಂದರು. ಇದನ್ನೂ ಓದಿ: ಕಳೆದ ಎರಡು ವರ್ಷದಿಂದ ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದೇನೆ: ಮಹಿಳೆ
ಈ ಬಗ್ಗೆ ವಿಚಾರ ಏನು ಕೇಳಿದರೂ, ಪೊಲೀಸರು ಸಮಯಕ್ಕೆ ಸರಿಯಾಗಿ ಊಟ ತಿಂಡಿ ಬರುತ್ತದೆ. ತಿಂದು ಸುಮ್ಮನೆ ಕೂರುವಂತೆ ಹೇಳಿದ್ದಾ ರೆ ಹೊರತು ಯಾವ ವಿಚಾರಕ್ಕಾಗಿ ಕೆರದುಕೊಂಡು ಬಂದಿದ್ದೇವೆ ಎನ್ನುವುದರ ಬಗ್ಗೆ ಹೇಳಲೇ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಯಾರ ಮೇಲೂ ಆರೋಪ ಮಾಡಲ್ಲ, ಕಾನೂನು ಹೋರಾಟಕ್ಕೆ ಸಿದ್ಧ: ತೇಲ್ಕೂರ್
ರಾತ್ರಿ 9 ಗಂಟೆಗೆ ಪೊಲೀಸ್ ಠಾಣೆಯಿಂದ ಹೊರಗೆ ಬಿಟ್ಟಿದ್ದಾರೆ. ಆದರೆ ಈಗಲೂ ಮನೆ ಹತ್ತಿರ ಪೊಲೀಸರು ಇದ್ದಾರೆ. ಈ ಎಲ್ಲಾ ವ್ಯವಸ್ಥೆಯಿಂದ ನಾನು ಬದುಕಿದರೆ ಸಾಕು ಎನಿಸುತ್ತಿದೆ. ನನಗೆ ಮೋಸ ಆಗಿದೆ, ನನಗೆ ನ್ಯಾಯಕೊಡಿಸಿ ಎಂದು ಸಿಎಂಗೆ ಟ್ವೀಟ್ ಮಾಡಿದ್ದರಿಂದ ಇಷ್ಟೆಲ್ಲ ಸಮಸ್ಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.