– 2 ಕೋಟಿ ಹಣಕ್ಕಾಗಿ ಮಹಿಳೆ ಬೇಡಿಕೆ
– ಎಲ್ಲರಿಗೂ ಕುಟುಂಬವಿದ್ದು, ಅವರ ಜೊತೆ ಬದುಕ್ತಿದ್ದೇವೆ
ಬೆಂಗಳೂರು: ಮಹಿಳೆ ಬ್ಲಾಕ್ ಮೇಲ್ ವಿಷಯಕ್ಕೆ ಸಂಬಂಧಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತು ದೂರು ದಾಖಲಿಸಿದ್ದೇನೆ ಎಂದು ಶಾಸಕ ರಾಜ್ಕುಮಾರ್ ಪಾಟೀಲ್ ತೇಲ್ಕೂರ್ ಹೇಳುತ್ತಾ ಕಣ್ಣಿರು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ದಿನಗಳಿಂದ ಮಹಿಳೆ ಹಾಗೂ ಆಕೆಯ ಪತಿಯಿಂದ ಬ್ಲಾಕ್ ಮೇಲ್ ಆಗುತ್ತಿದೆ. ಈ ಪ್ರಕರಣದಿಂದ ನಾನು ಭಾರೀ ನೊಂದಿದ್ದೇನೆ. ನನ್ನ ಕುಟುಂಬ ಕೂಡ ಮುಜುಗರ ಅನುಭವಿಸುತ್ತಿದೆ. ನಾನು ಬಹಳಷ್ಟು ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇದೊಂದು ಪ್ರಕರಣದಿಂದ ನನ್ನ ಹೆಸರಿಗೆ ಬಹಳಷ್ಟು ಮಸಿ ಬಳಿಯುವ ಕೆಲಸವಾಗುತ್ತಿದೆ ಎಂದ ಅವರು, ಮಹಿಳೆ ಮತ್ತು ಆಕೆಯ ಪತಿ ಕಳೆದ ಹಲವು ದಿನಗಳಿಂದ 2 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಹೇಳಿದರು.
Advertisement
Advertisement
ನನ್ನ ವಿರುದ್ಧ ಈವರೆಗೆ ಯಾವುದೇ ಆರೋಪವಿಲ್ಲ. ನನ್ನ ವಿರುದ್ಧ ಬಂದ ಆರೋಪವನ್ನು ಸ್ವತಂತ್ರವಾಗಿ ಎದುರಿಸುತ್ತೇನೆ. ಸರ್ಕಾರ ಹಾಗೂ ಪಕ್ಷ ಇದರ ಬಗ್ಗೆ ಹಸ್ತಕ್ಷೇಪ ಮಾಡುವುದಿಲ್ಲ. ಕಾರ್ಯಕರ್ತರು ಈ ಘಟನೆಗೆ ಸಂಬಂಧಿಸಿ ಹಸ್ತಕ್ಷೇಪ ಮಾಡಬೇಡಿ. ನನ್ನ ಮೇಲೆ ಬಂದಿರುವಂತಹ ಎಲ್ಲಾ ಆರೋಪಗಳನ್ನು ನಾನೊಬ್ಬನೇ ಅದನ್ನು ಎದುರಿಸುತ್ತೇನೆ ಎಂದರು. ಇದನ್ನೂ ಓದಿ: ಯಾರ ಮೇಲೂ ಆರೋಪ ಮಾಡಲ್ಲ, ಕಾನೂನು ಹೋರಾಟಕ್ಕೆ ಸಿದ್ಧ: ತೇಲ್ಕೂರ್
Advertisement
Advertisement
ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ಎಲ್ಲರಿಗೂ ಕುಟುಂಬವಿದೆ. ಕುಟುಂಬದ ಜೊತೆಗೆ ನಾವು ಬದುಕುತ್ತಿದ್ದೇವೆ. ಇಂತಹ ವಿಷಯಗಳನ್ನು ಆರೋಪಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಪ್ರಶ್ನಿಸಿದ ಅವರು ಕಣ್ಣೀರು ಹಾಕಿದರು.
ಮಹಿಳೆಯೊಬ್ಬರಿಂದ ನಿರಂತರವಾಗಿ ಬ್ಲಾಕ್ ಮೇಲ್ ಗೆ ಒಳಗಾಗಿದ್ದೇನೆ ಎಂದು ಶಾಸಕರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಸಕರು ದೂರು ನೀಡುತ್ತಿದ್ದಂತೆಯೇ ಮಹಿಳೆ ಕೂಡ ಪ್ರತ್ಯಾರೋಪ ಮಾಡಿದ್ದಾರೆ. ಶಾಸಕರಿಂದ ನನಗೆ ಅನ್ಯಾಯ ಆಗಿದೆ. ನ್ಯಾಯಕ್ಕಾಗಿ ಕಳೆದೆರಡು ವರ್ಷಗಳಿಂದ ಹೋರಾಡುತ್ತಿದ್ದೇನೆ ಎಂದು ಮಹಿಳೆ ವಕೀಲ ಜಗದೀಶ್ ಮೂಲಕ ಠಾಣೆಗೆ ತೆರಳಿದ್ದಾರೆ. ಇದನ್ನೂ ಓದಿ: ಕಳೆದ ಎರಡು ವರ್ಷದಿಂದ ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದೇನೆ: ಮಹಿಳೆ