ಒಟ್ಟಾವಾ: ನಿಮ್ಮ ಬಳಿ ಬ್ಲ್ಯಾಕ್‌ಬೆರಿ ಕಂಪನಿಯ ಫೋನ್ ಇದೆಯೇ? ಹಾಗಿದ್ದರೆ ಇಂದಿನಿಂದ ಅವುಗಳು ನಿಮ್ಮ ಡ್ರಾಯರ್ ಇಲ್ಲವೇ ಶೋಕೇಸ್ ಸೇರಲಿದೆ. ಏಕೆಂದರೆ ಈ ಫೋನ್‌ಗಳು ಇಂದಿನಿಂದ ಕಾರ್ಯ ನಿರ್ವಹಿಸುವುದಿಲ್ಲ.
ಕ್ವಾರ್ಟಿ ಕೀಪ್ಯಾಡ್ ಜನಪ್ರಿಯಗೊಳಿಸಿದ ಬ್ಲ್ಯಾಕ್‌ಬೆರಿ ಫೋನ್‌ಗಳು ಇಂದಿನಿಂದ ಕಾರ್ಯ ನಿರ್ವಹಿಸುವುದಿಲ್ಲ. ನೀವು ಈ ಫೋನ್‌ಗಳಿಂದ ಕರೆ ಮಾಡಲು, ಸಂದೇಶ ಕಳುಹಿಸಲು, ಇಂಟರ್‌ನೆಟ್, ವೈಫೈಗಳಂತಹ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿ ತನ್ನ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.
Advertisement
Advertisement
ಬ್ಲ್ಯಾಕ್‌ಬೆರಿ 7.1 ಒಎಸ್, ಬ್ಲ್ಯಾಕ್‌ಬೆರಿ 10 ಸಾಫ್ಟ್ವೇರ್, ಬ್ಲ್ಯಾಕ್‌ಬೆರಿ ಪ್ಲೇಬುಕ್2.1 ಹಾಗೂ ಇದರ ಹಿಂದಿನ ಆವೃತ್ತಿಗಳು ಲೆಗೆಸಿ ಸೇವೆಗಳು 4 ಜನವರಿ 2022ರಿಂದ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ ಎಂದು ಕಂಪನಿ ತಿಳಿಸಿತ್ತು. ಇದನ್ನೂ ಓದಿ: Whatsapp – ಒಂದೇ ತಿಂಗಳಲ್ಲಿ ಭಾರತೀಯರ 17 ಲಕ್ಷ ಖಾತೆಗಳು ಬ್ಯಾನ್
Advertisement
ಫೋನ್‌ಗಳು ಕಾರ್ಯನಿರ್ವಹಿಸದೇ ಇರುವ ಫೋನ್‌ಗಳು ಕೇವಲ ಹಳೆಯ ಆವೃತ್ತಿಯಾಗಿದೆ. ಆಂಡ್ರಾಯ್ಡ್ ಓಎಸ್ ಹೊಂದಿರುವ ಬ್ಲ್ಯಾಕ್‌ಬೆರಿ ಮೊಬೈಲ್‌ಗಳನ್ನು ಬಳಸುವವರು ಚಿಂತೆ ಪಡುವ ಅಗತ್ಯ ಇಲ್ಲ. ಈ ಸಾಧನಗಳು ಮುಂದೆಯೂ ಕಾರ್ಯನಿರ್ವಹಿಸಲಿದೆ.
Advertisement
ಬ್ಲ್ಯಾಕ್‌ಬೆರಿ ಕಂಪನಿ ಸಿಇಒ ಜಾನ್ ಚೆನ್ 2020ರಲ್ಲಿ ಕಂಪನಿ ಸಾಫ್ಟ್‌ವೇರ್ ಕಂಪನಿಯಾಗಿ ಪರಿವರ್ತನೆಯಾಗಿದೆ ಎಂದು ಘೋಷಿಸಿದ್ದರು. ಬ್ಲ್ಯಾಕ್‌ಬೆರಿ ಲಿಂಕ್, ಬ್ಲ್ಯಾಕ್‌ಬೆರಿ ಡೆಸ್ಕ್ ಟಾಪ್ ಮ್ಯಾನೇಜರ್, ಬ್ಲ್ಯಾಕ್‌ಬೆರಿ ಬ್ಲೆಂಡ್, ಬ್ಲ್ಯಾಕ್‌ಬೆರಿ ಪ್ರೊಟೆಕ್ಟ್‌ಗಳ ಮೇಲೂ ಈ ಮುಕ್ತಾಯದ ಪ್ರಭಾವ ಬೀರಲಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: 35 ರೂ. ಬೆಲೆ ಬಾಳುವ ಕೋವಿಡ್ ಆಂಟಿವೈರಲ್ ಡ್ರಗ್ ಮುಂದಿನ ವಾರ ಮಾರುಕಟ್ಟೆಗೆ
ನಿಮ್ಮ ಬ್ಲ್ಯಾಕ್‌ಬೆರಿ ಫೋನ್‌ನಲ್ಲಿ ಸಂಗ್ರಹವಾಗಿರುವ ಡೇಟಾದ ಬಗ್ಗೆ ನೀವು ಚಿಂತಿಸುತ್ತಿದ್ದರೆ, ಇದಕ್ಕೂ ಬ್ಲ್ಯಾಕ್‌ಬೆರಿ ಪರಿಹಾರ ಹುಡುಕಿದೆ. ಇದಕ್ಕಾಗಿ ಕಂಪನಿ ಬಳಕೆದಾರರ ಕೆಲವು ವೈಯಕ್ತಿಕ ಮಾಹಿತಿಗಳನ್ನು ಕೆಲವು ಸಮಯಗಳ ವರೆಗೆ ಉಳಿಸಿಕೊಳ್ಳುತ್ತದೆ ಹಾಗೂ ಬಳಕೆದಾರರಿಗೆ ಆ ಮಾಹಿತಿಗಳ ಅಗತ್ಯ ಇಲ್ಲವಾದಲ್ಲಿ ಅಳಿಸಿ ಹಾಕುತ್ತದೆ ಎಂದು ಕಂಪನಿ ತಿಳಿಸಿದೆ.