ಭುವನೇಶ್ವರ: 26 ವರ್ಷದ ನಂತರ ಬ್ಲಾಕ್ ಪ್ಯಾಂಥರ್ಸ್ (ಕರಿ ಚಿರತೆ)ಯೊಂದು ಒಡಿಶಾದ ಸುಂದರ್ಗಡ್ ಜಿಲ್ಲೆಯ ಗರ್ಜನ್ಪಹದ್ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
ಈ ಮೂಲಕ ದೇಶದಲ್ಲಿ ಕಪ್ಪು ಹುಲಿ ಹಾಗೂ ಕಪ್ಪು ಚಿರತೆ ಎರಡನ್ನು ಹೊಂದಿರುವ ಏಕೈಕ ರಾಜ್ಯವೆಂದು ಒಡಿಶಾ ಗುರುತಿಸಿಕೊಂಡಿದೆ.
ಈ ಹಿಂದೆ ಕಾಳಿಕಾಂಬ ಮೀಸಲು ಅರಣ್ಯದ ಭಾಂಜನಗರ್ ಮತ್ತು ನರಂಗಂಗ್ಪುರ್ ಪ್ರದೇಶದಲ್ಲಿ ಕರಿ ಚಿರತೆ ಚಲನವಲನ ಇದೆ ಎಂದು ಹೇಳಲಾಗಿತ್ತು. ಆದರೆ, ಅದು ಈಗ ಕರಿ ಚಿರತೆ ಗರ್ಜನ್ಪಹದ್ ಮೀಸಲು ಅರಣ್ಯ ಪ್ರದೇಶದಲ್ಲಿ ಇರುವುದು ಸ್ಪಷ್ಟವಾಗಿದೆ. ಬ್ಲಾಕ್ ಪ್ಯಾಂಥರ್ಸ್ ತನ್ನ ತಾಯಿಯ ಜೊತೆಗೆ ಹೋಗುತ್ತಿರುವ ದೃಶ್ಯವು ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ ಎಂದು ರಾಜ್ಯ ಮುಖ್ಯ ವನ್ಯಜೀವಿ ವಾರ್ಡನ್ ಸಂದೀಪ್ ತ್ರಿಪಾಠಿ ಹೇಳಿದ್ದಾರೆ.
ಬ್ಲ್ಯಾಕ್ ಪ್ಯಾಂಥರ್ಸ್ ತಾಯಿ ಸಾಮಾನ್ಯ ಚಿರತೆಯಾಗಿದೆ. ಮೆಲನಿಜಂ ಎಂಬ ವರ್ಣದ್ರವ್ಯದಿಂದಾಗಿ ಪ್ರಾಣಿಗಳ ಚರ್ಮ ಕಪ್ಪಾಗುತ್ತದೆ. ಹೀಗಾಗಿ ತಾಯಿ ಬಣ್ಣ ಸಾಮಾನ್ಯವಾಗಿದ್ದರೂ ಬ್ಲ್ಯಾಕ್ ಪ್ಯಾಂಥರ್ಸ್ ಕಪ್ಪು ಬಣ್ಣ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ತಾಯಿ ಜೊತೆಗೆ ಬ್ಲ್ಯಾಕ್ ಪ್ಯಾಂಥರ್ಸ್ ಚಲಿಸುತ್ತಿರುವ ದೃಶ್ಯವು ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. 2016ರ ವನ್ಯಜೀವಿ ಗಣತಿ ಪ್ರಕಾರ ರಾಜ್ಯದಲ್ಲಿ ಒಟ್ಟು 318 ಚಿರತೆಗಳು ಹಾಗೂ 40 ಹುಲಿಗಳಿದ್ದವು ಎಂದು ವರದಿಯಾಗಿತ್ತು. 2007ರಲ್ಲಿ ಸಿಮಿಲಿಪಾಲ್ ಮೀಸಲು ಅರಣ್ಯದಲ್ಲಿ ಮೆಲನಿಸ್ಟಿಕ್ (ಕಪ್ಪು) ಹುಲಿಯನ್ನು ಗುರುತಿಸಲಾಗಿತ್ತು ಎಂದು ಹೇಳಿದ್ದಾರೆ.