ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ (Bhadra Tiger Reserve) ಅಪರೂಪದ ಕಪ್ಪು ಚಿರತೆ (Black Panther) ಕಾಣಿಸಿಕೊಂಡಿದ್ದು ಬ್ಲ್ಯಾಕ್ ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ. ಸುಮಾರು ಇಪ್ಪತ್ತು ವರ್ಷಗಳ ನಂತರ ಭದ್ರಾ ಅಭಯಾರಣ್ಯದಲ್ಲಿ ಬ್ಲ್ಯಾಕ್ ಪ್ಯಾಂಥರ್ ಪತ್ತೆಯಾಗಿರುವುದು ವಿಶೇಷ.
ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ಬ್ಲ್ಯಾಕ್ ಪ್ಯಾಂಥರ್ ಮತ್ತು ಚಿರತೆ ಸೆರೆಯಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಪ್ಪು ಚಿರತೆಯನ್ನು ನೋಡಿ ಪ್ರವಾಸಿಗರು ಫಿದಾ ಆಗಿದ್ದು, ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಂತಸಪಟ್ಟಿದ್ದಾರೆ. ಕಳೆದ ಎರಡು ದಶಕಗಳಿಂದ ಅರಣ್ಯಾಧಿಕಾರಿಗಳು, ವಾಚರ್‌ಗಳು ಮತ್ತು ಗಾರ್ಡ್‌ಗಳಿಗೂ ಕಾಣಿಸಿಕೊಳ್ಳದ ಈ ಕಪ್ಪು ಚಿರತೆ, ಕಳೆದೊಂದು ವಾರದಲ್ಲಿ ಹಲವು ಬಾರಿ ಪ್ರತ್ಯಕ್ಷವಾಗಿದೆಯಂತೆ. ಇದನ್ನೂ ಓದಿ: ಅಡಿಕೆ ಕಾವಲಿಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ – ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಈ ಬ್ಲ್ಯಾಕ್ ಪ್ಯಾಂಥರ್‌ನ್ನು ಸಾಮಾನ್ಯವಾಗಿ ಕಪ್ಪು ಚಿರತೆ ಎಂದೇ ಕರೆಯುತ್ತಾರೆ. ಈ ಅಪರೂಪದ ಪ್ರಾಣಿಯ ಗೋಚರ ಭದ್ರಾ ಅಭಯಾರಣ್ಯದ ಜೀವವೈವಿಧ್ಯದ ಶ್ರೀಮಂತಿಕೆಗೆ ಮತ್ತಷ್ಟು ಮೆರುಗು ನೀಡಿದೆ. ವರ್ಷಪೂರ್ತಿ ನಿರಂತರವಾಗಿ ಮಳೆಯಾಗಿರುವುದರಿಂದ ಅರಣ್ಯ ಪ್ರದೇಶ ಸಮೃದ್ಧವಾಗಿದೆ. ಹಾಗಾಗಿ ಬ್ಲ್ಯಾಕ್ ಪ್ಯಾಂಥರ್ ಗೋಚರವಾಗಿದೆ ಎಂದು ಹೇಳಲಾಗಿದೆ.
ಸುಮಾರು 492.2 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹರಡಿರುವ ಭದ್ರಾ ಅಭಯಾರಣ್ಯವು ಲಕ್ಷಾಂತರ ವನ್ಯಜೀವಿಗಳ ಆಶ್ರಯ ತಾಣವಾಗಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡು – 22 ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ


