ಮೈಸೂರು: ನಗರದ ಚಾಮುಂಡಿ ಬೆಟ್ಟದ ಮಧ್ಯ ಭಾಗದಲ್ಲಿ ಮಂಡಿಯೂರಿ ಕುಳಿತಿರುವ ಬೃಹತ್ ಗಾತ್ರದ ಕಪ್ಪು ನಂದಿ ವಿಗ್ರಹ ಈಗ ಬಿಳಿ ನಂದಿ ವಿಗ್ರಹವಾಗಿದೆ.
ವಿಗ್ರಹ ಯಾವ ಬಣ್ಣದಲ್ಲಿದೆ ಅಂತಾ ಕೇಳಿದರೆ ಬಹುತೇಕರ ಉತ್ತರ ಕಪ್ಪು. ಏಕೆಂದರೆ ಕಳೆದ ಐದಾರು ದಶಕಗಳಿಂದ ಈ ವಿಗ್ರಹ ಇರುವುದು ಕಪ್ಪು ಬಣ್ಣದಲ್ಲಿ. ಹೀಗಾಗಿ ಬೆಟ್ಟದ ನಂದಿಯ ಯಾವುದೇ ಫೋಟೋ ನೋಡಿದರೂ ಅದು ಕಪ್ಪು ಬಣ್ಣದಲ್ಲೇ ಇದೆ. ಆದರೆ ಇಂತಹ ನಂದಿಯ ಬಣ್ಣ ಈಗ ಬಿಳಿ ಬಣ್ಣಕ್ಕೆ ಬದಲಾಗಿದೆ.
Advertisement
Advertisement
ಹೌದು. ಈ ವಿಗ್ರಹದ ಮೂಲ ಬಣ್ಣ ಬಿಳಿ. ಆದರೆ ಎಣ್ಣೆ ಮಜ್ಜನ ಮಾಡಿಸಿ ಮಾಡಿಸಿ ಈ ವಿಗ್ರಹ ಮೂಲ ಬಣ್ಣವನ್ನು ಕಳೆದುಕೊಂಡು ಕಪ್ಪಾಗಿತ್ತು. ಈಗ ಧಾರ್ಮಿಕ ದತ್ತಿ ಇಲಾಖೆಯವರು ರಾಸಾಯನಿಕ ಬಳಸಿ ವಿಗ್ರಹವನ್ನು ಸ್ವಚ್ಛಗೊಳಿಸಿ ಮೂಲರೂಪಕ್ಕೆ ತಂದಿದ್ದಾರೆ. ಇದರಿಂದ ನಂದಿ ವಿಗ್ರಹ ಬಿಳಿ ಬಣ್ಣದಲ್ಲಿ ಮಿಂಚುತ್ತಿದೆ.
Advertisement
Advertisement
ಈ ನಂದಿ ವಿಗ್ರಹಕ್ಕೆ ಸುಮಾರು 350 ವರ್ಷಗಳ ಇತಿಹಾಸ ಇದೆ. ನಂದಿ ವಿಗ್ರಹ ಸುಮಾರು 16 ಅಡಿ ಎತ್ತರ ಹಾಗೂ 24 ಅಡಿ ಅಗಲವಿದೆ. ಇದು ದೇಶದ ಮೂರನೇ ಅತಿ ಎತ್ತರದ ನಂದಿ ವಿಗ್ರಹವಾಗಿದೆ. 1659 ರಲ್ಲಿ ಯದುವಂಶದ ದೊಡ್ಡ ದೇವರಾಜ ಒಡೆಯರ್ ಅವರು ಈ ವಿಗ್ರಹ ಪ್ರತಿಷ್ಠಾಪಿಸಿದ್ದರು.