ನವದೆಹಲಿ: ನೋಟ್‍ಬ್ಯಾನ್ ಬಳಿಕ ನವೆಂಬರ್ 9ರಿಂದ ಡಿಸೆಂಬರ್ 31ರವರೆಗೆ ಬ್ಯಾಂಕ್‍ಗಳಲ್ಲಿ ಡೆಪಾಸಿಟ್ ಮಾಡಿರುವ ಹಣದ ಮೇಲೆ ಐಟಿ ಈ ಮೊದಲೇ ಕಣ್ಣಿಟ್ಟಿತ್ತು. ಮಂಗಳವಾರದಂದು ಸ್ವಚ್ಛ್ ಧನ್/ಕ್ಲೀನ್ ಮನಿ ಅಭಿಯಾನವನ್ನು ಆರಂಭಿಸಿರೋ ಕೇಂದ್ರ ಸರ್ಕಾರ ವಿಶೇಷ ಸಾಫ್ಟ್‍ವೇರ್ ಬಳಸಿ ಬ್ಯಾಂಕ್‍ಗಳ ಬಗ್ಗೆ ಶೋಧ ಕಾರ್ಯ ನಡೆಸಿದ್ದು, ಖಾತೆದಾರರ ಡೆಪಾಸಿಟ್ ಮಾಹಿತಿ ಹೊಂದಾಣಿಕೆ ಆಗದ ಕಾರಣ 18 ಲಕ್ಷ ಮಂದಿಗೆ ನೋಟಿಸ್ ನೀಡಿದೆ.
ಇ-ಮೇಲ್, ಎಸ್‍ಎಂಎಸ್ ಮೂಲಕ ನೊಟೀಸ್ ರವಾನಿಸಲಾಗಿದ್ದು, 10 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಅವರಿಂದ ಪ್ರತಿಕ್ರಿಯೆ ಬರದಿದ್ರೆ ಐಟಿಯಿಂದ ಮತ್ತೊಮ್ಮೆ ನೋಟಿಸ್ ಸಿಗಲಿದ್ದು ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ಪ್ರೋಗ್ರಾಮಿಂಗ್ ಸಾಫ್ಟ್‍ವೇರ್‍ನಿಂದ ನೋಟ್‍ಬ್ಯಾನ್ ನಂತರ ಬ್ಯಾಂಕ್‍ಗಳಲ್ಲಾಗಿರುವ ಎಲ್ಲಾ ಠೇವಣಿಗಳ ಬಗ್ಗೆ ಇ- ವೇರಿಫಿಕೇಷನ್ ಮಾಡಬಹುದಾಗಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಕ್ ಅಧಿಯಾ ಹೇಳಿದ್ದಾರೆ.
Advertisement
ಈ ಮಧ್ಯೆ, ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ 4 ಕೋಟಿ 12 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಮೂವರನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನ ಅಬ್ದುಲ್, ಶಂಶುದ್ದೀನ್, ಅಫ್ಜಲ್ ಅಂತ ಗುರುತಿಸಲಾಗಿದೆ. ಇವರ ಬಳಿ ಹೊಸ 2000 ರೂಪಾಯಿಯ 3 ಕೋಟಿ 10 ಲಕ್ಷ ರೂ. ಹಾಗೂ 1 ಕೋಟಿ ರೂ. ಮೌಲ್ಯದಷ್ಟು ಹೊಸ 500 ಹಾಗು 100 ರೂಪಾಯಿಗಳ 193 ಕಂತೆಗಳಿದ್ದವು.