ಹುಬ್ಬಳ್ಳಿ: ಅಶ್ಲೀಲ ವೀಡಿಯೋ(Porn Video) ಇಟ್ಟುಕೊಂಡು ವೈದ್ಯರೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ಬ್ಲಾಕ್ ಮೇಲ್(Black Mail) ಮಾಡಿ ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ.
ನಗರದ ವೈದ್ಯ(Doctor) ಕಾಡಸಿದ್ಧೇಶ್ವರ ಜಿ.ಬಿ ಅವರಿಗೆ ಮೂವರು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಹೆದರಿಸುವ ಮೂಲಕ 3.61 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ಸೈಬರ್ ಪೊಲೀಸ್(Cyber Police) ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಓದಿದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ವೈದ್ಯಕೀಯ ಸೀಟ್ ನೀಡಲು ಸಾಧ್ಯವಿಲ್ಲ: ಕೇಂದ್ರ
Advertisement
Advertisement
ಕಾಡಸಿದ್ಧೇಶ್ವರ್‌ಗೆ ನಿಶಾ ಎಂಬ ಹೆಸರಿನ ಮಹಿಳೆ ವಾಟ್ಸಪ್‍ನಲ್ಲಿ(Whatsapp) ವೀಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾಳೆ. ವೈದ್ಯರು ಸಹ ಆಕೆಯ ಜೊತೆಗೆ ಸಲುಗೆಯಿಂದ ಮಾತಾಡಿದ್ದು ಇದನ್ನು ಮಹಿಳೆ ಸ್ಕ್ರೀನ್ ರೆಕಾರ್ಡ್(Screen Record) ಮಾಡಿಕೊಂಡಿದ್ದಾಳೆ. ಕೆಲವು ದಿನಗಳ ಬಳಿಕ ವೈದ್ಯರಿಗೆ ಕರೆ ಮಾಡಿ ಅಶ್ಲೀಲ ಸಂಭಾಷಣೆ ವೀಡಿಯೋವನ್ನು ನಿಮ್ಮ ಸಂಬಂಧಿಕರಿಗೆ ಕಳುಹಿಸುತ್ತೇನೆ ಎಂದು ಹೆದರಿಸಿ ಮೊದಲಿಗೆ 10 ಸಾವಿರ, ಆದಾದ ಬಳಿಕ 70,10 ಸಾವಿರ ಹಣ ವರ್ಗಾಯಿಸಿ ಕೊಂಡಿದ್ದಾಳೆ.
Advertisement
Advertisement
ಅಷ್ಟೇ ಅಲ್ಲದೇ ಬಳಿಕ ಸಂಜೀವ ಹೆಸರಿನ ವ್ಯಕ್ತಿ ಯೂಟೂಬ್ ವಾಹಿನಿಯ ವರದಿಗಾರ ಹಾಗೂ ವಿಕ್ರಮ್ ಎಂಬುವವರು ದೆಹಲಿಯ ಕ್ರೈಂ ಬ್ರ್ಯಾಂಚ್ ಅಧಿಕಾರಿ ಎಂದು ಹೆದರಿಸಿ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಕೇವಲ ಧರ್ಮಾಧಾರಿತ ಅಲ್ಲ, ಇದು ಲಿಂಗಾಧಾರಿತ ತಾರತಮ್ಯ – ಹಿಜಬ್‌ಗೆ ಅನುಮತಿ ನೀಡಿ