ಜಿಲೇಬಿ ಇಡೀ ಭಾರತದಲ್ಲೇ ಜನಪ್ರಿಯವಾಗಿರೋ ಸಿಹಿ. ಸಾಂಪ್ರದಾಯಿಕ ಜಿಲೇಬಿ ಆಕರ್ಷಕ ಕಿತ್ತಲೆ ಬಣ್ಣವಿದ್ದು, ತುಂಬಾ ಸಿಹಿಯಾಗಿರುತ್ತದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ನಾವಿಂದು ಹೇಳಿಕೊಡುತ್ತಿರುವ ಕಪ್ಪು ಜಿಲೇಬಿ (Black Jalebi) ಕೊಂಚ ವಿಭಿನ್ನ. ಸಿಕ್ಕಾಪಟ್ಟೆ ಸಿಹಿ ತಿನ್ನಲು ಇಷ್ಟಪಡದವರು ಈ ಒಂದು ರೆಸಿಪಿ ತಮ್ಮ ನೆಚ್ಚಿನದ್ದನ್ನಾಗಿಸಿಕೊಳ್ಳಬಹುದು. ಇಲ್ಲಿ ಸಿಹಿಗೆ ಸಕ್ಕರೆ ಬದಲು ಬೆಲ್ಲಕ್ಕೆ ಆದ್ಯತೆ ನೀಡಲಾಗಿದೆ. ಹಾಗಾದ್ರೆ ತಡ ಮಾಡದೇ ಈ ರೆಸಿಪಿಯನ್ನು ಹೇಗೆ ಮಾಡೋದು ಎಂಬುದನ್ನು ನೋಡಿಕೊಂಡು ಬರೋಣ.
Advertisement
ಬೇಕಾಗುವ ಪದಾರ್ಥಗಳು:
ಖೋವಾ – 250 ಗ್ರಾಂ
ಮೈದಾ ಹಿಟ್ಟು – 100 ಗ್ರಾಂ
ಬೆಲ್ಲ – 250 ಗ್ರಾಂ
ಹಾಲು – 1 ಕಪ್
ನೀರು – 4 ಕಪ್
ಏಲಕ್ಕಿ – 2
ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು
ರೋಸ್ ವಾಟರ್ – 2 ಟೀಸ್ಪೂನ್ ಇದನ್ನೂ ಓದಿ: ಸಮ್ಮರ್ ಸ್ಪೆಷಲ್ – ಅನನಾಸು, ತೆಂಗಿನಕಾಯಿಯ ಸ್ಮೂದಿ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಮಿಕ್ಸರ್ ಜಾರ್‌ಗೆ ಖೋವಾ, ಮೈದಾ ಹಾಗೂ ಹಾಲನ್ನು ಹಾಕಿ ದಪ್ಪ ಪೇಸ್ಟ್ ತಯಾರಾಗುವವರೆಗೆ ರುಬ್ಬಿಕೊಳ್ಳಿ. ಬಳಿಕ ಅದನ್ನು ಪಕ್ಕಕ್ಕಿಡಿ.
* ಒಂದು ಪಾತ್ರೆಯಲ್ಲಿ ಬೆಲ್ಲ, ನೀರು, ಏಲಕ್ಕಿ ಹಾಗೂ ರೋಸ್ ವಾಟರ್ ಹಾಕಿ, ಬಿಸಿ ಮಾಡಿಕೊಂಡು, ಪಾಕವನ್ನು ತಯಾರಿಸಿ.
* ಈಗ ಆಳವಾದ ಪ್ಯಾನ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ.
* ಖೋವಾ ಬ್ಯಾಟರ್ ಅನ್ನು ಪೈಪಿಂಗ್ ಬ್ಯಾಗ್‌ಗೆ ಹಾಕಿ, ಬಿಸಿ ಎಣ್ಣೆಯಲ್ಲಿ ಹಿಟ್ಟನ್ನು ಸುರುಳಿಯಾಕಾರದಲ್ಲಿ ಬಿಡಿ. (ಸಾಮಾನ್ಯ ಜಿಲೇಬಿಗಿಂತ ಇದನ್ನು ಸ್ವಲ್ಪ ದಪ್ಪವಾಗಿ ಮಾಡಿ)
* ಜಿಲೇಬಿಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಕಾಯಿಸಿಕೊಳ್ಳಿ.
* ಈಗ ಜಿಲೇಬಿಗಳನ್ನು ತಯಾರಿಸಿಟ್ಟಿರುವ ಬೆಲ್ಲದ ಪಾಕದಲ್ಲಿ ಹಾಕಿ, ಕೆಲ ನಿಮಿಷಗಳ ವರೆಗೆ ನೆನೆಸಿ.
* ಇದೀಗ ಖೋವಾದಿಂದ ತಯಾರಿಸಲಾದ ಕಪ್ಪು ಜಿಲೇಬಿ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಸಬ್ಬಕ್ಕಿ, ಅವಲಕ್ಕಿಯಿಂದ ಮಾಡಿ ಸಖತ್ ಟೇಸ್ಟಿ ವಡೆ