ಬೆಂಗಳೂರು: ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದ ಸರಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಹೈಕಮಾಂಡ್‍ಗೆ ದೂರು ದಾಖಲಾಗಿದೆ.
ರಾಮನಗರದಲ್ಲಾದ ಮುಖಭಂಗಕ್ಕೆ ಯಡಿಯೂರಪ್ಪ ಅವರೇ ನೇರ ಹೊಣೆ. ಸಿ ಪಿ ಯೋಗೇಶ್ವರ್ ಅವರನ್ನು ಬಿಜೆಪಿಗೆ ಕರೆ ತಂದಿದ್ದೇ ಯಡಿಯೂರಪ್ಪ. ಯೋಗೇಶ್ವರ್ ಮಾತು ಕೇಳಿ ಚಂದ್ರಶೇಖರ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡರು. ಪರಿಣಾಮ ಈಗ ನಮ್ಮ ಅಭ್ಯರ್ಥಿಯೇ ಕಣದಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಬಣ ದೂರು ಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
Advertisement
ಇಂದು ಚಂದ್ರಶೇಖರ್ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಡಿಕೆ ಸುರೇಶ್, ಚಂದ್ರಶೇಖರ್ ಅವರು ಮೂಲತಃ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ನಂಬಿ ಬೆಳೆದವರು. ಆದರೆ ಅವರಿಗೆ ಉಂಟಾದ ಕೆಲ ನಿರ್ಧಾರದಿಂದ ದುಡುಕಿದ್ದರು. ಆದರೆ ಇಂದು ಅವರು ತೆಗೆದುಕೊಂಡಿರುವ ನಿರ್ಣಯಕ್ಕೆ ಪಕ್ಷದ ಕಡೆಯಿಂದ ಸ್ವಾಗತ ಕೋರುತ್ತೇನೆ ಎಂದು ಹೇಳಿದ್ದರು.
Advertisement
ಬಿಜೆಪಿ ನಾಯಕರು ಧೋರಣೆಯಿಂದ ಚಂದ್ರಶೇಖರ್ ಬೇಸತ್ತಿದ್ದಾರೆ. ಈಗ 5 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಮಂಡ್ಯ ಚುನಾವಣೆಗೆ ಎಲ್ಲ ನಾಯಕರು ರಾಮನಗರದ ಮೇಲೆ ಹೋಗಬೇಕು. ಆದರೆ ರಾಮನಗರಕ್ಕೆ ಯಾವ ನಾಯಕರು ಪ್ರಚಾರಕ್ಕೆ ಬಂದಿಲ್ಲ. ಪ್ರಚಾರದ ವೇಳೆ ನಾಯಕರು ಬಾವುಟ ಕೊಟ್ಟು ಹೋದವರು, ಬಾವುಟ ಏನಾಯಿತು ಎಂದು ಕೇಳುವುದಿಲ್ಲ ಎಂದು ಡಿ.ಕೆ.ಸುರೇಶ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv