ಚಿಕ್ಕಬಳ್ಳಾಪುರ: ಯೋಗ್ಯತೆ ಇಲ್ಲದವರು ವೀರ ಸಾವರ್ಕರ್ ಬಗ್ಗೆ ಈಗ ಮಾತನಾಡುತ್ತಿದ್ದಾರೆ ಎಂದು ಸಾರ್ವಕರು ವಿರೋಧಿಗಳ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಗುಡುಗಿದ್ದಾರೆ.
ಸಮೃದ್ದ ಭಾರತ ಎನ್‍ಜಿಒ ಸಂಸ್ಥೆ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ರೈಡ್ ಫಾರ್ ನೇಷನ್ ಎಂಬ ಬೈಕ್ ರ‍್ಯಾಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಬಿ.ಎಲ್ ಸಂತೋಷ್ ಭಾಗಿಯಾಗಿದ್ದರು. ಬೈಕ್ ರೈಡರ್ಸ್ ಉದ್ದೇಶಿಸಿ ಭಾಷಣ ಮಾಡಿದ ಬಿ.ಎಲ್ ಸಂತೋಷ್ ಸಾವರ್ಕರ್ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನೃತ್ಯದಲ್ಲಿ ಸಾವರ್ಕರ್ ಫೋಟೋ – ಮುಖ್ಯೋಪಾಧ್ಯಾಯರನ್ನು ಕರೆಸಿ ಕ್ಷಮೆ ಹೇಳಿಸಿದ ಪಂಚಾಯತ್
ಸಾವರ್ಕರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಯಾರು ಹೆಸರು ಹೇಳಲು ಯೋಗ್ಯತೆ ಇಲ್ಲದಂತಹ ವಂಶದಲ್ಲಿ ಹುಟ್ಟಿದ್ದಾರೋ ಅಂತವರು ಸಾವರ್ಕರ್ ಬಗ್ಗೆ ಮಾತನಾಡುತ್ತಾರೆ. ಹಿಂದಿನ ನಾಲ್ಕು ತಲೆಮಾರು ಮುಂದಿನ 25 ತಲೆಮಾರಿನ ಜನರಿಗೆ ಸಾವರ್ಕರ್ ಬಗ್ಗೆ ಮಾತನಾಡಲು ಯೋಗ್ಯತೆ ಇರಲ್ಲ. ಅಂತವರು ಸಾವರ್ಕರ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನ – ಯುವಕನಿಗೆ ಚಾಕು ಇರಿತ
Live Tv
[brid partner=56869869 player=32851 video=960834 autoplay=true]