ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ (BK Hariprasad) ನಡುವಿನ ಜಟಾಪಟಿ ಜೋರಾಗಿದೆ. ಈ ಜಟಾಪಟಿ ಮಧ್ಯೆ ಈಡಿಗ ಸಮುದಾಯದ (Ediga Community) ಕಾಂಗ್ರೆಸ್ ನಾಯಕರಾದ ಮಧು ಬಂಗಾರಪ್ಪ (Madhu Bangarappa) ಹಾಗೂ ಹರಿಪ್ರಸಾದ್ ನಡುವೆ ಮುಸುಕಿನ ಗುದ್ದಾಟವೂ ಜೋರಾಗಿ ನಡೆಯುತ್ತಿದೆ.
ಹಿರಿತನದ ಆಧಾರದಲ್ಲಿ ಬಿ.ಕೆ.ಹರಿಪ್ರಸಾದ್ ಅವರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ ಮಧು ಬಂಗಾರಪ್ಪ ಅವರನ್ನು ಈಡಿಗ ಕೋಟಾದಲ್ಲಿ ಸಚಿವರನ್ನಾಗಿ ಮಾಡಿ ಸಿದ್ದರಾಮಯ್ಯ ಸಡ್ಡು ಹೊಡೆದಿದ್ದರು. ನಾನು ರಾಜ್ಯಸಭಾ ಸದಸ್ಯನಾಗಿ ಹಲವು ರಾಜ್ಯಗಳ ಉಸ್ತುವಾರಿಯಾಗಿ ನೇಮಕವಾಗಿದ್ದರೂ ಹಿರಿತನ ಆದ್ಯತೆಯಲ್ಲಿ ಸಿದ್ದರಾಮಯ್ಯನವರು ಸಚಿವ ಸ್ಥಾನ ತಪ್ಪಿಸಿದರು ಎಂಬ ಆಕ್ರೋಶದಲ್ಲಿ ಸಿಎಂ ವಿರುದ್ಧ ಬಿ.ಕೆ.ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಸಿಎಂ ಪರವಾಗಿ ಮಧು ಬಂಗಾರಪ್ಪ ಬ್ಯಾಟ್ ಬೀಸಿದ್ದರು. ಇದನ್ನೂ ಓದಿ: ಇಂದು ನನ್ನ ಕಣ್ಣು ತೆರೆಯಿತು: ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಹಾಡಿ ಹೊಗಳಿದ ಹೆಚ್‌ಡಿಕೆ
Advertisement
Advertisement
ಮಧು ಬಂಗಾರಪ್ಪ ಸಿಎಂ ಪರವಾಗಿ ಪ್ರತಿಕ್ರಿಯಿಸಿದ ಬಳಿಕ ಹರಿಪ್ರಸಾದ್ ಜೊತೆಗಿನ ಮುಸುಕಿನ ಗುದ್ದಾಟ ತೆರೆಯ ಮೇಲೆ ಪ್ರಕಟವಾಗಿತ್ತು. ಈಗ ಮಧು ಬಂಗಾರಪ್ಪ ಇನ್ನೊಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಮಾಜದ ಕಾರ್ಯಕ್ರಮಕ್ಕೆ ಸಿಎಂ ಅವರನ್ನು ಆಹ್ವಾನಿಸಿ ಹರಿಪ್ರಸಾದ್‌ಗೆ ಕೌಂಟರ್ ಕೊಟ್ಟಿದ್ದಾರೆ.
Advertisement
ಭಾನುವಾರ ಅರಮನೆ ಮೈದಾನದಲ್ಲಿ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಮತ್ತು ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತಿ ಸಮಾವೇಶ ಆಯೋಜನೆಗೊಂಡಿದ್ದು, ಈ ಈಡಿಗ ಸಮಾವೇಶಕ್ಕೆ ಸಿದ್ದರಾಮಯ್ಯರನ್ನು ಆಹ್ವಾನಿಸಿ ಮಧು ಬಂಗಾರಪ್ಪ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈಡಿಗ ಸಮುದಾಯದ ನಾಯಕರಾಗಿರುವ ಹರಿಪ್ರಸಾದ್ ಈ ಸಮಾವೇಶಕ್ಕೆ ಹೋಗದೇ ಅಂತರ ಕಾಯ್ದುಕೊಂಡಿದ್ದಾರೆ. ಸಿದ್ದರಾಮಯ್ಯ ಈಡಿಗ ಸಮುದಾಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹರಿಪ್ರಸಾದ್‌ಗೆ ಠಕ್ಕರ್ ನೀಡಿದ್ದಾರೆ.
Advertisement
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಶನಿವಾರ ಮಾತನಾಡಿದ್ದ ಹರಿಪ್ರಸಾದ್, ನಾನು ಬಾಲ್ ಇದ್ದಂತೆ. ತುಳಿದಷ್ಟು ಮೇಲೆ ಪುಟ್ಟಿದೇಳುತ್ತೇನೆ ಎಂದು ಹೇಳುವ ಮೂಲಕ ಸಿಎಂಗೆ ಟಾಂಗ್ ನೀಡಿದ್ದರು.
ಬೆಂಗಳೂರಲ್ಲಿ ಈಡಿಗ ಸಮಾವೇಶ ನಡೆಯುತ್ತಿದೆ. ಇದು ರಾಜಕೀಯ ಪ್ರೇರಿತ ಮತ್ತು ರಾಜಕೀಯ ಕುತಂತ್ರದಿಂದ ಸಮಾವೇಶ ಆಯೋಜನೆ ಮಾಡಲಾಗಿದೆ. ಈ ಸಮಾವೇಶಕ್ಕೆ ನಾನು ಹೋಗುತ್ತಿಲ್ಲ. ನಮ್ಮ ಸಮಾಜಕ್ಕೆ ಒಳ್ಳೆಯದಾಗುವುದಿದ್ದರೆ ನಾನು ಪಾಲ್ಗೊಳ್ಳುತ್ತಿದ್ದೆ. ರಾಜಕೀಯ ಪ್ರೇರಿತ ಸಮಾವೇಶಗಳಲ್ಲಿ ನಾನು ಭಾಗಿಯಾಗುವುದಿಲ್ಲ. ಸಮಾವೇಶದಲ್ಲಿ ಸಂಘದವರು ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿ ಎಂದು ಹೇಳಿ ಕಾರ್ಯಕ್ರಮ ಸಂಘಟಕರ ವಿರುದ್ಧವೂ ಹರಿಹಾಯ್ದಿದ್ದರು.