56 ಇಂಚಿನ ಎದೆ ಇರೋ ಮೋದಿ ಮಣಿಪುರದ ಬೆತ್ತಲೆ ಮೆರವಣಿಗೆ ಪ್ರಕರಣದ ಬಗ್ಗೆ ಮಾತಾಡಲಿಲ್ಲ: ಹರಿಪ್ರಸಾದ್

Public TV
2 Min Read
BK HARIPRASAD

– ಈಗ ಮಹಿಳೆಯರ ಪರ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದ ಶಾಸಕ

ಕೋಲಾರ: 56 ಇಂಚಿನ ಎದೆ ಇರುವ ಪ್ರಧಾನಿ ಮೋದಿ (PM Modi) ಅವರು ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣದ ಬಗ್ಗೆ ಮಾತನಾಡಲಿಲ್ಲ. ಈಗ ಮಹಿಳೆಯರ ಪರ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ವಾಗ್ದಾಳಿ ನಡೆಸಿದ್ದಾರೆ.

ಕೋಲಾರದ (Kolar) ಮಾಲೂರಿನ ಚೊಕ್ಕಂಡನಹಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ತನ್ನ ಪ್ರಣಾಳಿಕೆಯಲ್ಲಿ 10 ವರ್ಷದ ಸಾಧನೆ ಹೇಳೋಕಾಗಿಲ್ಲ. ಉದ್ಯೋಗ ನೀಡಿದ ಬಗ್ಗೆ ಹೇಳಿಲ್ಲ. ದೇಶಕ್ಕೆ ಕೊಟ್ಟ ಕಾರ್ಯಕ್ರಮಗಳ ಬಗ್ಗೆ ಹೇಳಿಕೊಂಡಿಲ್ಲ. ಹಿಂದೆ ನೀಡಿದ್ದ ಭರವಸೆಗಳನ್ನ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪರಪುರುಷನ ಜೊತೆ ಕಾರೊಳಗೆ ಚಕ್ಕಂದವಾಡ್ತಿದ್ದ ಪತ್ನಿ- ರೊಚ್ಚಿಗೆದ್ದ ಪತಿ ಮಾಡಿದ್ದೇನು?

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ನಡೆಯಿತು. ಆದ್ರೆ ಆ ಪ್ರಕರಣದ ಬಗ್ಗೆ ಒಂದು ಮಾತನಾಡದ 56 ಇಂಚಿನ ಎದೆ ಇರುವ ಪ್ರಧಾನಿ, ಮಹಿಳೆಯರ ಬಗ್ಗೆ ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ಎಂದರಲ್ಲದೇ 400 ಸೀಟ್ ಬೇಕಾದರೆ, ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಬಳಿಕ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಮೈತ್ರಿ ಪಕ್ಷದ ಸಂಸದರು ಇಪ್ಪತ್ತೇಳು, ಎಲ್ಲರದ್ದೂ ಬರೀ ಓಳು, ಇವರೇ ರಾಜ್ಯಕ್ಕೆ ಗೋಳು ಎಂದು ಪ್ರಾಸಬದ್ಧವಾಗಿ ಹೇಳುತ್ತಾ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆಬಾಗುತ್ತೇನೆ: ಅರುಣ್‌ ಯೋಗಿರಾಜ್‌

ಸಿಎಂ ಸಿದ್ದರಾಮಯ್ಯ (Siddaramaiah) ಮಾತನಾಡಿ, ದೇವೇಗೌಡರು ಭ್ರಮೆಯಲ್ಲಿದ್ದಾರೆ. ಲೋಕಸಭೆ ನಂತರ ನಮ್ಮ ಸರ್ಕಾರಕ್ಕೆ ಏನೂ ಆಗಲ್ಲ. ನಾವು ಐದೂ ವರ್ಷ ಆಡಳಿತ ನಡೆಸ್ತೇವೆ. ನಮ್ಮ ಗ್ಯಾರಂಟಿ ಪರ ಜನ ಇದ್ದಾರೆ. ಇದನ್ನು ದೇವೇಗೌಡರು ಸಹಿಸಿಕೊಳ್ತಿಲ್ಲ, ಹಾಗಾಗಿ ಪದೇ ಪದೇ ಲೋಕಸಭೆ ನಂತರ ಅವರು ಸರ್ಕಾರ ಪತನ ಆಗುತ್ತೆ ಅಂತಿದ್ದಾರೆ. ಇತ್ತೀಚೆಗೆ ದೇವೇಗೌಡ್ರು ಪದೇ ಪದೇ ಕೋಪಿಸ್ಕೊಳ್ತಿದ್ದಾರೆ. ಸಿದ್ದರಾಮಯ್ಯಗೆ ಗರ್ವ ಬಂದಿದೆ ಅಂತಿದ್ದಾರೆ. ಅವರು ಏನೇ ಹೇಳಿದರೂ ಜನ ನಮ್ಮ ಕೈಹಿಡಿಯುವ ವಿಶ್ವಾಸ ಇದೆ. ಏಕೆಂದರೆ ಕಾಂಗ್ರೆಸ್ ನುಡಿದಂತೆ ನಡೆದಿದೆ ಎಂದಿದ್ದಾರೆ.

Share This Article