ಬೆಂಗಳೂರು: ಬಿಜೆಪಿ ಅವರ ಸಂಸ್ಕೃತಿಯೇ ಹೆಣ್ಣುಮಕ್ಕಳಿಗೆ ಅವಹೇಳನ ಮಾಡೋದು ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ (B K Hariprasad) ವಾಗ್ದಾಳಿ ನಡೆಸಿದರು.
ಸಿಎಸ್ ಶಾಲಿನಿ ರಜನೀಶ್ ಬಗ್ಗೆ ಬಿಜೆಪಿ ಎಂಎಲ್‌ಸಿ ರವಿಕುಮಾರ್ (Ravikumar) ಅವಹೇಳನ ಹೇಳಿಕೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರವಿಕುಮಾರ್ ಹೀಗೆ ಮಾತಾಡಿರೋದು ಹೊಸದೇನು ಅಲ್ಲ. ಬಿಜೆಪಿಯ ಸಂಸ್ಕೃತಿಯೇ ಹೆಣ್ಣುಮಕ್ಕಳಿಗೆ ಅವಹೇಳನವಾಗಿ ಮಾತಾಡೋದು. ನರೇಂದ್ರ ಮೋದಿ ಅವರೇ ಶಶಿ ತರೂರ್ ಪತ್ನಿ ಬಳಿ 50 ಕೋಟಿ ಗರ್ಲ್ ಫ್ರೆಂಡ್ಸ್ ಅಂತ ಹೇಳಿದ್ರು. ಬಿಜೆಪಿ ಅವರಿಂದ ಇದನ್ನ ಬಿಟ್ಟು ಬೇರೆ ಏನು ನಿರೀಕ್ಷೆ ಮಾಡಲು ಆಗಲ್ಲ. ರವಿಕುಮಾರ್ ಕೇಸ್‌ನಲ್ಲಿ ಕೋರ್ಟ್ ಎಫ್‌ಐಆರ್ ರದ್ದು ಮಾಡಿಲ್ಲ. ಅದೇ ಸಂತೋಷದ ಸುದ್ದಿ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನ ಎಲ್ಲಾ ಶಾಸಕರನ್ನು ಮಂತ್ರಿ ಮಾಡೋಕೆ ಆಗಲ್ಲ- ಆರ್.ವಿ.ದೇಶಪಾಂಡೆ
ಕೋರ್ಟ್‌ಗಳು ಕಠಿಣ ಕ್ರಮ ತೆಗೆದುಕೊಂಡಾಗ ಇಂತಹ ಮಾತುಗಳಿಗೆ ಕಡಿವಾಣ ಬೀಳುತ್ತವೆ. ಕೋರ್ಟ್ ಎಫ್‌ಐಆರ್ ರದ್ದು ಮಾಡೋದು, ಕೇಸ್ ರದ್ದು ಮಾಡೋದು ಮಾಡಿದ್ರೆ ದೇಶದಲ್ಲಿ ಇವರನ್ನ ಯಾರು ಕೇಳಲ್ಲ ಅಂದುಕೊಳ್ಳುತ್ತಾರೆ. ಈಗ ಜಾಮೀನು ಮೇಲೆ ಅವರು ಹೊರಗೆ ಇದ್ದಾರೆ. ಈಗ ಅವರ ನಾಲಿಗೆಗೆ ಕಡಿವಾಣ ಬೀಳುತ್ತೆ ಅನ್ನಿಸುತ್ತದೆ. ಸದನಕ್ಕೆ ಅಗೌರವ ತಂದಿದ್ದಾರೆ ಅವರನ್ನು ವಜಾ ಮಾಡಿ. ಇಂತಹ ಭಾಷೆ ಪ್ರಯೋಗ ಸರಿಯಲ್ಲ ಎಂದು ಸಭಾಪತಿಗಳಿಗೆ ನಾವು ದೂರು ಕೊಟ್ಟಿದ್ದೇವೆ. ಸಭಾಪತಿಗಳು ಏನು ಕ್ರಮ ತೆಗೆದುಕೊಳ್ತಾರೆ ನೋಡೋಣ. ಸದನ ಪ್ರಾರಂಭವಾದಾಗ ಈ ವಿಷಯ ಪ್ರಸ್ತಾಪ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ನಾರಾಯಣ ಬರಮನಿ ಕೇಸ್ – ಕೊನೆಗೂ ಮುಜುಗರದಿಂದ ಪಾರಾದ ಸರ್ಕಾರ
ಬಿಜೆಪಿಯಿಂದ ರವಿಕುಮಾರನ್ನ ಸಮರ್ಥನೆ ಮಾಡಿಕೊಳ್ತಿರೋ ವಿಚಾರವಾಗಿ ಮಾತನಾಡಿದ ಅವರು, ಸಮರ್ಥನೆ ಮಾಡಿಕೊಳ್ಳೋದ್ರಲ್ಲಿ ಬಿಜೆಪಿ ಅವರು ನಿಸ್ಸೀಮರು. ಮೋದಿ ಅವರು ಸೋನಿಯಾ ಗಾಂಧಿಗೆ ಜರ್ಸಿ ಕೌ ಅಂತ ಹೇಳಿದ್ರು. ಶಶಿ ತರೂರು ಪತ್ನಿ ಬಳಿ 50 ಗರ್ಲ್ ಫ್ರೆಂಡ್ಸ್ ಅಂತ ಹೇಳಿದ್ರು. ಇವೆಲ್ಲ ಕೀಳು ಮಟ್ಟದ ಭಾಷೆಗಳು ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊಹ್ಲಿಗಾಗಿ ಆರ್‌ಸಿಬಿಯ ಆತುರವೇ ಕಾಲ್ತುಳಿತಕ್ಕೆ ಕಾರಣ – ಸಿಐಡಿ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲು
ಇಂತಹ ಕೀಳು ಭಾಷೆ ಬಳಸೋದ್ರಲ್ಲಿ ಈ ನಾಗಪುರದ ಗೋಬರ್ ಯೂನಿವರ್ಸಿಟಿಗಳು ಡಾಕ್ಟರೇಟ್ ತೆಗೆದುಕೊಂಡಿವೆ. ಎಲ್ಲಿವರೆಗೂ ಗೋಬರ್ ಯೂನಿವರ್ಸಿಟಿ, ನಾಗಪುರ ಯೂನಿವರ್ಸಿಟಿ ನಾವು ಡಿಸಾಲ್ವ್ ಮಾಡೋದಿಲ್ಲವೋ ಅಲ್ಲಿವರೆಗೂ ಇದು ಹೀಗೆ ಇರುತ್ತದೆ ಎಂದು ವಾಗ್ದಾಳಿ ನಡೆಸಿದರು.