ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅರ್ಧನಾರೇಶ್ವರರನ್ನ ಹುಡುಕಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ (B K Hariprasad) ಲೇವಡಿ ಮಾಡಿದ್ದಾರೆ.
ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಕ್ರಾಂತಿ ಆಗುತ್ತೆ ಎಂಬ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರ್.ಅಶೋಕ್ (R Ashok) ಮತ್ತು ವಿಜಯೇಂದ್ರ ಮೊದಲು ಅವರ ಖುರ್ಚಿ ಉಳಿಸಿಕೊಳ್ಳಲಿ. ಬಿಜೆಪಿಯವರು ಎರಡೂ ವರ್ಷ ಆದರೂ ಕೇಂದ್ರದಲ್ಲಿ ಅಧ್ಯಕ್ಷರನ್ನು ಮಾಡಲು ಆಗಲಿಲ್ಲ. ಈಗ ಮಹಿಳೆಯರನ್ನು ಹುಡುಕುತ್ತಿದ್ದಾರೆ. ಮಹಿಳೆಯರ ಬದಲಾಗಿ ಅರ್ಧನಾರೇಶ್ವರರನ್ನು ಹುಡುಕಿದರು ಬಹಳ ಸಂತೋಷ ಎಂದಿದ್ದಾರೆ. ಇದನ್ನೂ ಓದಿ: ನಾರಾಯಣ ಬರಮನಿ ಕೇಸ್ – ಕೊನೆಗೂ ಮುಜುಗರದಿಂದ ಪಾರಾದ ಸರ್ಕಾರ
ಇದೇ ವೇಳೆ ಸಿಎಂ, ಡಿಸಿಎಂ ದೆಹಲಿ ಪ್ರಯಾಣ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಸೀಟಿನ ಬಗ್ಗೆ ಯಾವುದೇ ಗೊಂದಲಗಳು ಇಲ್ಲ. ಗೊಂದಲ ಆಗ್ತಿರೋದು ಮಾಧ್ಯಮಗಳು, ಟಿವಿಯಲ್ಲಿ ಮಾತ್ರ. ಸಿಎಂ, ಡಿಸಿಎಂ ನಡುವೆ ಯಾವುದೇ ಗೊಂದಲಗಳು ಇಲ್ಲ. ಪೆಹಲ್ಗಾಮ್ ಘಟನೆ ಆದ ಮೇಲೆ ಯಾವ ರೀತಿ ಟಿವಿಗಳಲ್ಲಿ ಕರಾಚಿ, ಲಾಹೋರ್ ಆಕ್ರಮಿಸಿಕೊಂಡಿದ್ರು ಅಂತ ಹೇಳಿದ್ದರು. ಅಮೇಲೆ ರಾತ್ರಿ ಹೊತ್ತು ಸುಖವಾಗಿ ಮಲಗಿದ್ರು ಅಂತ ಅಷ್ಟೇ. ಸಿಎಂ ಸೀಟು ಗೊಂದಲ ಮಾಧ್ಯಮಗಳು ಸೃಷ್ಟಿ ಅಷ್ಟೇ ಎಂದು ಹೇಳಿದ್ದಾರೆ.