ಕೊಪ್ಪಳ: ಭಾರತ ದೇಶವನ್ನು ಸ್ವಾತಂತ್ರ್ಯಗೊಳಿಸಬೇಕು ಎಂದು ಸಾಕಷ್ಟು ಹಿರಿಯರು ಹೋರಾಟಗಳನ್ನು ನಡೆಸಿದ್ದಾರೆ. ಆದರೆ ಅಂತಹ ವೇಳೆಯಲ್ಲಿ RSS ಸಂಘಟನೆಯು ಬ್ರಿಟಿಷರ ಏಜೆಂಟ್ ಆಗಿ ಕಾರ್ಯನಿರ್ವಹಿಸಿದೆ. ಅಂತಹವರು ನಮಗೆ ದೇಶಾಭಿಮಾನ ಬುದ್ಧಿ ಹೇಳಲು ಆಗಮಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಕೊಪ್ಪಳದ ಗಂಗಾವತಿ ನಗರದ ಆನೆಗೊಂದಿ ರಸ್ತೆಯಲ್ಲಿರುವ ಮಾಜಿ ಸಂಸದರಾದ ಎಚ್.ಜಿ. ರಾಮುಲು ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ ವೇಳೆಯಲ್ಲಿ ಮಾತನಾಡಿದರು. ದೇಶದಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿ ಪಕ್ಷದವರು RSS ಸಂಘಟನೆಯನ್ನು ಬಳಸಿಕೊಂಡು ದೇಶ, ಧರ್ಮದ ಹೆಸರಲ್ಲಿ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಆದರೆ ನಿಜವಾಗಿಲೂ ದೇಶಕ್ಕಾಗಿ ಹೋರಾಟಗಳನ್ನು ನಡೆಸಿದರು ಕಾಂಗ್ರೆಸ್ ಪಕ್ಷದವರು. ಬ್ರಿಟಿಷರ ಕೈಯಿಂದ ದೇಶವನ್ನು ಬಿಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷವನ್ನು ಹುಟ್ಟು ಹಾಕಲಾಗಿದೆ. ಅಂದಿನಿಂದ ಇಂದಿನವರೆಗೆ ದೇಶದ ಒಳಿತಿಗಾಗಿ ಕಾಂಗ್ರೆಸ್ ಪಕ್ಷ ದುಡಿಯುತ್ತಿದೆ ಎಂದು ತಿಳಿಸಿದರು.
Advertisement
Advertisement
ಬ್ರಿಟಿಷರ ಆಳ್ವಿಕೆಯಲ್ಲಿ ಅವರ ಏಂಜೆಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ RSS ಸಂಘಟನೆ ದೇಶಾಭಿಮಾನ ಹೆಸರಲ್ಲಿ ಡಾಂಭಿಕತೆಯನ್ನು ತೋರಿಸುತ್ತಿದೆ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಂಧನ ಮಾಡಿದರೆ. ಚಳವಳಿಯಲ್ಲಿ ಭಾಗವಹಿಸಿಲ್ಲ. RSS ಸಂಘಟನೆಯು ಸ್ವಾತಂತ್ರ್ಯ ಹೋರಾಟಗರು ಎಂದು ಹೇಳುವ ನಾಯಕರು ನಿಜವಾದ ಹೋರಾಟಗಾರರು ಇಲ್ಲ. ಅವರೆಲ್ಲ ಬ್ರಿಟಿಷರ ಏಜೆಂಟರು ಆಗಿದ್ದರು.
Advertisement
ಗಡಿಪಾರು ವ್ಯಕ್ತಿ ಅಮಿತ್ ಶಾ : ಕೇಂದ್ರದಲ್ಲಿ ಗೃಹ ಮಂತ್ರಿಯಾಗಿರುವ ಅಮಿತ್ ಶಾ ಅವರು ಗಡಿಪಾರು ಆಗಿರುವ ವ್ಯಕ್ತಿ, ಅವರಿಗೆ ಸಂವಿಧಾನ ಚೌಕಟ್ಟಿನಲ್ಲಿ ಏನೇನು ಇದೆ ಎನ್ನುವುದು ಮಾಹಿತಿಇಲ್ಲ. ನಮಗೆ ಹಿಂದಿ ಭಾಷೆ ಹೇರಿಕೆಯ ಬಗ್ಗೆ ಉಪದೇಶವನ್ನು ಮಾಡಲು ಹೊರಟಿದ್ದಾರೆ. ಅವರ ಉಪದೇಶ ನಮಗೆ ಬೇಕಾಗಿಲ್ಲ. ಗುಜರಾತ್ ಹೈಕೋರ್ಟ್ ಏನು ಆದೇಶವನ್ನು ನೀಡಿದೆ ಎನ್ನವುದು ಅಮಿತ್ ಶಾ ಸರಿಯಾಗಿ ತಿಳಿದುಕೊಳ್ಳಬೇಕು. ನಂತರ ಇನ್ನೊಬ್ಬರಿಗೆ ತಿಳಿಸಲು ಮುಂದಾಗಲಿ. ದೇಶದಲ್ಲಿ ಒಟ್ಟು 22 ಅಧಿಕೃತ ಭಾಷೆಗಳು ಇವೆ. ಅದರಲ್ಲಿ ಹಿಂದಿ ಭಾಷೆಯು ಕೂಡ ಒಂದು. ನಮಗೆ ಬೇಕೆನಿಸಿದ ಭಾಷೆಯಲ್ಲಿ ನಾವು ಮಾತನಾಡಬಹುದು. ಹಿಂದಿ ಭಾಷೆ ಬಳಕೆ ಕಡ್ಡಾಯ ಬಳಕೆ ಮಾಡುವುದು ಸಲ್ಲದು. ಒಟ್ಟು 19 ಸಾವಿರ ಭಾಷೆಗಳುಳ್ಳ ಬಹುತ್ವ ಭಾರತದಲ್ಲಿ ಯಾವುದೇ ಒಂದು ಭಾಷೆಯನ್ನು ಕಡ್ಡಾಯ ಮಾಡುವುದು ಸರಿಯಲ್ಲ. ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡಿರುವ ದೇಶ ಭಾರತ. ಹಾಗಾಗಿ ನಮಗಿರುವ ತ್ರಿಭಾಷಾ ಸೂತ್ರವೇ ಸರಿಯಿದೆ ಎಂದು ಹೇಳಿದರು.
Advertisement
ಗಲ್ಫ್ ರಾಷ್ಟ್ರಗಳಿಂದ ಪೆಟ್ರೋಲ್ ತ್ಯಜಿಸಿ : ರಾಜ್ಯದಲ್ಲಿ ಕೆಲ ಹಿಂದೂ ಸಂಘಟನೆಗಳನ್ನು ಮುಂದು ಬಿಟ್ಟು, ಕೆಲ ರಾಜಕೀಯ ವ್ಯಕ್ತಿಗಳು ಮುಸ್ಲಿಂ ವ್ಯಾಪಾರಿಗಳ ವ್ಯಾಪಾರ ಬೇಡಾ, ಹಲಾಲ್, ಜಟ್ಕಾ ಕಟ್ ಸೇರಿದಂತೆ ನಾನಾ ಗೊಂದಲಗಳನ್ನು ಹುಟ್ಟು ಹಾಕಿದ್ದಾರೆ. ಹಿಂದುತ್ವದ ಹೆಸರಲ್ಲಿ ಹಿಂದೂ, ಮುಸ್ಲಿಂ ಧರ್ಮಗಳ ಮೇಲೆ ವೈಮನಸ್ಸು ಹುಟ್ಟು ಹಾಕುತ್ತಿದ್ದಾರೆ. ಹಿಂದುತ್ವದ ಮೇಲೆ ರಾಷ್ಟ್ರವನ್ನು ನಡೆಸಿಕೊಂಡು ಅಷ್ಟು ಅಭಿಮಾನ ಇದ್ದರೆ ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿರುವ ಪೆಟ್ರೋಲ್, ಡಿಸೇಲ್ ತ್ಯಜಿಸಲಿ ನೋಡೋಣ. ಇವರೆಲ್ಲ ಮೂರ್ಖರು ಧರ್ಮ, ಜಾತಿ ಆಧಾರದ ಮೇಲೆ ದೇಶವನ್ನು ಇಬ್ಭಾಗ ಮಾಡಲು ಮುಂದಾಗುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಧರ್ಮದ ಗೊಂದಲದ ಬಗ್ಗೆ ಮಾತನಾಡಬೇಕಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಮ್ಮಿ ಎಂಜಿನ್ ಇದ್ದಂತೆ ಸರ್ಕಾರ ಡಬಲ್ ಎಂದಿನಂತೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.