ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ (Narendra Modi) ಬಗ್ಗೆ ಮತ್ತೆ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಲಘು ಹೇಳಿಕೆ ನೀಡಿದ್ದಾರೆ. ಪುಲ್ವಾಮಾ ದಾಳಿಯಲ್ಲಿ (Pulwama Attack) ಹುತಾತ್ಮರಾದವರ ಬಗ್ಗೆ ಪ್ರಸ್ತಾಪಿಸಿ ಅವಹೇಳನ ಮಾಡಿದ್ದಾರೆ.
ಕೊಪ್ಪಳದ (Koppala) ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಮಟನ್, ಮಚಲಿ, ಮಂಗಳಸೂತ್ರ, ಮುಸಲ್ಮಾನ ಮೇಲೆ ಚುನಾವಣೆ ಮಾಡ್ತಾ ಇದ್ದಾರೆ. ಪುಲ್ವಾಮಾ ದಾಳಿಯಲ್ಲಿ ಸೈನಿಕರು ಸತ್ತಾಗ ಮಂಗಳಸೂತ್ರ ಕಿತ್ತು ಕೊಂಡಿದ್ಯಾರು?. ಸೈನಿಕರಿಗೆ ಹೆಲಿಕಾಪ್ಟರ್ ಕೊಟ್ಟಿದ್ದರೆ ಯಾರೂ ಸಾಯುತ್ತಿರಲಿಲ್ಲ. ಗಡಿಭಾಗದಲ್ಲಿ 700 ರೈತರು ಸತ್ತಾಗ ಅವರ ಮಂಗಲಸೂತ್ರ ಕಿತ್ತಿದ್ಯಾರು…?, ಮೋದಿ ಸ್ವಂತ ಪತ್ನಿಯ ಮಂಗಳಸೂತ್ರ ಕಿತ್ತಿದ್ಯಾರು…? ಎಂದು ಟೀಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕೆಂಬುದು ದೇಶದ ಕರೆಯಾಗಿದೆ: ರಾಬರ್ಟ್ ವಾದ್ರಾ
ಬಿಜೆಪಿ ಮಾತ್ರ ಅಪಾಯದಲ್ಲಿದೆ: ನೇಹಾ ಹಿರೇಮಠ ಹತ್ಯೆ ವಿಚಾರ ತನಿಖೆ ನಡೆಯುತ್ತಿದೆ. ತಪ್ಪು ಮಾಡಿದವರಿಗೆ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ಯಾವುದೇ ಜಾತಿ-ಧರ್ಮದ ವಿಚಾರ ಬರುವುದಿಲ್ಲ ಯಾವುದೇ ಓಲೈಕೆ ರಾಜಕಾರಣ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗತ್ತೆ ಅದಕ್ಕೆ ಕಾನೂನಿನಲ್ಲಿ ಸೆಕ್ಷನ್ ಗಳಿವೆ. ದೇಶದಲ್ಲಿ ಯಾವ ಹಿಂದೂ ಕೂಡಾ ಅಪಾಯದಲ್ಲಿಲ್ಲ, ಯಾವ ಮುಸ್ಲಿಮರೂ ಅಪಾಯದಲ್ಲಿಲ್ಲ. ದೇಶ ರಾಷ್ಟ್ರಪತಿ ಹಿಂದೂ, ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳು ಹಿಂದೂ, ಪ್ರಧಾನಿ ಹಿಂದೂ, ರಾಜ್ಯ ಮುಖ್ಯ ನ್ಯಾಯಾಧೀಶರು ಹಿಂದೂ, ಸೈನ್ಯದ ಮುಖ್ಯಸ್ಥರು ಹಿಂದೂಗಳಿದ್ದಾರೆ. ದೇಶದಲ್ಲಿ ಯಾವ ಹಿಂದೂ ಮುಸ್ಲಿಮರೂ ಅಪಾಯದಲ್ಲಿಲ್ಲ. ದೇಶದಲ್ಲಿ ಕೇವಲ ಬಿಜೆಪಿ ಮಾತ್ರ ಅಪಾಯದಲ್ಲಿದೆ. ಎಲ್ಲರಿಗೂ ಕಾನೂನು ಒಂದೇ ಇದೆ ಎಂದು ವಾಗ್ದಾಳಿ ನಡೆಸಿದರು.
ಖರ್ಗೆ ನೋವಿನಿಂ ಹೇಳಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಮತ ಹಾಕದೇ ಇದ್ರೆ, ಸತ್ತ ಮೇಲೆ ಮಣ್ಣು ಹಾಕೋಕೆ ಬನ್ನಿ ಎನ್ನುವ ಹೇಳಿಕೆ ವಿಚಾರದ ಕುರಿತು ಮಾತನಾಡಿ, 50 ವರ್ಷದಿಂದ ಕಲಬುರಗಿ ಭಾಗದಲ್ಲಿ ಖರ್ಗೆ ಅವರು ಅಭಿವೃದ್ಧಿಪಡಿಸಿದ್ದಾರೆ. ಅವರು ಕಳೆದ ಬಾರಿ ಸೋತಿದ್ದರಿಂದ ನೋವಿನಿಂದ ಹೇಳಿದ್ದಾರೆ. ಅಭಿವೃದ್ಧಿ ಮಾಡಿದ್ರು ಮತ ಬಾರದೇ ಇರೋದರಿಂದ ನೋವಿನಿಂದ ಹೇಳಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.