DistrictsKarnatakaLatestMain Post

ಮೋದಿ ಪ್ರಧಾನಿ ಆದ ಬಳಿಕ ಸ್ವಾತಂತ್ರ್ಯ ಹೋರಾಟಗಾರರು, ಧರ್ಮ ಪ್ರಚಾರಕರ ಬಗ್ಗೆ ತಿರಸ್ಕೃತ ಭಾವನೆ ಇದೆ: ಬಿ.ಕೆ ಹರಿಪ್ರಸಾದ್

ಬೆಂಗಳೂರು: ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಸ್ವಾತಂತ್ರ ಹೋರಾಟಗಾರರನ್ನು ಮತ್ತು ನಮ್ಮ ಧರ್ಮ ಪ್ರಚಾರಕರನ್ನು ತಿರಸ್ಕೃತ ಭಾವನೆಯಿಂದ ನೋಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣರಾಜೋತ್ಸವ ಪರೇಡ್‍ನಲ್ಲಿ ನಾರಾಯಣಗುರು ಸ್ತಬ್ಧ ಚಿತ್ರಕ್ಕೆ ಅವಕಾಶ ನಿರಾಕರಣೆ ಮಾಡಿರುವುದು ಖಂಡನಾರ್ಹ. ರಾಜ್ಯ ಸರ್ಕಾರ ಒಕ್ಕೂಟ ವ್ಯವಸ್ಥೆಯಲ್ಲಿದೆ. ಅದಕ್ಕೆ ಕೇರಳ ಸರ್ಕಾರ ನಾರಾಯಣಗುರು ಸ್ತಬ್ಧ ಚಿತ್ರ ಕಳುಹಿಸಿದೆ. ಕೇಂದ್ರ ಸರ್ಕಾರ ಸ್ತಬ್ಧ ಚಿತ್ರ ತಿರಸ್ಕರಿಸಿದೆ. ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಹಿರಿಯರನ್ನು ಕಡೆಗಣಿಸಿದೆ. ತಮಿಳುನಾಡಿನ ವೀರಬೊಮ್ಮನ್ ಸ್ತಬ್ಧ ಚಿತ್ರವನ್ನು ಕೂಡ ಕಡೆಗಣಿಸಲಾಗಿದೆ. ಒನ್ ನೇಷನ್, ಒನ್ ಕಲ್ಚರ್ ಅಂತಾರೆ. ನಾರಾಯಣಗುರುಗಳ ಸ್ತಬ್ಧ ಚಿತ್ರವನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಮೋದಿಯವರು ಕ್ಷಮೆ ಕೇಳಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜಪಥದಲ್ಲಿ ಭಾರತದ ವೈಭವ ಅನಾವರಣ

ಪೂಜಾರಿಯವರು ಬಿಲ್ಲವ ಅನುಯಾಯಿ. ಇನ್ನೊಬ್ಬರು ಶಂಕರಾಚಾರ್ಯರ ಅನುಯಾಯಿ. ಹೀಗಾಗಿ ಕರಾವಳಿ ನಾಯಕರು ಮಾತನಾಡಿಲ್ಲ. ಬಿಜೆಪಿ ಅಧ್ಯಕ್ಷರು ಮೂರು ಬಾರಿ ಸಂಸದರಾದವರು ಅವರು ಇದರ ಬಗ್ಗೆ ಚಕಾರವನ್ನೇ ಎತ್ತಿಲ್ಲ. ಸಿಎಂ ಬೊಮ್ಮಾಯಿ ಎಲ್ಲ ಜಾತಿ ಪರ ಅಂತಾರೆ ಅವರು ಇದರ ಬಗ್ಗೆ ಮಾತನಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಜೈ ಹಿಂದ್ – ಗಣರಾಜ್ಯೋತ್ಸವಕ್ಕೆ ಶುಭಕೋರಿದ ಪ್ರಧಾನಿ ಮೋದಿ

ಏಕಮಂತ್ರ ಜಪಿಸಿದ ನಾರಾಯಣ ಗುರುವನ್ನು ಮರೆತಿದ್ದು ಯಾಕೆ?. ಅದು ಸಣ್ಣ ಸಮುದಾಯ ಎಂದು ಕಡೇಗಣಿಸಿದ್ದ, ಸಚಿವರಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ನಾರಾಯಣ ಗುರು ಅನುಯಾಯಿ. ಸುನಿಲ್ ಕುಮಾರ್, ಶಂಕರಾಚಾರ್ಯರ ಅನುಯಾಯಿ. ಇವರಿಬ್ಬರೂ ಕೂಡ ಮಾತನಾಡುತ್ತಿಲ್ಲ. ಅಲ್ಲದೇ ಮಂಗಳೂರಿಂದ ನಾರಾಯಣ ಗುರುಗಳ ಮತದಿಂದ ಗೆದ್ದ ಕಟೀಲ್ ಮೌನವೇಕೆ? ಅವರ ಮತದಿಂದ ನೀವು ಮೂರು ಬಾರಿ ಸಂಸದರಾಗಿದ್ದು ನೀವು ಕೂಡ ಹೇಳಿಕೆ ಕೊಡ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡರು.

 

Leave a Reply

Your email address will not be published.

Back to top button