ಬೆಳಗಾವಿ: ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(NEP) ಚರ್ಚೆಗೆ ಅವಕಾಶ ನೀಡದೇ ಜಾರಿಗೊಳಿಸಿರುವುದು ಸರಿಯಲ್ಲ. ಇದರಲ್ಲಿ ಸಂಘ ಪರಿವಾರದವರ ಕುತಂತ್ರ ಇದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೀಗೆ ಏಕಾ ಏಕಿಯಾಗಿ ಜಾರಿಗೊಳಿಸಬಾರದಿತ್ತು. ಕ್ಯಾಬಿನೆಟ್‍ನಲ್ಲಿ ಚರ್ಚೆಗೆ ಅವಕಾಶ ನೀಡಬೇಕಿತ್ತು. ಇದರ ಹಿಂದೆ ಸಂಘ ಪರಿವಾರದ ಕುತಂತ್ರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ, ಪ್ರಸಾರ ಮಾಡಬೇಡಿ – ಅಫ್ಘಾನಿಸ್ಥಾನದಲ್ಲಿ ಐಪಿಎಲ್ ಬ್ಯಾನ್
ಕೋವಿಡ್ ವೇಳೆಯಲ್ಲಿ ಕಾರ್ಮಿಕರಿಗೆ ನೀಡಬೇಕಿದ್ದ ಫುಡ್ ಕಿಟ್‍ನ್ನು ಸಂಗ್ರಹಿಸಿಟ್ಟಿದ್ದ ಬಿಜೆಪಿಯವರ ನಡೆ ಕುರಿತಂತೆ ಮಾತನಾಡಿದ ಅವರು ಫುಡ್‍ಕಿಟ್‍ಗಳನ್ನು ಬಡವರಿಗೆ ನೀಡದೇ ಏಕೆ ಸಂಗ್ರಹಿಸಿಟ್ಟಿದ್ದರು ಎಂಬದನ್ನು ಜನತೆಗೆ ತಿಳಿಸಿ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿಯವರು ಗೂಂಡಾಗಿರಿ ಮಾಡಿದರೆ ನಾವು ಅದನ್ನು ಸಹಿಸುವುದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.