ಬೆಂಗಳೂರು: ಬಿಜೆಪಿ (BJP) ವಿಜಯ ಸಂಕಲ್ಪ ಅಭಿಯಾನವನ್ನು (Vijaya Sankalpa Abhiyan) ಇದೇ ಜನವರಿ 21 ರಿಂದ 29 ರವರೆಗೆ ಹಮ್ಮಿಕೊಳ್ಳಲಾಗುವುದು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ವಿಜಯಪುರದ ಸಿಂಧಗಿಯಲ್ಲಿ ಅಭಿಯಾನಕ್ಕೆ ಚಾಲನೆ ಕೊಡಲಿದ್ದಾರೆ ಎಂದು ಅಭಿಯಾನದ ರಾಜ್ಯ ಸಂಚಾಲಕ ಮತ್ತು ರಾಜ್ಯದ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ ಸಿ.ಎನ್.ಅಶ್ವಥ್ ನಾರಾಯಣ (Dr. Ashwathnarayan) ತಿಳಿಸಿದರು.
Advertisement
ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ನಿಕಟಪೂರ್ವ ಸಿಎಂ ಮತ್ತು ಮಾರ್ಗದರ್ಶಕರಾದ ಬಿ.ಎಸ್.ಯಡಿಯೂರಪ್ಪ (B.S Yediyurappa), ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ (Nalinkumar Kateel) ಅವರು 21 ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ- ರಾಜ್ಯ ಸರ್ಕಾರಗಳ ಸಾಧನೆ, ಕೊಡುಗೆ, ಕಾರ್ಯಕ್ರಮಗಳ ಕುರಿತು ಕರಪತ್ರಗಳನ್ನು ಹಂಚಿಕೆ ಮಾಡಲಾಗುವುದು. 2 ಕೋಟಿಗಿಂತ ಹೆಚ್ಚು ಮತದಾರರ ಸಂಪರ್ಕ ಮಾಡಿ, ಅವರ ಮನೆಮನೆಗೆ ತೆರಳಿ ಕರಪತ್ರ ಹಂಚಲಿದ್ದೇವೆ. ಫಲಾನುಭವಿಗಳನ್ನು ಮಾತನಾಡಿಸಿ ಒಂದು ಕೋಟಿಗಿಂತ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸಲಿದ್ದೇವೆ. ಬಿಜೆಪಿ ಸರ್ಕಾರಗಳ ಯೋಜನೆಗಳಿಂದ ಈ ಕುಟುಂಬಗಳ ಸಬಲೀಕರಣ ಆದುದನ್ನು ತಿಳಿಸಲಿದ್ದೇವೆ. ವಾಹನಗಳ ಮೇಲೆ ಸ್ಟಿಕರ್ ಹಾಕಿಸುವ ಕೆಲಸವೂ ನಡೆಯಲಿದೆ. ಇದಕ್ಕಾಗಿ ಪೂರ್ವಭಾವಿ ಸಭೆಗಳನ್ನು ಈಗಾಗಲೇ 10 ವಿಭಾಗ ಮಟ್ಟದಲ್ಲಿ ನಡೆಸಲಾಗಿದೆ. 39 ಸಂಘಟನಾತ್ಮಕ ಜಿಲ್ಲೆಗಳು, 312 ಮಂಡಲಗಳಲ್ಲಿ ಸಭೆಗಳನ್ನು ಏರ್ಪಡಿಸಿ ಸಮಿತಿಗಳನ್ನೂ ರಚಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮ ಮಂದಿರದ ಜೊತೆ ಬಡವರಿಗೆ ಮನೆ ನಿರ್ಮಿಸೋಣ: ವರ್ಷದೊಳಗೆ 6 ಮನೆ ಕಟ್ಟಿಸಲು ಪೇಜಾವರ ಶ್ರೀ ನಿರ್ಧಾರ
Advertisement
Advertisement
Advertisement
ಏಕಕಾಲದಲ್ಲಿ ಎಲ್ಲ ಬೂತ್‍ಗಳಲ್ಲೂ, ಮಂಡಲಗಳಲ್ಲೂ ಅಭಿಯಾನ ಮುಂದುವರಿಯಲಿದೆ. ಕೇಂದ್ರ- ರಾಜ್ಯಗಳ ಸಚಿವರು, ಲೋಕಸಭೆ, ರಾಜ್ಯಸಭೆ ಸದಸ್ಯರು, ವಿಧಾನಸಭೆ, ವಿಧಾನಪರಿಷತ್ತಿನ ಸದಸ್ಯರು, ಪಕ್ಷದ ಪ್ರಮುಖರು ಈ ಕಾರ್ಯದಲ್ಲಿ ಕೈಜೋಡಿಸಲಿದ್ದಾರೆ. ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನವೂ ನಡೆಯಲಿದೆ. ಒಂದು ಕೋಟಿಗೂ ಹೆಚ್ಚು ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಿದ್ದೇವೆ. ಸಮಾಜದ ಸಮಸ್ತರನ್ನು ಪಕ್ಷದ ಜೊತೆ ಸೇರ್ಪಡೆ ಮಾಡಿ, ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರನ್ನೂ ಜೊತೆಗೂಡಿಸಲಾಗುವುದು. ಬಿಜೆಪಿ ನೇತೃತ್ವದ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೂತ್ ವಿಜಯ ಅಭಿಯಾನವನ್ನು ಪಕ್ಷವು ಈಗಾಗಲೇ ಯಶಸ್ವಿಯಾಗಿ- ಅಭೂತಪೂರ್ವವಾಗಿ ಪೂರ್ಣಗೊಳಿಸಿದೆ ಎಂದು ಅವರು ತಿಳಿಸಿದರು. 58 ಸಾವಿರಕ್ಕೂ ಹೆಚ್ಚು ಬೂತ್ ಇದ್ದು, ಆ ಪೈಕಿ 51 ಸಾವಿರಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಲಾಗಿದೆ. ಪೇಜ್ ಪ್ರಮುಖರನ್ನು ನೇಮಿಸಿದ್ದು, 32 ಲಕ್ಷಕ್ಕೂ ಹೆಚ್ಚು ಮನೆಗಳ ಮೇಲೆ ಬಿಜೆಪಿ ಧ್ವಜಗಳನ್ನು ಹಾರಿಸಿದ್ದರ ವಿವರ ನೀಡಿದರು. ಪಕ್ಷವನ್ನು ಸದೃಢವಾಗಿ ಬೆಳೆಸಲಾಗುವುದು. ಪ್ರತಿ ಬೂತ್‍ನಲ್ಲಿ ಪಕ್ಷವನ್ನು ಸದೃಢ ಪಡಿಸಲಾಗುತ್ತಿದೆ. ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಕನಿಷ್ಠ ಶೇ.90 ಬೂತ್‍ಗಳಲ್ಲಿ ಕೇಳಲಿದ್ದೇವೆ. ಕನಿಷ್ಠ 5 ಲಕ್ಷ ಗೋಡೆ ಬರಹಗಳನ್ನೂ ಮಾಡುತ್ತೇವೆ. ಕಾರು, ಬೈಕ್ ಮತ್ತಿತರ ವಾಹನಗಳ ಮೇಲೆ ಹಚ್ಚಲು ಕನಿಷ್ಠ 3 ಕೋಟಿ ಸ್ಟಿಕರ್ ಹಂಚಲಿದ್ದೇವೆ ಎಂದು ತಿಳಿಸಿದರು.
ಕೆಲವರು ಬಸ್ ಮೂಲಕ ಕೆಲವಷ್ಟು ಜನರನ್ನು ತಲುಪಬಹುದು. ನಾವು ಮನೆಮನೆಗೆ ತೆರಳಲಿದ್ದೇವೆ. ಇದನ್ನು ಎದುರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ನುಡಿದರು. ಕಿಸಾನ್ ಸಮ್ಮಾನ್, ಉಜ್ವಲ, ಮುದ್ರಾ ಸೇರಿದಂತೆ ನಾವು ಜಾರಿಗೊಳಿಸಿದ ಹತ್ತಾರು ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸುತ್ತೇವೆ ಎಂದು ವಿವರಿಸಿದರು. ಇದನ್ನೂ ಓದಿ: ನನಗೆ ಯಾವುದೇ ನೋಟಿಸ್ ಬಂದಿಲ್ಲ: ಯತ್ನಾಳ್
ಕಾಂಗ್ರೆಸ್ ಸೀಟಿನ ಸಂಖ್ಯೆ ಇನ್ನಷ್ಟು ಕುಸಿತ:
ಸಮಸ್ಯೆ ಆಗಿರುವುದೇ ಕಾಂಗ್ರೆಸ್ (Congress). ಅತಿವೃಷ್ಟಿ, ಬರ ಬಂದರೆ ಮಲಗಿಯೇ ಇರುತ್ತೇವೆ. 120 ಸೀಟಿದ್ದುದು ಕಳೆದ ಬಾರಿ 80 ಆದುದೇ ಕಾಂಗ್ರೆಸ್ ಸಾಧನೆ. ಅವರಲ್ಲಿ ಒಗ್ಗಟ್ಟಿಲ್ಲ. ಸೀಟನ್ನು 50ಕ್ಕಿಂತ ಕಡಿಮೆ ಮಾಡಿಕೊಳ್ಳುವುದೇ ಅವರ ಸಾಧನೆ ಆಗಲಿದೆ. ನಮ್ಮ ಗ್ರಾಫ್ ಪೂರ್ತಿ ಓಡುತ್ತಿದೆ. ದುರ್ಬಲ ಬೂತ್ ಇದ್ದ ಕಡೆ ಅದನ್ನು ಸಶಕ್ತ ಮಾಡಿದ್ದೇವೆ. 51 ಸಾವಿರ ಬೂತ್‍ಗಳಲ್ಲಿ ಬೂತ್ ವಿಜಯ ಅಭಿಯಾನ ಮಾಡಿದ್ದೇವೆ. ಬೇರೆಯವರಂತೆ ಕೆಲಸ ಅರ್ಧದಲ್ಲಿ ನಿಲ್ಲುವುದಿಲ್ಲ. ಜನಸಂಕಲ್ಪ ಯಾತ್ರೆಗಳು ನೂರಾರು ಜಾಗಗಳಲ್ಲಿ ನಡೆದಿದೆ. ವಿವಿಧ ಸಮಾವೇಶಗಳನ್ನು ಮಾಡಿದ್ದೇವೆ. 58 ಸಾವಿರ ಬೂತ್, 312 ಮಂಡಲ, 38 ಸಂಘಟನಾ ಜಿಲ್ಲೆಗಳಲ್ಲಿ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ನೆರೆ ಸಂದರ್ಭದಲ್ಲಿ ಪರಿಹಾರ ಹೆಚ್ಚಳ, ಬೆಳೆ ನಷ್ಟಕ್ಕೆ ಗರಿಷ್ಠ ಸಹಾಯಧನ ನೀಡಲಾಗಿದೆ. ಬೆಳೆ ನಷ್ಟವಾದಾಗ ಕೇವಲ ಒಂದು ವಾರದಲ್ಲಿ ಪರಿಹಾರ ಕೊಟ್ಟಿದ್ದೇವೆ. 2 ವರ್ಷಕ್ಕಿಂತ ಹೆಚ್ಚು ಕಾಲ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇವೆ. ಎಲ್ಲ ಸುಧಾರಣೆಗಳನ್ನೂ ಸಮರ್ಪಕವಾಗಿ ತಲುಪಿಸಿದ್ದೇವೆ. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ನೂರು ರೂಪಾಯಿಗೆ 15 ರೂಪಾಯಿ ಫಲಾನುಭವಿಗೆ ತಲುಪುತ್ತಿತ್ತು. ಇದು ಜನರಿಗೆ ತಿಳಿದಿದೆ. ಆದ್ದರಿಂದ, ಜನರು ಬಿಜೆಪಿಯನ್ನು ಬೆಂಬಲಿಸುತ್ತಾರೆ. ಕರ್ನಾಟಕದಲ್ಲಿ ಅತಿ ಕಡಿಮೆ ನಿರುದ್ಯೋಗ ಪ್ರಮಾಣ ಇದೆ. ಗರಿಷ್ಠ ಎಫ್‍ಡಿಐ, ಇನೊವೇಟಿವ್ ರಾಜ್ಯ, ತಂತ್ರಜ್ಞಾನ, ಕಂದಾಯ ಕಾಯ್ದೆ, ರೈತರ ಸಮಸ್ಯೆ ಪರಿಹಾರ ಮಾಡಿದ್ದೇವೆ. ಜಲ್‍ಜೀವನ್ ಮಿಷನ್‍ನಡಿ ಪ್ರತಿ ಮನೆಗೆ ಕುಡಿಯುವ ನೀರು ಕೊಡುತ್ತಿದ್ದೇವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗರಿಷ್ಠ ಅನುದಾನ ಕೊಟ್ಟಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. 300 ನಮ್ಮ ಕ್ಲಿನಿಕ್, ತಾಲೂಕು- ಜಿಲ್ಲಾ ಆಸ್ಪತ್ರೆಗಳ ಅಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗಿದೆ. ಹಾಸ್ಟೆಲ್‍ಗಳ ನಿರ್ಮಾಣ ಸೇರಿ ಎಲ್ಲ ವರ್ಗದವರಿಗೆ ತಲುಪುತ್ತಿದ್ದೇವೆ. ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದೇವೆ ಎಂದು ವಿವರ ನೀಡಿದರು. ಇದನ್ನೂ ಓದಿ: ಯತ್ನಾಳ್‌ಗೆ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್
150 ಕ್ಷೇತ್ರಗಳಲ್ಲಿ ಗೆಲುವು ಖಚಿತ
150 ಕ್ಷೇತ್ರಗಳಲ್ಲಿ ಗೆಲುವಿನ ಮಿಷನ್ ಅನ್ನು ಈಡೇರಿಸಲು ಬಿಜೆಪಿ ಸಿದ್ಧಗೊಂಡಿದೆ. ಪವರ್ ಕಟ್ ಮಾಡಿದ, ಕತ್ತಲಲ್ಲಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯರವರು ಎಲ್ಲಿಂದ ಉಚಿತ ವಿದ್ಯುತ್ ಕೊಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. ಕಾಂಗ್ರೆಸ್ ಹದಗೆಡಿಸಿದ್ದನ್ನು ನಾವು ಸರಿಪಡಿಸಿದ್ದೇವೆ. ರಾಮಮಂದಿರ ನಿರ್ಮಾಣ, 370ನೇ ವಿಧಿ ರದ್ದತಿ, ತ್ರಿವಳಿ ತಲಾಖ್ ರದ್ದು, ಗೋಹತ್ಯಾ ನಿಷೇಧ ಸೇರಿ ಅನೇಕ ಮಹತ್ವದ ನಿರ್ಧಾರಗಳನ್ನು ನಮ್ಮ ಡಬಲ್ ಎಂಜಿನ್ ಸರ್ಕಾರ ತೆಗೆದುಕೊಂಡಿದೆ. ಮಹದಾಯಿ, ಕಾವೇರಿ, ಕೃಷ್ಣಾ, ಎತ್ತಿನಹೊಳೆ ಸೇರಿ ನೀರಾವರಿಗೆ ಆದ್ಯತೆ ಕೊಟ್ಟಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಗೆ ಗರಿಷ್ಠ ಆದ್ಯತೆ ಕೊಟ್ಟಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.
ಬಿಜೆಪಿ ಸರ್ಕಾರದ ಜನಪರ ಕಾರ್ಯಗಳ ಕುರಿತ ಸರಣಿ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರನ್ನು ತಲುಪುತ್ತಿದ್ದೇವೆ.
ಮುಂಬರುವ ಚುನಾವಣೆಯಲ್ಲಿ BJP ಕಡೆಗೆ ಮತದಾರರು ಸ್ಷಷ್ಟ ಒಲವು ತೋರಿರುವುದು ನಮ್ಮ ತಳಮಟ್ಟದ ಕಾರ್ಯಕರ್ತರ ಗಮನಕ್ಕೆ ಈಗಾಗಲೇ ಬಂದಿದೆ. ಅವರೆಲ್ಲ ಹೆಚ್ಚಿನ ಉತ್ಸಾಹದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.#ವಿಜಯಸಂಕಲ್ಪಅಭಿಯಾನ
1/4 pic.twitter.com/RdndcHJabm
— Dr. Ashwathnarayan C. N. (@drashwathcn) January 16, 2023
ಪಕ್ಷದ ವಿರುದ್ಧ ಇದ್ದರೆ ಅದರದೇ ಆದ ಕ್ರಮವನ್ನು ಅವರು ಎದುರಿಸಬೇಕಾಗುತ್ತದೆ. ಪಕ್ಷದ ಚೌಕಟ್ಟಿನಲ್ಲಿ ಎಲ್ಲರೂ ಇರಬೇಕಾಗುತ್ತದೆ. ಕಾಂಗ್ರೆಸ್ ಎಲ್ಲಾ ಕಡೆ ಮುಳುಗುವ ಹಡಗಾಗಿದೆ. ಅಪ್ರಸ್ತುತ ಪಕ್ಷವಾಗಿದೆ. ಆ ಪಕ್ಷದವರಿಗೆ ಸ್ಪಷ್ಟತೆ ಇಲ್ಲ. ಕೋವಿಡ್ ಲಸಿಕೆ ಪಡೆಯಬೇಡಿ ಎಂದ ಪಕ್ಷವದು. ಈ ಮಟ್ಟದಲ್ಲಿ ‘ನಾ ನಾಯಕಿ’ ಕಾರ್ಯಕ್ರಮ ಅದಲ್ಲ. ನಾ ನಾಲಾಯಕ್ ಕಾರ್ಯಕ್ರಮವದು. ಉತ್ತರ ಪ್ರದೇಶದಂತೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಅಭಿಯಾನದ ಸಹ ಸಂಚಾಲಕ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k