ವಿವಾದಕ್ಕೆ ಕಾರಣವಾದ ರಾಗಾ `ರೆಡ್‌ ಬುಕ್’ – ಸಂವಿಧಾನ ಪ್ರತಿ ಎಂದ ಪುಸ್ತಕದಲ್ಲಿ ಖಾಲಿ ಹಾಳೆ: ಫಡ್ನವಿಸ್‌ ಕೌಂಟರ್‌

Public TV
2 Min Read
Rahul Gandhi

ಮುಂಬೈ: ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಮತ್ತು ಚುನಾವಣಾ ಫಲಿತಾಂಶದ ನಂತರವೂ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಕೆಂಪು ಬಣ್ಣದ ಸಂವಿಧಾನ ಪ್ರತಿ ಎನ್ನಲಾದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡೇ ಸುತ್ತುತ್ತಿದ್ದರು. ತಮ್ಮ ಸಾರ್ವಜನಿಕ ಸಭೆಯಲ್ಲಿ ಇದನ್ನು ಪ್ರದರ್ಶಿಸುತ್ತಿದ್ದರು.

ಇನ್ನೂ ಇತ್ತೀಚೆಗೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ (Maharashtra And Jharkhand Assembly Elections) ಪ್ರಚಾರದಲ್ಲಿ ರಾಹುಲ್ ಗಾಂಧಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂವಿಧಾನದ ಪುಸ್ತಕದ ಜೊತೆ ಭಾಷಣ ಮುಂದುವರಿಸಿದ್ದಾರೆ. ಅವರ ಸಾರ್ವಜನಿಕ ಸಭೆಯೊಂದರಲ್ಲಿ ಸಂವಿಧಾನದ (Constitution) ಪ್ರತಿ ಎನ್ನಲಾದ ಕೆಂಪು ಬಣ್ಣದ ಪುಸ್ತಕವನ್ನು ಜನರಿಗೆ ವಿತರಿಸಲಾಗಿತ್ತು. ಆದರೆ, ಅದರಲ್ಲಿ ಖಾಲಿ ಹಾಳೆಗಳಿವೆ ಎಂದು ಬಿಜೆಪಿ ಆರೋಪಿಸಿದೆ. ಇದನ್ನೂ ಓದಿ: 370ನೇ ವಿಧಿ ಜಾರಿ ನಿರ್ಣಯ ಬೆಂಬಲಿಸಿ ಬ್ಯಾನರ್ ಪ್ರದರ್ಶನ- ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ತಾರಕಕ್ಕೇರಿದ ಗದ್ದಲ

Rahul Gandhi Holds Up Constitution Booklet During Oath

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ರ‍್ಯಾಲಿಗಳಲ್ಲಿ ʻರೆಡ್‌ ಬುಕ್‌ʼನೊಂದಿಗೆ (Red Book) ಕಾಣಿಸಿಕೊಳ್ತಿದ್ದಾರೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್ ಗಾಂಧಿ ಪ್ರಚಾರದ ಸಭೆಗಳಲ್ಲಿ ಕೆಂಪು ಹೊದಿಕೆ ಇರುವ ಚಿಕ್ಕ ಪುಸ್ತಕವನ್ನು ಏಕೆ ಪ್ರದರ್ಶಿಸುತ್ತಾರೆ? ಎಂದು ಮಹಾರಾಷ್ಟ್ರ ಡಿಸಿಎಂ ದೇವೆಂದ್ರ ಫಡ್ನವಿಸ್‌ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೃಷಿ ತ್ಯಾಜ್ಯಕ್ಕೆ ಬೆಂಕಿ: ದಂಡ ದುಪ್ಪಟ್ಟುಗೊಳಿಸಿ ಕೇಂದ್ರ ಸರ್ಕಾರ ಆದೇಶ’

Devendra Fadnavis 1

ಸಂವಿಧಾನ ಪ್ರತಿಯ ಮುಖಪುಟ ನೀಲಿ ಬಣ್ಣದ್ದಾಗಿರುತ್ತೆ, ಆದರೆ ರಾಹುಲ್ ಮಾತ್ರ ಕೆಂಪು ಹೊದಿಕೆ ತೋರಿಸುತ್ತಿದ್ದಾರೆ. ಈಗ ರಾಹುಲ್ ಗಾಂಧಿ ಸುತ್ತ ನಕ್ಸಲರು ಹಾಗೂ ಅರಾಜಕ ಶಕ್ತಿಗಳೇ ತುಂಬಿವೆ. ರಾಹುಲ್ ಗಾಂಧಿ ಕಾಂಗ್ರೆಸ್ ವ್ಯಕ್ತಿಯಾಗಿ ಉಳಿಯದೇ ಉಗ್ರ ಎಡಪಂಥೀಯ ವಿಚಾರವಾದಿಯಾಗಿ ಬದಲಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಇದೇ ವೇಳೆ, ಕೆಂಪು ಪುಸ್ತಕದ ಹಾಳೆಗಳು ಖಾಲಿ ಖಾಲಿ ಆಗಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ, ಬಾಬಾ ಸಾಹೇಬರ ಮೇಲೆ ದಾಳಿ ನಡೆಸ್ತಿದೆ. ಸಂವಿಧಾನಶಿಲ್ಪಿಗೆ ಅಪಮಾನ ಮಾಡುವ ಕೆಲಸ ಮಾಡ್ತಿದೆ ಎಂದು ಕಿಡಿಕಾರಿದೆ. ಇದನ್ನೂ ಓದಿ: ಕೋಲ್ಕತ್ತಾ ರೇಪ್‌ ಕೇಸ್‌ – ಬಂಗಾಳದಿಂದ ಬೇರೆ ರಾಜ್ಯಕ್ಕೆ ಕೇಸ್‌ ವರ್ಗಾಯಿಸಲು ಸುಪ್ರೀಂ ನಕಾರ

Share This Article