ನವದೆಹಲಿ: ಬಿಜೆಪಿಯ (BJP) ರಾಜಕೀಯ ನಿಲುವುಗಳನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಐದು ಪ್ರಶ್ನೆಗಳನ್ನು ಕೇಳಿರುವ ಅವರು ಅದಕ್ಕೆ ಉತ್ತರಿಸಲು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ನಾನು ಈ ಪತ್ರವನ್ನು ರಾಜಕೀಯ ಪಕ್ಷದ ನಾಯಕನಾಗಿ ಬರೆಯುತ್ತಿಲ್ಲ. ಬದಲಿಗೆ ಈ ದೇಶದ ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ನನಗೆ ತುಂಬಾ ಚಿಂತೆಯಾಗಿದೆ. ಬಿಜೆಪಿ ಕೇಂದ್ರ ಸರ್ಕಾರ ದೇಶವನ್ನು ಮತ್ತು ಅದರ ರಾಜಕೀಯವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ ಎಂಬುದು ಇಡೀ ದೇಶಕ್ಕೆ ಹಾನಿಕಾರಕವಾಗಿದೆ. ಹೀಗೆಯೇ ಮುಂದುವರಿದರೆ ನಮ್ಮ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ. ನಮ್ಮ ದೇಶವೂ ಕೊನೆಗೊಳ್ಳುತ್ತದೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಪಡೆದರೆ ಇಡೀ ದಕ್ಷಿಣ ಭಾರತ ಹೊತ್ತಿ ಉರಿಯುತ್ತೆ: ಅಹಿಂದ ರಾಜ್ಯಾಧ್ಯಕ್ಷ
Advertisement
Advertisement
ಪಕ್ಷಗಳು ಬರುತ್ತವೆ ಹೋಗುತ್ತವೆ, ಚುನಾವಣೆಗಳು ಬರುತ್ತವೆ ಮತ್ತು ಹೋಗುತ್ತವೆ, ನಾಯಕರು ಬರುತ್ತಾರೆ ಮತ್ತು ಹೋಗುತ್ತಾರೆ, ಆದರೆ ಭಾರತವು ಯಾವಾಗಲೂ ದೇಶವಾಗಿ ಉಳಿಯುತ್ತದೆ. ಈ ದೇಶದ ತ್ರಿವರ್ಣ ಧ್ವಜವು ಸದಾ ಹೆಮ್ಮೆಯಿಂದ ಆಕಾಶದಲ್ಲಿ ಹಾರಾಡುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪೀಠಿಕೆ ಹಾಕಿರುವ ಕೇಜ್ರಿವಾಲ್ ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಕಮಲಾ ಹ್ಯಾರಿಸ್ ಕಚೇರಿ ಮೇಲೆ ಗುಂಡಿನ ದಾಳಿ
Advertisement
ವಿವಿಧ ಪಕ್ಷಗಳ ನಾಯಕರಿಕೆ ಆಮಿಷಗಳನ್ನು ಒಡ್ಡುವ ಮೂಲಕ ಅಥವಾ ಇಡಿ-ಸಿಬಿಐಗೆ ಬೆದರಿಕೆ ಹಾಕುವ ಮೂಲಕ ಇತರ ಪಕ್ಷಗಳನ್ನು ಒಡೆಯಲಾಗುತ್ತಿದೆ. ವಿವಿಧ ಪಕ್ಷಗಳ ಸರ್ಕಾರಗಳನ್ನು ಉರುಳಿಸಲಾಗುತ್ತಿದೆ. ಚುನಾಯಿತ ಸರ್ಕಾರಗಳನ್ನು ಈ ರೀತಿ ಉರುಳಿಸುವುದು ದೇಶಕ್ಕೆ ಮತ್ತು ದೇಶದ ಪ್ರಜಾಪ್ರಭುತ್ವಕ್ಕೆ ಸರಿಯೇ? ಅಪ್ರಾಮಾಣಿಕ ವಿಧಾನದಿಂದ ಅಧಿಕಾರವನ್ನು ಗಳಿಸುವುದು, ಇದು ನಿಮಗೆ ಅಥವಾ ಆರ್‌ಎಸ್‌ಎಸ್‌ಗೆ ಸ್ವೀಕಾರಾರ್ಹವೇ? ಇದನ್ನೂ ಓದಿ: MUDA Scam: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ
Advertisement
ಸ್ವತಃ ಪ್ರಧಾನಿ ಮತ್ತು ಅಮಿತ್ ಶಾ ಅವರು ದೇಶದ ಕೆಲವು ನಾಯಕರನ್ನು ಸಾರ್ವಜನಿಕ ವೇದಿಕೆಯಿಂದ ಭ್ರಷ್ಟರೆಂದು ಕರೆದರು. ಕೆಲವು ದಿನಗಳ ನಂತರ ಅವರನ್ನು ಭಾರತೀಯ ಜನತಾ ಪಕ್ಷಕ್ಕೆ ಸೇರಿಸಿಕೊಂಡರು. ನೀವು ಅಥವಾ ಆರ್‌ಎಸ್‌ಎಸ್ ಕಾರ್ಯಕರ್ತರು ಇಂತಹ ಬಿಜೆಪಿಯನ್ನು ಕಲ್ಪಿಸಿಕೊಂಡಿದ್ದೀರಾ? ಇದನ್ನೆಲ್ಲಾ ನೋಡಿದ ಮೇಲೆ ನಿಮಗೆ ನೋವು ಆಗುತ್ತಿಲ್ಲವೇ? ಇದನ್ನೂ ಓದಿ: ತಿನಿಸುಗಳಲ್ಲಿ ಉಗುಳು, ಮೂತ್ರ ಬೆರಕೆ; ಆಹಾರ ಕೇಂದ್ರಗಳಲ್ಲಿ ಮಾಲೀಕರ ಹೆಸರು ಪ್ರದರ್ಶನಕ್ಕೆ ಯೋಗಿ ಆದಿತ್ಯನಾಥ್ ಸೂಚನೆ
ಆರ್‌ಎಸ್‌ಎಸ್‌ನ ಗರ್ಭದಿಂದ ಹುಟ್ಟಿದ ಪಕ್ಷ ಬಿಜೆಪಿ. ಬಿಜೆಪಿಗೆ ಗೊಂದಲವಾದರೆ ಅದನ್ನು ಸರಿದಾರಿಗೆ ತರುವುದು ಆರ್‌ಎಸ್‌ಎಸ್ ಜವಾಬ್ದಾರಿ. ಈ ಎಲ್ಲಾ ತಪ್ಪು ಕೆಲಸಗಳನ್ನು ಮಾಡುವುದನ್ನು ನೀವು ಎಂದಾದರೂ ಪ್ರಧಾನಿಯನ್ನು ತಡೆದಿದ್ದೀರಾ? ಇದನ್ನೂ ಓದಿ: ಸಿಎಂ ವೀಕ್ ಆಗಿಲ್ಲ, ಗುಂಡುಕಲ್ಲು ಇದ್ದ ಹಾಗೆ ಇದ್ದಾರೆ: ಪರಮೇಶ್ವರ್
ಬಿಜೆಪಿಗೆ ಇನ್ನು ಆರೆಸ್ಸೆಸ್ ಅಗತ್ಯವಿಲ್ಲ ಎಂದು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜೆಪಿ ನಡ್ಡಾ ಅವರು ಹೇಳಿದ್ದರು. ಆರ್‌ಎಸ್‌ಎಸ್ ಒಂದು ರೀತಿಯಲ್ಲಿ ಬಿಜೆಪಿಯ ತಾಯಿ. ಅಮ್ಮನಿಗೆ ಕಣ್ಣು ತೋರಿಸತೊಡಗಿದ ಮಗ ಇಷ್ಟು ಬೆಳೆದಿದ್ದಾನಾ ಎಂಬ ನಡ್ಡಾ ಅವರ ಈ ಹೇಳಿಕೆಯು ಪ್ರತಿಯೊಬ್ಬ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ತೀವ್ರವಾಗಿ ನೋಯಿಸಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ಅವರ ಹೇಳಿಕೆಯಿಂದ ನಿಮ್ಮ ಹೃದಯಕ್ಕೆ ಏನಾಯಿತು ಎಂದು ದೇಶವು ತಿಳಿಯಲು ಬಯಸುತ್ತದೆ? ಇದನ್ನೂ ಓದಿ: ಕಾಶ್ಮೀರದಲ್ಲಿ 2ನೇ ಹಂತದ ಚುನಾವಣೆ- 26 ಕ್ಷೇತ್ರಗಳ 239 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
ನೀವೆಲ್ಲರೂ ಸೇರಿ ಬಿಜೆಪಿ ನಾಯಕರು 75 ವರ್ಷದ ನಂತರ ನಿವೃತ್ತರಾಗುತ್ತಾರೆ ಎಂದು ಕಾನೂನು ಮಾಡಿದ್ದೀರಿ. ಈ ಕಾನೂನನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. ಈ ನಿಯಮದನ್ವಯ ಪ್ರಮುಖ ನಾಯಕರನ್ನು ತೆರೆಮರೆಗೆ ಸರಿಸಲಾಯಿತು. ಈ ನಿಯಮ ಮೋದಿ ಅವರಿಗೆ ಅನ್ವಯಿಸಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ನಿಯಮ ಎಲ್ಲರಿಗೂ ಒಂದೇ ಇರಬೇಕಲ್ಲವೇ? ನೀವು ಇದನ್ನು ಒಪ್ಪುತ್ತೀರಾ? ಎಂದು ಕೇಜ್ರಿವಾಲ್ ಕೇಳಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪ್ರಚೋದನಕಾರಿ ಹೇಳಿಕೆ – ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್