ಚೆನ್ನೈ: ಸೇತುಸಮುದ್ರಂ ಯೋಜನೆ (Sethusamudram Project) ಮುಂದುವರೆಸುವಂತೆ ತಮಿಳುನಾಡು (Tamil Nadu) ವಿಧಾನಸಭೆ ಸರ್ವಸಮ್ಮತ ನಿರ್ಣಯವನ್ನು ಕೈಗೊಂಡಿದೆ. ನಿರ್ಣಯಕ್ಕೆ ಷರತ್ತುಗಳನ್ನು ವಿಧಿಸಿ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ.
ಸಿಎಂ ಸ್ಟಾಲಿನ್ (CM Stalin) ಸರ್ಕಾರ ಮಂಡಿಸಿದ ನಿರ್ಣಯಕ್ಕೆ ಸದನ ಒಮ್ಮತದ ಒಪ್ಪಿಗೆ ನೀಡಿದೆ. ರಾಜಕೀಯ ಕಾರಣಗಳಿಂದಾಗಿ ಸೇತುಸಮುದ್ರಂ ಯೋಜನೆಯನ್ನು ಬಿಜೆಪಿ ವಿರೋಧಿಸುತ್ತಿದೆ ಎಂದು ಸರ್ಕಾರ ದೂರಿದೆ. ಇದನ್ನೂ ಓದಿ: ನಿಖರವಾಗಿ ಹೇಳುವುದು ಕಷ್ಟ, ಆದರೆ ಸೇತುವೆ ರೂಪದ ರಚನೆ ಇದೆ – ರಾಮ ಸೇತು ಬಗ್ಗೆ ಕೇಂದ್ರ ಉತ್ತರ
Advertisement
Advertisement
ಮಾಜಿ ಸಿಎಂ ಜಯಲಲಿತಾ ಮೊದಲು ಈ ಯೋಜನೆ ಪರವಾಗಿದ್ದರು. ಆದರೆ ದಿಢೀರ್ ಎಂದು ಮನಸ್ಸು ಬದಲಿಸಿ ಈ ಯೋಜನೆ ವಿರೋಧಿಸಿ ಕೇಸ್ ದಾಖಲಿಸಿದರು. ತಮಿಳುನಾಡಿನ ಆರ್ಥಿಕಾಭಿವೃದ್ಧಿಗಾಗಿ ಈ ಯೋಜನೆ ಅತ್ಯಗತ್ಯ. ವಾಜಪೇಯಿ ಕೂಡ ಸೇತುವೆ ಸಾಧ್ಯಾಸಾಧ್ಯತೆ ಪರಿಶೀಲಿಸಲು ಅನುಮತಿ ನೀಡಿದ್ದರು. ಹೀಗಾಗಿ ವಿಳಂಬ ಮಾಡದೇ ಯೋಜನೆ ಜಾರಿಗೆ ಮುಂದಾಗಬೇಕು ಎಂದು ಕೇಂದ್ರ ಸರ್ಕಾರವನ್ನು ಸ್ಟಾಲಿನ್ ಕೋರಿದ್ದಾರೆ.
Advertisement
ಈ ಯೋಜನೆಗೆ ಭಾರತ-ಲಂಕಾ ನಡುವೆ ಇರುವ ರಾಮಸೇತು ಅಡ್ಡಿಯಾಗಿದೆ. ಈ ಯೋಜನೆ ಕೈಗೊಂಡರೆ ರಾಮಸೇತುವೆಗೆ ಹಾನಿಯಾಗಲಿದೆ. ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ. ಹೀಗಾಗಿ ಈ ಯೋಜನೆ ಬೇಡ ಎಂದು ವಾದ ಮಾಡುತ್ತಿದ್ದ ಬಿಜೆಪಿ ಈಗ ಯೂ ಟರ್ನ್ ಹೊಡೆದಿದೆ. ಇದನ್ನೂ ಓದಿ: ಸೇತುಸಮುದ್ರಂ ಯೋಜನೆಗಾಗಿ ರಾಮಸೇತುವೆಗೆ ಯಾವುದೇ ಹಾನಿ ಮಾಡಲ್ಲ- ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿಕೆ
Advertisement
ಬಿಜೆಪಿ ಶಾಸಕ ನೈನಾರ್ ನಾಗೇಂದ್ರನ್, ನಾವು ಈ ನಿರ್ಣಯವನ್ನು ಬೆಂಬಲಿಸುತ್ತೇವೆ, ರಾಮಸೇತುವಿನ ಮೇಲೆ ಪರಿಣಾಮ ಬೀರದಿದ್ದಲ್ಲಿ ನಾವು ಯೋಜನೆಯನ್ನು ಸ್ವಾಗತಿಸುತ್ತೇವೆ. ಯೋಜನೆಯು ಜಾರಿಗೆ ಬಂದರೆ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ನಮಗಿಂತ ಹೆಚ್ಚು ಸಂತೋಷ ಪಡುವವರು ಯಾರು ಇಲ್ಲ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k