LatestLeading NewsMain PostNational

ಸೋನಾಲಿ ಪೋಗಟ್‌ಗೆ ಪಾರ್ಟಿಯಲ್ಲಿ ಬಲವಂತವಾಗಿ ಡ್ರಗ್ಸ್‌ ನೀಡಿದ್ವಿ: ತಪ್ಪೊಪ್ಪಿಕೊಂಡ ಆರೋಪಿಗಳು

ಪಣಜಿ: ಬಿಜೆಪಿ ನಾಯಕಿ ಸೋನಾಲಿ ಪೋಗಟ್‌ ಅನುಮಾನಾಸ್ಪದ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪಾರ್ಟಿ ವೇಳೆ ಪೋಗಟ್‌ಗೆ ಬಲವಂತವಾಗಿ ಮಾದಕ ದ್ರವ್ಯ (ಡ್ರಗ್ಸ್‌) ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋನಾಲಿ ಫೋಗಟ್ ಅವರು ಗೋವಾದ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಸಹಚರರು ಬಲವಂತವಾಗಿ ಮಾದಕ ದ್ರವ್ಯ ನೀಡಿದ್ದಾರೆ. ರೆಸ್ಟೋರೆಂಟ್‌ನಿಂದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಇದು ತಿಳಿದುಬಂದಿದ್ದು, ಆರೋಪಿಗಳು ಸಹ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸೋನಾಲಿ ಫೋಗಟ್ ದೇಹದ ಮೇಲೆ ಗಾಯದ ಗುರುತು ಪತ್ತೆ – ಇಬ್ಬರು ಸಹಚರರ ಬಂಧನ

ಬಿಜೆಪಿ ನಾಯಕಿ ಮತ್ತು ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಫೋಗಟ್ ಅವರ ಸಹಚರರಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಅವರು ನಿರಂತರ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸೋನಾಲಿ ಪೋಗಟ್‌ (42) ಸೋಮವಾರ ರಾತ್ರಿ ಗೋವಾದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಇದನ್ನೂ ಓದಿ: ಸೊನಾಲಿ ಫೋಗಟ್ ಆತ್ಮಹತ್ಯೆ ಪ್ರಕರಣ- ಇಬ್ಬರು ಸಹಚರರ ವಿರುದ್ಧ ಕೇಸ್

ಟಿಕ್‌ ಟಾಕ್‌ನಲ್ಲಿ ಜನಪ್ರಿಯರಾಗಿದ್ದ ಸೋನಾಲಿ ಪೋಗಟ್‌, 14ನೇ ಆವೃತ್ತಿಯ ʼಬಿಗ್‌ಬಾಸ್‌ʼ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು.

Live Tv

Leave a Reply

Your email address will not be published.

Back to top button