ನವದೆಹಲಿ: ಕಾಂಗ್ರೆಸ್ (Congress) ಮೊದಲು ಭ್ರಷ್ಟಾಚಾರ ಮಾಡುತ್ತದೆ, ಬಳಿಕ ಅದನ್ನು ಮುಚ್ಚಿ ಹಾಕಲು ನಿಯಮಗಳ ತಿದ್ದುಪಡಿ ಮಾಡುತ್ತದೆ, ಕಾಂಗ್ರೆಸ್ ಒಂದು ವೃತ್ತಿಪರ ಲೂಟಿಕೋರ ಪಕ್ಷವಾಗಿದೆ. ಅದನ್ನು ತನ್ನ ಜನ್ಮ ಸಿದ್ಧ ಹಕ್ಕು ಎಂದು ಭಾವಿಸಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ (Shehzad Poonawalla) ವಾಗ್ದಾಳಿ ನಡೆಸಿದ್ದಾರೆ.
ಸಿಬಿಐ (CBI) ತನಿಖೆಗೆ ನೀಡಿದ ರಾಜ್ಯ ಸರ್ಕಾರದ ಸಮ್ಮತಿಯನ್ನು ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನೆಲದೊಂದಿಗೆ ಸಂಬಂಧ ಹೊಂದಿರುವ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಅಧಿಕಾರಕ್ಕೆ ಬಂದ ಕೂಡಲೇ ಭೂ ಕಬಳಿಕೆ ಮಾಡಲು ಆರಂಭಿಸುತ್ತದೆ. ಎಸ್ಸಿ-ಎಸ್ಟಿಗಳ ಭೂಮಿಯನ್ನು ಕಬಳಿಕೆ ಮಾಡುತ್ತದೆ. ಅದಕ್ಕಾಗಿ ಜಮೀನಿನ ಜೊತೆಗೆ ಸಂಬಂಧದ ಹೊಂದಿದ ಪಕ್ಷ ಎಂದು ಹೇಳಿಕೊಳ್ಳುತ್ತದೆ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಸಿಬಿಐ ತನಿಖಾ ಸಮ್ಮತಿ ವಾಪಸ್ ಪಡೆದಿರುವುದು ಯೋಗ್ಯ ನಿರ್ಣಯ – ಶಾಸಕ ಬಿ.ಆರ್ ಪಾಟೀಲ್
Advertisement
Advertisement
ಭೂ ಕಬಳಿಕ ಮಾಡಿ ಕಾಂಗ್ರೆಸ್ ಈಗ ಕಾನೂನಿಂದ ಪಾರಾಗಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಸಿಬಿಐ ತನಿಖೆಗೆ ನೀಡಿದ ರಾಜ್ಯ ಸರ್ಕಾರದ ಸಮ್ಮತಿಯನ್ನು ವಾಪಸ್ ಪಡೆದಿದೆ. ಕರ್ನಾಟಕ ಸೇರಿ ಇಡೀ ದೇಶದಲ್ಲಿ ಇದೇ ಮಾದರಿ ಅಳವಡಿಸಿಕೊಂಡಿದೆ. ಭ್ರಷ್ಟಾಚಾರ ಮಾಡಿ ಬಳಿಕ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತದೆ.
Advertisement
ರಾಜ್ಯಪಾಲರ ಮೇಲೆ ಅನವಶ್ಯಕ ಆರೋಪ ಮಾಡಲಾಗುತ್ತಿದೆ. ದಲಿತ ರಾಜ್ಯಪಾಲರನ್ನು ಅವಮಾನಿಸಲಾಗುತ್ತಿದೆ. ಕಾಂಗ್ರೆಸ್ ಶಾಸಕ ಐವಾನ್ ಡಿಸೋಜಾ ಹೊಡೆಯುವ ಬೆದರಿಕೆ ಹಾಕುತ್ತಾರೆ. ಆದರೆ ಹೈಕೋರ್ಟ್ ರಾಜ್ಯಪಾಲರ ನಡೆ ಸರಿ ಎಂದು ಹೇಳುತ್ತದೆ. ಕಾಂಗ್ರೆಸ್‌ನದ್ದು ಮೊಹಬತ್ ಕಾ ದುಖಾನ್ ಅಲ್ಲ, ಭ್ರಷ್ಟಾಚಾರದ ಅಂಗಡಿ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ರದ್ದು, ಒಪಿಎಸ್ ಜಾರಿ: ನಾಸಿರ್ ಹುಸೇನ್
Advertisement
ಸಿದ್ದರಾಮಯ್ಯ ಈವರೆಗೂ ಯಾಕೆ ರಾಜೀನಾಮೆ ನೀಡಿಲ್ಲ? ಮುಕ್ತ ತನಿಖೆಗೆ ಯಾಕೆ ಅವಕಾಶ ಮಾಡಿ ಕೊಟ್ಟಿಲ್ಲ. ಸಿಎಂ ಹುದ್ದೆಯಲ್ಲಿ ಮುಂದುವರಿಯಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ. ಸಂವಿಧಾನದ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡುತ್ತಾರೆ. ಇದಕ್ಕೆ ಯಾಕೆ ಉತ್ತರಿಸಿಲ್ಲ? ಖರ್ಗೆ ಅವರು ಜಮೀನು ಲೂಟಿ ಹೊಡೆಯುವ ಕೆಲಸ ಮಾಡಿದ್ದಾರೆ. ಸಿಬಿಐ, ಇಡಿ ಮೇಲೆ ಆರೋಪ ಮಾಡುವುದು ಬಿಟ್ಟು ಬಿಡಿ. ಸಿದ್ದರಾಮಯ್ಯ ಅವರು ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.