– ಮುಸ್ಲಿಂ ಬಾಹುಳ್ಯ ಇರುವ ಕ್ಷೇತ್ರದಲ್ಲಿ ಜಯ
ಶ್ರೀನಗರ: 2018ರಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹತ್ಯೆಗೀಡಾಗಿದ್ದ ಅಜಿತ್ ಪರಿಹಾರ್ ಎಂಬವರ ಮಗಳು ಶಗುನ್ ಪರಿಹಾರ್ (Shagun Parihar) ಬಿಜೆಪಿಯಿಂದ (BJP) ಜಮ್ಮು ಮತ್ತು ಕಾಶ್ಮೀರದ (Jammu Kashmir) ಕಿಶ್ತ್ವಾರ್‌ನಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 521 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
Advertisement
#WATCH | J&K: BJP’s leading candidate from Kishtwar Shagun Parihar says, ” First of all, what I will do is that, because of security issues, we have lost so many of our army jawans, I lost my father, some have lost their brothers and sons…my efforts will be to ensure that there… pic.twitter.com/jDbIRqQAjU
— ANI (@ANI) October 8, 2024
Advertisement
ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಶಗುನ್ ಪರಿಹಾರ್ 29,053 ಮತಗಳನ್ನು ಪಡೆದರೆ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನಿಂದ ಎರಡು ಬಾರಿ ಶಾಸಕರಾದ ಸಜ್ಜದ್ ಅಹ್ಮದ್ ಕಿಚ್ಲೂ ಅವರು 28,532 ಮತಗಳನ್ನು ಗಳಿಸಿದರು. ಈ ಮೂಲಕ ಶಗುನ್ ಪರಿಹಾರ್ 521 ಮತಗಳ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: Haryana Results| ಕಾಂಗ್ರೆಸ್ ಸೋತಿದ್ದು ಹೇಗೆ? – ಇಲ್ಲಿದೆ 6 ಕಾರಣಗಳು
Advertisement
Advertisement
ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 14 ರಂದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ತಮ್ಮ ಮೊದಲ ಪ್ರಚಾರರದ ವೇಳೆ ಕೇಂದ್ರಾಡಳಿತ ಪ್ರದೇಶದಲ್ಲಿ ʻಭಯೋತ್ಪಾದನೆಯನ್ನು ಕೊನೆಗೊಳಿಸಲು ಬಿಜೆಪಿಯ ಸಂಕಲ್ಪಕ್ಕೆ ಜೀವಂತ ಉದಾಹರಣೆʼ ಎಂದು ಶಗುನ್ ಪರಿಹಾರ್ ಅವರನ್ನು ಪರಿಚಯಿಸಿದ್ದರು.
ಬಿಜೆಪಿಯ ಶಗುನ್ ಪರಿಹಾರ್ ಅವರ ತಂದೆ ಅಜಿತ್ ಪರಿಹಾರ್ ಮತ್ತು ಜಿಲ್ಲಾ ಬಿಜೆಪಿ ನಾಯಕರಾಗಿದ್ದ ಅವರ ಚಿಕ್ಕಪ್ಪ ಅನಿಲ್ ಪರಿಹಾರ್ ಅವರನ್ನು ನವೆಂಬರ್ 2018 ರಲ್ಲಿ ಭಯೋತ್ಪಾದಕರು ಹತ್ಯೆಗೈದಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ – ಖಾತೆ ತೆರೆದ ಎಎಪಿ; ಬಿಜೆಪಿ ಅಭ್ಯರ್ಥಿ ವಿರುದ್ಧ ಮಲಿಕ್ ಜಯಭೇರಿ