– ಮೇಯರ್ ಚುನಾವಣೆಯಲ್ಲಿ ಭಾರೀ ಹೈಡ್ರಾಮಾ
– ತಲಾ 14 ಮತಗಳನ್ನು ಪಡೆದಿದ್ದ ಬಿಜೆಪಿ, ಆಪ್ ಅಭ್ಯರ್ಥಿಗಳು
ಚಂಡೀಗಢ: ಪಾಲಿಕೆಯ ಒಟ್ಟು 35 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಚಂಡೀಗಢ ಮೇಯರ್ ಚುನಾವಣೆಯ ವೇಳೆ ಮ್ಯಾಜಿಕ್ ಮಾಡಿದ್ದು ಮತ್ತೆ ಅಧಿಕಾರದ ಗದ್ದುಗೆ ಏರಿದೆ.
ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಆಪ್ ಮತ್ತು ಬಿಜೆಪಿ ಅಭ್ಯರ್ಥಿಗಳು ತಲಾ 14 ಮತಗಳನ್ನು ಪಡೆದಿದ್ದರು. ಆದರೆ ಕೊನೆಯಲ್ಲಿ ಆಪ್ ಪರ ಚಲಾವಣೆಯಾದ ಮತ ಅಸಿಂಧು ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಬಿಜೆಪಿಯ ಕೌನ್ಸಿಲರ್ ಸರಬ್ಜಿತ್ ಕೌರ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮೇಯರ್ ಅಲ್ಲದೇ ಬಿಜೆಪಿಯ ದಲೀಪ್ ಶರ್ಮಾ ಸೀನಿಯರ್ ಡೆಪ್ಯೂಟಿ ಮೇಯರ್, ಅನೂಪ್ ಗುಪ್ತಾ ಡೆಪ್ಯೂಟಿ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.
Advertisement
ये तो पहली झांकी है…
Congratulations to Smt Sarabjit Kaur Ji on her election as the Mayor of Chandigarh.
Sh Dalip Sharma Ji is the Senior Dy Mayor & Sh Anup Gupta Ji is Dy Mayor.
A big thank you to all hardworking Karyakartas of @BJP4Chandigarh pic.twitter.com/dmPuFffpiL
— Hardeep Singh Puri (@HardeepSPuri) January 8, 2022
Advertisement
ಪಾಲಿಕೆಯ 35 ವಾರ್ಡ್‌ಗಳಿಗೆ ಗಳಿಗೆ ನಡೆದ ಚುನಾವಣೆ ಫಲಿತಾಂಶ ಡಿಸೆಂಬರ್ 27 ರಂದು ಪ್ರಕಟವಾಗಿತ್ತು. ಅದರಲ್ಲಿ ಆಮ್ ಆದ್ಮಿ ಪಕ್ಷ 14 ಮತ್ತು ಬಿಜೆಪಿ 12 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಎಂಟು ಮತ್ತು ಶಿರೋಮಣಿ ಅಕಾಲಿ ದಳ ಒಂದು ಸ್ಥಾನ ಪಡೆದಿತ್ತು. ಫಲಿತಾಂಶದ ಬಳಿಕ ಕಾಂಗ್ರೆಸ್ ಕೌನ್ಸಿಲರ್ ಹರ್ಪೀತ್ ಕೌರ್ ಬಬ್ಲಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
Advertisement
35 ಕಾನ್ಸಿಲರ್ ಗಳಲ್ಲದೆ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಪದನಿಮಿತ್ತ ಸದಸ್ಯರಾಗಿರುವ ಚಂಡೀಗಢದ ಬಿಜೆಪಿ ಸಂಸದೆ ಕಿರಣ್ ಖೇರ್ ಮತದಾನದ ಹಕ್ಕನ್ನು ಹೊಂದಿದ್ದರು.
Advertisement
Congress helped BJP by first exporting 1 councillor & then asking other councillors to abstain from voting
Today the unholy alliance of BJP+Congress elected BJP's Mayor in Chandigarh
Now BJP+Congress+SAD will together try to stop Kejriwal ji in #PunjabElections
–@raghav_chadha pic.twitter.com/q9bA0lemob
— AAP (@AamAadmiParty) January 8, 2022
ಇಂದು ಏನಾಯ್ತು?
ಇಂದು ನಡೆದ ಮೇಯರ್ ಚುನಾವಣೆಯ ಒಟ್ಟು 36 ಮತಗಳಲ್ಲಿ 28 ಮತ ಮಾತ್ರ ಚಲಾವಣೆಯಾಗಿತ್ತು. ಏಳು ಕಾಂಗ್ರೆಸ್ ಕೌನ್ಸಿಲರ್ ಗಳು ಮತ್ತು ಶಿರೋಮಣಿ ಅಕಾಲಿದಳದ ಏಕೈಕ ಕೌನ್ಸಿಲರ್ ಗೈರಾಗಿದ್ದರು. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಶಿವರಾಜ್ ಕುಮಾರ್
BJP's Sarabjit Kaur takes Chair As Chandigarh's New Mayor, AAP councilors creates Ruckus. Marshals called in #ChandigarhMunicipalPolls pic.twitter.com/JWyS0vLxzL
— Harsimran Singh ਹਰਸਿਮਰਨ ਸਿੰਘ ہرسمرن سنگھ (@harsimrans307) January 8, 2022
ಬಿಜೆಪಿ ಮೇಯರ್ ಅಭ್ಯರ್ಥಿ ಪರವಾಗಿ ಸಂಸದೆ ಕಿರಣ್ ಖೇರ್ ಮತದಾನ ಮಾಡಿದ್ದರಿಂದ 14 ಮತಗಳು ಬಿದ್ದಿತ್ತು. ಒಂದು ವೋಟ್ ಅಂಸಿಂಧುಗೊಂಡಿದ್ದರಿಂದ ಆಪ್ ಅಭ್ಯರ್ಥಿ ಕತ್ಯಾಲ್ 13 ಮತಗಳನ್ನು ಮಾತ್ರ ಪಡೆದರು. ಫಲಿತಾಂಶ ಪ್ರಕಟವಾದ ನಂತರ ಎಎಪಿ ಸದಸ್ಯರು ಗದ್ದಲ ನಡೆಸಿದ್ದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಇದನ್ನೂ ಓದಿ: ಪ್ರೋಮೋ ಶೇರ್ ಮಾಡಿ ಸಚಿನ್ ತಂಡವನ್ನು ಕ್ಷಮೆಯಾಚಿಸಿದ ಬಿಗ್ ಬಿ
ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಅಕಾಲಿ ದಳ ಮೇಯರ್ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬಹುದು ಎಂಬ ಪ್ರಶ್ನೆ ಎದ್ದಿತ್ತು. ಆದರೆ ಎರಡೂ ಪಕ್ಷಗಳು ಯಾರ ಪರವಾಗಿಯೂ ಬೆಂಬಲ ನೀಡದೇ ಚುನಾವಣೆಯಿಂದ ಹಿಂದೆ ಸರಿದಿತ್ತು. ಒಂದು ವೇಳೆ ಬಿಜೆಪಿ ಅಥವಾ ಆಪ್‌ಗೆ ಬೆಂಬಲ ನೀಡಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಟೀಕೆ ಎದುರಾಗಬಹುದು ಎಂಬ ಕಾರಣಕ್ಕೆ ಚುನಾವಣೆಯಿಂದಲೇ ದೂರ ಉಳಿದಿದ್ದವು.