ಉಡುಪಿ: ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ (Sadhvi Pragya Singh Thakur) ಓರ್ವ ಭಯೋತ್ಪಾದಕಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ (B.K.Hariprasad) ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ (Udupi) ಮಾತನಾಡಿದ ಅವರು, ಶಿವಮೊಗ್ಗಕ್ಕೆ ಆಕೆ ಭೇಟಿಕೊಟ್ಟು ಮಕ್ಕಳ ದಾರಿ ತಪ್ಪಿಸಿದ್ದಾಳೆ. ತಲ್ವಾರ್, ಚಾಕು, ಚೂರಿ, ಆಯುಧ, ಶಾರ್ಪ್ ಮಾಡಿಟ್ಟುಕೊಳ್ಳಲು ಹೇಳ್ತಾಳೆ. ನಾನು ಆಕೆಯನ್ನು ಭಯೋತ್ಪಾದಕಿ ಎಂದು ಕರೆಯುತ್ತೇನೆ. ನಮ್ಮ ಮಕ್ಕಳನ್ನು ಭಯೋತ್ಪಾಧಕರನ್ನಾಗಿ ಸಿದ್ಧತೆ ಮಾಡುತ್ತೀರಾ? ಪ್ರಧಾನಿ ಮೋದಿಯವರು ಇದಕ್ಕೆ ಉತ್ತರ ಕೊಡಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಒಬ್ಬರಿಗೆ ಒಂದೇ ಟಿಕೆಟ್ ಎನ್ನುತ್ತಿರುವ ಡಿಕೆಶಿ ಎರಡು ಕ್ಷೇತ್ರದ ಕಡೆ ಕಣ್ಣು ಹಾಕಿದ್ರಾ?
Advertisement
Advertisement
ಸಿಎಂ ಬೊಮ್ಮಾಯಿ, ಆರ್ಎಸ್ಎಸ್ (RSS) ಕೈಗೊಂಬೆಯಾಗಿದ್ದಾರೆ. ಪ್ರಧಾನಿ ಮೋದಿ ಪೊಲಿಟಿಕಲ್ ಟೂರಿಸಂ ಶುರು ಮಾಡಿದ್ದಾರೆ. ಮೋದಿ, ರಾಜ್ಯದಲ್ಲಿ ಪೊಲಿಟಿಕಲ್ ಟೂರ್ ಮಾಡ್ತಿದ್ದಾರೆ. ಕೊರೊನಾ, ನೆರೆ ಬಂದಾಗ ಮೋದಿ ಬರಲಿಲ್ಲ ಎಂದು ಕುಟುಕಿದ್ದಾರೆ.
Advertisement
ರಾಜ್ಯದಲ್ಲಿ ಅನೈತಿಕ ಸರ್ಕಾರ ಅಧಿಕಾರದಲ್ಲಿದೆ. ಮುಂದಿನ ಅಗ್ನಿಪರೀಕ್ಷೆಯಲ್ಲಿ ಕಾಂಗ್ರೆಸ್ (Congress) ಗೆಲ್ಲುತ್ತದೆ. ಕರಾವಳಿ ರಾಜಕಾರಣಿಗಳ ಮೇಲೆ ಅವಲಂಬನೆ ಆಗಿಲ್ಲ. ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಧೂಷಕನ ಕೆಲಸ ಮಾಡುತ್ತಿದ್ದಾರೆ ಎಂದು ಕಟೀಲ್ ವಿರುದ್ಧ ಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: BJP, ಕಾಂಗ್ರೆಸ್ನವರು ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿ – ಸಿ.ಎಂ ಇಬ್ರಾಹಿಂ ಸವಾಲ್
Advertisement
ಕಾಂಗ್ರೆಸ್ನಿಂದ ಬಿಜೆಪಿ ಪಕ್ಷಾಂತರವಾದ ಪ್ರತಿನಿಧಿಗಳನ್ನು ವೇಶ್ಯೆಗೆ ಹೋಲಿಕೆ ಮಾಡಿ ಬಿ.ಕೆ.ಹರಿಪ್ರಸಾದ್ ವ್ಯಾಪಕ ಟೀಕೆಗೆ ಗುರುಗಿದ್ದರು. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k