ಮುಂಬೈ: ಮಹಾರಾಷ್ಟ್ರದ (Maharashtra) 15ನೇ ವಿಧಾನಸಭೆಯ ಸ್ಪೀಕರ್ ಆಗಿ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ (Rahul Narwekar) ಸೋಮವಾರ (ಡಿ.09) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾನುವಾರ (ಡಿ.08) ರಾಹುಲ್ ನಾರ್ವೇಕರ್ ಸ್ಪೀಕರ್ ಹುದ್ದೆಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇನ್ನೂ ಮಹಾವಿಕಾಸ್ ಅಘಾಡಿಯೂ (MVC) ಯಾವುದೇ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿರಲಿಲ್ಲ. ಹೀಗಾಗಿ ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ 2ನೇ ಬಾರಿಗೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.ಇದನ್ನೂ ಓದಿ: ಮಧ್ಯಂತರ ಜಾಮೀನು ಅವಧಿ ಅಂತ್ಯದ ದಿನವೇ ದರ್ಶನ್‌ಗೆ ಸರ್ಜರಿ – ಸದ್ಯಕ್ಕೆ ʻದಾಸʼನಿಗೆ ರಿಲೀಫ್!
Advertisement
Advertisement
1960ರಲ್ಲಿ ಮಹಾರಾಷ್ಟ್ರ ರಾಜ್ಯ ರಚನೆಯಾದ ಬಳಿಕ ಬಾಳಾಸಾಹೇಬ್ ಭರಡೆ ಅವರು ಎರಡು ಬಾರಿ ವಿಧಾನಸಭಾ ಸ್ಪೀಕರ್ ಆಗಿದ್ದ ಏಕೈಕ ಸದಸ್ಯರಾಗಿದ್ದರು. ಅದಾದ ಬಳಿಕ ರಾಹುಲ್ ನಾರ್ವೇಕರ್ ಎರಡನೇ ಬಾರಿ ಸ್ಪೀಕರ್ ಆಗಿ ಹೊರಹೊಮ್ಮಿದ್ದಾರೆ.
Advertisement
ಈ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಮಾತನಾಡಿ, 1960ರಲ್ಲಿ ರಾಜ್ಯ ರಚನೆಯಾದ ನಂತರ ಈ ಹುದ್ದೆಗೆ ಮರು ಆಯ್ಕೆಯಾದ ಕೆಳಮನೆಯ ಎರಡನೇ ಸದಸ್ಯ ನಾರ್ವೇಕರ್ ಎಂದು ಸಂತೋಷ ವ್ಯಕ್ತಪಡಿಸಿದರು. ಎರಡೂವರೆ ವರ್ಷಗಳ ಕಾಲ 14ನೇ ವಿಧಾನಸಭೆ ಸ್ಪೀಕರ್ ಆಗಿದ್ದ ನಾರ್ವೇಕರ್, ನ.20ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಂಬೈನ ಕೊಲಾಬಾ ವಿಧಾನಸಭಾ ಸ್ಥಾನದಿಂದ ಗೆಲುವು ಸಾಧಿಸಿದರು.
Advertisement
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಮಹಾಯುತಿ (Mahayuti) ಒಕ್ಕೂಟವು 288 ಸ್ಥಾನಗಳಲ್ಲಿ 230ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿತ್ತು. ಇನ್ನೂ ಮಹಾವಿಕಾಸ್ ಅಘಾಡಿಯು 46 ಸ್ಥಾನಗಳನ್ನು ಮಾತ್ರ ತಮ್ಮದಾಗಿಸಿಕೊಂಡಿತ್ತು.ಇದನ್ನೂ ಓದಿ: New Delhi| ರಜೌರಿ ಗಾರ್ಡನ್ ರೆಸ್ಟೋರೆಂಟ್‌ನಲ್ಲಿ ಭಾರೀ ಅಗ್ನಿ ಅವಘಡ