ಬೆಂಗಳೂರು: ಬಿಜೆಪಿ (BJP) ಅವರು ಆಪರೇಷನ್ ಕಮಲ (Operation Kamala) ಮಾಡುತ್ತಿರುವುದು ಸತ್ಯ. ಆದರೆ ಅವರು ಅದರಲ್ಲಿ ಯಶಸ್ವಿಯಾಗಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಅವರು ಆಪರೇಷನ್ ಮಾಡುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ನನಗೆ ಮಾಹಿತಿಯೂ ಇದೆ. ಅವರು ಏನೇ ಪ್ರಯತ್ನ ಮಾಡಿದರೂ ಏನೂ ಮಾಡಲು ಆಗಲ್ಲ ಎಂದರು. ಇದನ್ನೂ ಓದಿ: ನಮ್ಮ ಮೆಟ್ರೋಗೆ ಬಸವಣ್ಣನವರ ಹೆಸರು ಇಡಬೇಕು: ಎಂ.ಬಿ ಪಾಟೀಲ್
ನಮ್ಮ ಶಾಸಕರಿಗೆ ಅವರು ಆಮಿಷ ಹುಟ್ಟಿಸುತ್ತಿದ್ದಾರೆ. 50 ಕೋಟಿ ಕೊಡುತ್ತೇವೆ, ಮಂತ್ರಿ ಮಾಡುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆ. ಬಿಜೆಪಿ ಅವರು ಏನೇ ಮಾಡಿದರೂ ನಮ್ಮ ಒಬ್ಬ ಶಾಸಕನೂ ಬಿಜೆಪಿಗೆ ಹೋಗಲ್ಲ. ಬಿಜೆಪಿ ಅವರು ಎಷ್ಟೇ ಆಪರೇಷನ್ ಮಾಡಿದರೂ ಅವರು ಯಶಸ್ವಿಯಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ತೀವ್ರ ಕೋವಿಡ್ ಸಮಸ್ಯೆ ಎದುರಿಸಿದವರು ಹೃದಯಾಘಾತದಿಂದ ಪಾರಾಗಲು ಕಠಿಣ ವ್ಯಾಯಾಮ ಬಿಡಿ: ಮನ್ಸುಖ್ ಮಾಂಡವಿಯಾ
ನಾವು 140 ಜನ ಇದ್ದೇವೆ. 137 ಕಾಂಗ್ರೆಸ್ ಶಾಸಕರು, 3 ಜನ ಪಕ್ಷೇತರರು ಇದ್ದಾರೆ. ಇವರು ಸರ್ಕಾರ ತೆಗೆಯಬೇಕಾದರೆ 56 ಜನರನ್ನು ಕರೆದುಕೊಂಡು ಹೋಗಬೇಕು. ಇದು ಸಾಧ್ಯನಾ? ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಎಲ್ಲರೂ ರಾತ್ರಿ ಕನಸು ಕಂಡರೆ ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸರ್ಕಾರ ಚೇಂಜ್ ಮಾಡುವ ಶಕ್ತಿ ನಮ್ಮ ಸಮಾಜದ ಲೀಡರ್‌ಗಳಿಗಿದೆ- ಖರ್ಗೆ ಆಪ್ತ ಶಾಸಕನಿಂದ ಹೊಸ ಬಾಂಬ್
Web Stories