ಬೆಂಗಳೂರು: ಬಿಜೆಪಿ (BJP) ಸರ್ಕಾರದ ಸಪ್ತಪದಿ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹದ (Mass Marriage) ಹೆಸರನ್ನು ಇದೀಗ ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಮಾಂಗಲ್ಯ ಭಾಗ್ಯ (Mangalya Bhagya) ಎಂದು ಮರುನಾಮಕರಣ ಮಾಡಿದೆ.
ನವೆಂಬರ್‌ನಿಂದ ಜನವರಿಯವರೆಗೆ ರಾಜ್ಯದ ಮುಜರಾಯಿ ದೇಗುಲಗಳಲ್ಲಿ ನಿಗದಿತ ದಿನಕ್ಕೆ ಸಾಮೂಹಿಕ ಸರಳ ವಿವಾಹ ಜರುಗುತ್ತದೆ. ಆಯಾಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುಜರಾಯಿ ಇಲಾಖೆಯ ಎ ಮತ್ತು ಬಿ ದೇಗುಲಗಳಲ್ಲಿ ಮಾಂಗಲ್ಯ ಭಾಗ್ಯ ವಿವಾಹ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: Diwali: ದೀಪಾವಳಿಗೆ ಅಯೋಧ್ಯೆಯಲ್ಲಿ ಬೆಳಗಲಿವೆ 24 ಲಕ್ಷ ದೀಪಗಳು – ವಿಶ್ವ ದಾಖಲೆಗೆ ವೇದಿಕೆ ಸಜ್ಜು
ದೇಗುಲದಲ್ಲಿ ವೆಚ್ಚ ಭರಿಸಲು ಹಣ ಇಲ್ಲದ ಸಂದರ್ಭದಲ್ಲಿ ಸಾಮಾನ್ಯ ಸಂಗ್ರಹಣ ನಿಧಿಯಿಂದ 60 ಸಾವಿರ ರೂ. ಬಳಕೆಗೆ ಅನುಮತಿಸಲಾಗಿದೆ. ನವೆಂಬರ್ 16, 19, 19, ಡಿಸೆಂಬರ್ 7, 10 ಮತ್ತು ಜನವರಿಯಲ್ಲಿ 28, 31 ರಂದು ಮಾಂಗಲ್ಯ ಭಾಗ್ಯ ಯೋಜನೆಯ ಸಾಮೂಹಿಕ ವಿವಾಹ ನಡೆಯಲಿದೆ. ಇದನ್ನೂ ಓದಿ: ಎಫ್‍ಡಿಎ ಪರೀಕ್ಷೆ ಅಕ್ರಮ ತನಿಖೆ ಚುರುಕು – ಕಿಂಗ್‍ಪಿನ್‍ನಿಂದ ಜಾಮೀನಿನ ಮೊರೆ