ನವದೆಹಲಿ: ಪ್ರಧಾನಿ ಮೋದಿಯವರ (Narendra Modi) ಸರ್ಕಾರ ಮುಸ್ಲಿಂ ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದೆ ಎಂದು ದೆಹಲಿ ಹಜ್ ಸಮಿತಿಯ (Delhi Haj Committee) ನೂತನ ಅಧ್ಯಕ್ಷರಾದ ಕೌಸರ್ ಜಹಾನ್ (Kausar Jahan) ಹೇಳಿದ್ದಾರೆ.
ತ್ರಿವಳಿ ತಲಾಖ್ (Triple Talaq) ನಿಷೇಧದ ನಂತರ ಮುಸ್ಲಿಂ ಮಹಿಳೆಯರು ಸುರಕ್ಷಿತರಾಗಿದ್ದಾರೆ. ಹಜ್ಗೆ ಹೋಗುವವರ ಸಮಸ್ಯೆ ನಿವಾರಿಸುವ ಕೆಲಸ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಅದರಂತೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Missile Traceː ರಷ್ಯಾದ 6 ಬಲೂನ್ಗಳನ್ನು ಹೊಡೆದುರುಳಿಸಿದ ಉಕ್ರೇನ್ ಸೇನೆ
Advertisement
Advertisement
ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ದೆಹಲಿ ಹಜ್ ಸಮಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಕೌಸರ್ ಜಹಾನ್ ಆಯ್ಕೆಯಾಗಿದ್ದಾರೆ. ದೆಹಲಿಯ ಇತಿಹಾಸದಲ್ಲಿ ಮಹಿಳೆಯೊಬ್ಬರು ಸಮಿತಿ ಮುಖ್ಯಸ್ಥರಾಗಿ ಆಯ್ಕೆಯಾಗಿರುವುದು ಇದು ಎರಡನೇ ಬಾರಿ. ದೆಹಲಿಯ ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ತಾಜ್ದಾರ್ ಬಾಬರ್ ಅವರು ಇಲ್ಲಿಯವರೆಗೆ ಈ ಹುದ್ದೆಯನ್ನು ಅಲಂಕರಿಸಿದ ಏಕೈಕ ಮಹಿಳೆಯಾಗಿದ್ದರು.
Advertisement
ನೂತನ ಅಧ್ಯಕ್ಷರ ಆಯ್ಕೆಗಾಗಿ ಸೋಮವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸಮಿತಿಯ ಹತ್ತು ಸದಸ್ಯರು ಭಾಗವಹಿಸಿದ್ದರು. ಅವರಲ್ಲಿ ಮೊಹಮ್ಮದ್ ಸಾದ್ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಜಹಾನ್ ಅವರಿಗೆ ಬೆಂಬಲ ಸೂಚಿಸಿದರು. ತಮ್ಮ ಅಭ್ಯರ್ಥಿ ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸಿದ್ದ ಆಮ್ ಆದ್ಮಿ ಪಕ್ಷ (ಎಎಪಿ)ಕ್ಕೆ ಈ ಬೆಳವಣಿಗೆ ಅಚ್ಚರಿಯುಂಟು ಮಾಡಿದೆ. ಇದನ್ನೂ ಓದಿ: ಸೌಹಾರ್ದ ಕ್ರಿಕೆಟ್ ಆಡಲು ಹೋಗಿ ಎಡವಟ್ಟು ಮಾಡಿಕೊಂಡ ಬಿಜೆಪಿ ಕೇಂದ್ರ ಸಚಿವ
Advertisement
ಭಾರತೀಯ ಮುಸ್ಲಿಮರು ಹಜ್ ಸಮಿತಿಯಿಂದ ಸಂಯೋಜಿತವಾಗುವ ತೀರ್ಥಯಾತ್ರೆಯಲ್ಲಿ ಪ್ರತಿ ವರ್ಷ ಪವಿತ್ರ ಸ್ಥಳವಾದ ಮೆಕ್ಕಾಗೆ ಪ್ರಯಾಣಿಸುತ್ತಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k