ನಾಳೆಯಿಂದ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ – ಮೈಸೂರಿನಲ್ಲಿ ಜೋಶಿ ಚಾಲನೆ; ಸರ್ಕಾರದ ವೈಫಲ್ಯ ವಿರುದ್ಧ ಕಹಳೆ

Public TV
1 Min Read
R Ashoka

ಬೆಂಗಳೂರು/ಮೈಸೂರು: ರಾಜ್ಯ ಸರ್ಕಾರದ ವಿರುದ್ಧ ನಾಳೆಯಿಂದ (ಏಪ್ರಿಲ್‌ 7) ಬಿಜೆಪಿ (BJP) 2ನೇ ಹಂತದ ಹೋರಾಟ ಕೈಗೆತ್ತಿಕೊಂಡಿದೆ. ಜನಾಕ್ರೋಶ ಯಾತ್ರೆ (JanaKrosha Yatra) ಹೆಸರಿನಲ್ಲಿ ಸರ್ಕಾರದ ವಿರುದ್ಧ ನಾಲ್ಕು ಹಂತಗಳಲ್ಲಿ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ.

ಸೋಮವಾರ ಬೆಳಗ್ಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ (Mysuru Chamundehwari Temple) ವಿಶೇಷ ಪೂಜೆ ಸಲ್ಲಿಸುಕ ಮೂಲಕ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು (Pralhad Joshi) ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸರ್ಕಾರದ ದರ ಏರಿಕೆ ನೀತಿ, ಭ್ರಷ್ಟಾಚಾರ, ಕಮೀಷನ್, ದುರಾಡಳಿತ, ಕಾನೂನು ಅವ್ಯವಸ್ಥೆ, ಮುಸ್ಲಿಂ ಓಲೈಕೆ ಖಂಡಿಸಿ ಜನಾಕ್ರೋಶ ಯಾತ್ರೆ ನಡೆಯಲಿದೆ.

Karnataka BJP Leaders Porotest 2

ಎಲ್ಲಿ, ಯಾವಾಗ ಜನಾಕ್ರೋಶ ಯಾತ್ರೆ?
ಏಪ್ರಿಲ್ 7-12ರ ವರೆಗೆ ಮೊದಲ ಹಂತದ ಜನಾಕ್ರೋಶ ಯಾತ್ರೆಯು ಮೈಸೂರು/ಚಾಮರಾಜನಗರ, ಮಂಡ್ಯ,/ಹಾಸನ, ಕೊಡಗು/ಮಂಗಳೂರು, ಉಡುಪಿ/ ಚಿಕ್ಕಮಗಳೂರು, ಶಿವಮೊಗ್ಗ/ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆಯಲಿದೆ.

ಏಪ್ರಿಲ್ 15-18ರ ವರೆಗೆ ಎರಡನೇ ಹಂತದ ಜನಾಕ್ರೋಶ ಯಾತ್ರೆಯು ನಿಪ್ಪಾಣಿ/ಬೆಳಗಾವಿ/ಹುಬ್ಬಳ್ಳಿ, ಬೀದರ್/ಕಲಬುರ್ಗಿ, ವಿಜಯಪುರ/ಬಾಗಲಕೋಟೆಗಳಲ್ಲಿ ನಡೆಯಲಿದೆ.

ಏಪ್ರಿಲ್ 21-25ರ ವರೆಗೆ ಮೂರನೇ ಹಂತದ ಯಾತ್ರೆಯು ಯಾದಗಿರಿ/ರಾಯಚೂರು, ಬಳ್ಳಾರಿ/ವಿಜಯನಗರ, ಕೊಪ್ಪಳ/ಗದಗ, ಹಾವೇರಿ/ದಾವಣಗೆರೆ, ಚಿತ್ರದುರ್ಗ/ತುಮಕೂರು ಜಿಲ್ಲೆಗಳಲ್ಲಿ ನಡೆಯಲಿದೆ

ಏಪ್ರಿಲ್ 27- ಮೇ 03ರ ವರೆಗೆ ನಾಲ್ಕನೇ ಹಂತದ ಯಾತ್ರೆ ಚಿಕ್ಕಬಳ್ಳಾಪುರ/ಕೋಲಾರ, ಬೆಂಗಳೂರು/ಬೆಂಗಳೂರು ಗ್ರಾಮಾಂತರ/ರಾಮನಗರ ಜಿಲ್ಲೆಗಳಲ್ಲಿ ನಡೆಯಲಿದೆ.

Share This Article