ಬೆಂಗಳೂರು: ಬಿಜೆಪಿ (BJP) ಆಂತರಿಕ ಕಿತ್ತಾಟದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. 15-20 ದಿನಗಳಲ್ಲಿ ಎಲ್ಲಾ ಗೊಂದಲಗಳು ಪರಿಹಾರ ಆಗಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಹ ಉಸ್ತುವಾರಿ ಸುಧಾಕರ್ ರೆಡ್ಡಿಯವರ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಪಕ್ಷದ ವಿಚಾರವನ್ನ ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕು ಎಂದು ಹೈಕಮಾಂಡ್ ಹೇಳಿದೆ. ನಮ್ಮ ಸಹ ಉಸ್ತುವಾರಿ ಸುಧಾಕರ್ ರೆಡ್ಡಿಯವರು ಕೂಡ ಇದೇ ಹೇಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕರಿಸಿದ ರಾಜ್ಯಪಾಲರು – ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆ
ಕಾಂಗ್ರೆಸ್ (Congress) ನಿತ್ಯ ಅಕ್ರಮದಲ್ಲಿ ತೊಡಗಿದೆ. ಲೂಟಿ, ಕಮಿಷನ್, ಮೈಕ್ರೋ ಫೈನಾನ್ಸ್ ಸಾವು, ಬಾಣಂತಿಯರ ಸಾವು ಸೇರಿ ಅನೇಕ ವಿಷಯಗಳಿವೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕು. ನಮ್ಮ ಆಂತರಿಕ ಕಿತ್ತಾಟದಿಂದ ನಮಗೆ ಸ್ವಲ್ಪ ಅಡೆತಡೆ ಆಗಿದೆ. 15-20 ದಿನಗಳಲ್ಲಿ ಗೊಂದಲಗಳಿಗೆ ತೆರೆ ಬೀಳಲಿದ್ದು, ನಾರ್ಮಲ್ ಬಿಜೆಪಿ ರೀತಿ ಕೆಲಸ ಮುಂದುವರೆಸುತ್ತೇವೆ ಎಂದಿದ್ದಾರೆ.
ಎಲ್ಲಾ ನಾಯಕರು ಒಟ್ಟಾಗಿ ಹೋಗಬೇಕು. ಇಂತಹ ಘಟನೆ ಅಗಬಾರದಿತ್ತು ಆಗಿದೆ. ಇಂತಹ ಕಿತ್ತಾಟ ಪ್ರಾರಂಭದಲ್ಲೇ ಕಡಿಮೆ ಆಗಬೇಕಿತ್ತು. ಈಗ ಎಲ್ಲವೂ ಸರಿ ಆಗುತ್ತದೆ. ಎಲ್ಲವನ್ನೂ ಸರಿ ಮಾಡಿಕೊಂಡು ಹೋಗುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಹೈಕೋರ್ಟ್ ತೀರ್ಪುನ್ನು ನಾವು ಗೌರವಿಸುತ್ತೇವೆ: ಅಶೋಕ್