ನೆಹರೂ ಕಾಲದಿಂದ ರಾಹುಲ್‌ವರೆಗೂ ಕಾಂಗ್ರೆಸ್‌ ಮೀಸಲಾತಿ ವಿರೋಧಿ – ಬಿಜೆಪಿ ರಾಷ್ಟ್ರೀಯ ವಕ್ತಾರ ಗುರುಪ್ರಕಾಶ್ ಪಾಸ್ವಾನ್

Public TV
2 Min Read
Guru Prakash Paswan

ಬೆಂಗಳೂರು: ರಾಹುಲ್ ಗಾಂಧಿಯವರ (Rahul Gandhi) ಮೀಸಲಾತಿ (Reservation) ವಿರೋಧಿ ಹೇಳಿಕೆಯು ಅವರ ಕುಟುಂಬದ ಚಿಂತನೆಯ ಮುಂದುವರಿದ ಭಾಗ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗುರುಪ್ರಕಾಶ್ ಪಾಸ್ವಾನ್ (Guru Prakash Paswan) ಅವರು ವಿಶ್ಲೇಷಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಜವಾಹರಲಾಲ್ ನೆಹರೂ ಅವರು 1961ರಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಯಾವುದೇ ರೀತಿಯ ಮೀಸಲಾತಿಯನ್ನು ತಾವು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದನ್ನು ಉಲ್ಲೇಖಿಸಿದರು. ನೆಹರೂ ಅವರ ಪತ್ರವನ್ನೂ ಪ್ರದರ್ಶಿಸಿದರು. ಮೀಸಲಾತಿ ಸಮುದಾಯದಿಂದ ಅಸಮರ್ಥತೆ, ದ್ವಿತೀಯ ದರ್ಜೆಯ ಅಧಿಕಾರಿಗಳ ಆಯ್ಕೆ ಆಗಲಿದೆ ಎಂದಿದ್ದುದನ್ನು ಗುರುಪ್ರಕಾಶ್ ಪಾಸ್ವಾನ್ ವಿವರಿಸಿದರು.

Rahul Gandhi Calls Prajwal Revanna a mass rapist

ಪ್ರಧಾನಿ, ಮುಖ್ಯಮಂತ್ರಿಗಳ ಇಂಥ ಮನಸ್ಥಿತಿ ಇದ್ದಾಗ ಮೀಸಲಾತಿ ಮೂಲಕ ಉದ್ಯೋಗ ಭರ್ತಿ ಆಗುವುದು ಹೇಗೆ? ಬ್ಯಾಕ್‍ಲಾಗ್ ಇರದಿರಲು ಸಾಧ್ಯವೇ ಎಂದು ಕೇಳಿದರು. ಇಂದಿರಾ ಗಾಂಧಿಯವರು ಕೆಂಪು ಕೋಟೆಯಿಂದ ತಮ್ಮ ಭಾಷಣದಲ್ಲಿ ಜಾತಿವಾದ ಈ ದೇಶದಿಂದ ದೂರವಾಗಬೇಕು ಎಂದಿದ್ದರು. ರಾಜೀವ್ ಗಾಂಧಿಯವರು (Rajiv Gandhi) ಸಂಸತ್ತಿನ ಸದನದಲ್ಲಿ ಮಂಡಲ್ ಆಯೋಗದ ಮೀಸಲಾತಿ ಶಿಫಾರಸನ್ನು ವಿರೋಧಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಮುನಿರತ್ನ‌ ವಿರುದ್ಧ ಸರ್ಕಾರ ಪೂರ್ವಾಗ್ರಹಪೀಡಿತ ದ್ವೇಷದ ರಾಜಕಾರಣ ಮಾಡ್ತಿದೆ: ಸಿ.ಟಿ.ರವಿ

ದೇಶವನ್ನು ಜಾತಿ ಸಂಘರ್ಷದತ್ತ ತಂದಿದ್ದೀರಿ ಎಂದು ರಾಜೀವ್ ಅವರು ನುಡಿದಿದ್ದರು. ವಿದೇಶಿ ನೆಲದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಮೀಸಲಾತಿ ರದ್ದು ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿ ಅಂತ್ಯೋದಯ ಪರಿಕಲ್ಪನೆಯಡಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಲ್ಯಾಣ- ಅಭಿವೃದ್ಧಿಗೆ ಬಿಜೆಪಿ ಒತ್ತು ಕೊಡುತ್ತಿದೆ. ಕಳೆದ 10 ವರ್ಷಗಳಲ್ಲಿ ಬಿಜೆಪಿ, ಪರಿಶಿಷ್ಟ ಜಾತಿ, ಪಂಗಡಗಳ, ಹಿಂದುಳಿದ ವರ್ಗಗಳ ಜನಾದೇಶ ಲಭಿಸುತ್ತಿದೆ. ಬಿಜೆಪಿ ವತಿಯಿಂದ ಕಾಂಗ್ರೆಸ್ ಪಕ್ಷದ ಬೂಟಾಟಿಕೆ ತಂತ್ರ ಮತ್ತು ಮೀಸಲಾತಿ ವಿರೋಧಿ ಮನಸ್ಥಿತಿ ವಿರುದ್ಧ ರಾಷ್ಟ್ರಾದ್ಯಂತ ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.

ರಾಹುಲ್‌ ಗಾಂಧಿ ಹೇಳಿದ್ದೇನು?
ಅಮೆರಿಕ ಪ್ರವಾಸದ ಸಮಯದಲ್ಲಿ ರಾಹುಲ್‌ ಗಾಂಧಿ ಜಾರ್ಜ್‌ಟೌನ್‌ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗಿನ ಸಂವಾದ ನಡೆಸಿದರು. ಮೀಸಲಾತಿಯು ಎಷ್ಟು ಕಾಲ ಮುಂದುವರಿಯಲಿದೆ ಎಂಬ ಪ್ರಶ್ನೆಗೆ ರಾಹುಲ್‌ ಗಾಂಧಿ, ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದಾಗ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಕಾಂಗ್ರೆಸ್ ಪಕ್ಷವು ಆಲೋಚನೆ ಮಾಡಲಿದೆ. ಈಗ ಸಮಾನತೆಯ ಪರಿಸ್ಥಿತಿ ಇಲ್ಲ ಎಂದು ಅವರು ಉತ್ತರಿಸಿದ್ದರು.

Share This Article