ನವದೆಹಲಿ: ಗುಜರಾತ್ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅಣಬೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡೋ ಮೂಲಕ ಕಾಂಗ್ರೆಸ್ನ ಅಲ್ಪೇಶ್ ಠಾಕೂರ್ಗೆ ಟಾಂಗ್ ನೀಡಿದ್ದಾರೆ.
ಪಕ್ಷದ ದೆಹಲಿ ಘಟಕದ ವಕ್ತಾರರಾದ ತಜಿಂದರ್ ಸಿಂಗ್ ಅಲ್ಪೇಶ್ ಠಾಕೂರ್ ಟಾಂಗ್ ಕಡುವ ಸಲುವಾಗಿ ಅಣಬೆ ಕೇಕ್ ಕತ್ತರಿಸೋ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.
Advertisement
Advertisement
ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೋರ್ ಚುನಾವಣಾ ಪ್ರಚಾರದ ವೇಳೆ ಮೋದಿ ತೈವಾನ್ ಅಣಬೆ ತಿಂದು ಬೆಳ್ಳಗಾಗಿದ್ದಾರೆ ಎಂದು ಹೇಳಿಕೆ ನೀಡಿದ್ದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಒಂದು ಅಣಬೆ ಬೆಲೆ 80 ಸಾವಿರ ರೂ. ದಿನಕ್ಕೆ 5 ಅಣಬೆಗಳನ್ನ ಮೋದಿ ತಿಂತಾರೆ ಅಂತ ಅಲ್ಪೇಶ್ ಹೇಳಿದ್ದರು.
Advertisement
Advertisement
ಮೋದಿ ನನ್ನಂತೆ ಕಪ್ಪಗಿದ್ದರು. ಆದ್ರೆ ವಿದೇಶಿ ಅಣಬೆ ತಿಂದು ಬೆಳ್ಳಗಾದ್ರು ಎಂದು ಅಲ್ಪೇಶ್ ಹೇಳಿದ್ದರು.
ಇನ್ನು ಗುಜರಾತ್ನ ರಾಧಾನ್ಪುರ್ ನಿಂದ ಸ್ಪರ್ಧಿಸಿದ್ದ ಅಲ್ಪೇಶ್ ಠಾಕೂರ್ ಜಯ ಸಾಧಿಸಿದ್ದಾರೆ.