ಕಾರವಾರ: ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಅವರು ಇತ್ತೀಚೆಗೆ ನೀಡಿದ್ದ ಸಂವಿಧಾನ ತಿದ್ದುಪಡಿ ಹೇಳಿಕೆಗೆ ಖುದ್ದು ರಾಜ್ಯ ಬಿಜೆಪಿಯೇ ವಿರೋಧ ವ್ಯಕ್ತಪಡಿಸಿದೆ.
Advertisement
ಈ ಕುರಿತು ಎಕ್ಸ್ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕ (BJP Karnataka), ಸಂಸದ ಅನಂತಕುಮಾರ್ ಹೆಗಡೆ ಅವರ ಸಂವಿಧಾನದ ಬಗೆಗಿನ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳೇ ಹೊರತು ಪಕ್ಷದ ನಿಲುವನ್ನು ಬಿಂಬಿಸುವುದಿಲ್ಲ, ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ. ಬಿಜೆಪಿ ರಾಷ್ಟ್ರದ ಸಂವಿಧಾನವನ್ನು (Constitution) ಎತ್ತಿಹಿಡಿಯುವ ಅಚಲವಾದ ಬದ್ಧತೆಯನ್ನು ಹೊಂದಿದೆ. ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಪಕ್ಷವು ಸೂಚಿಸಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಸೋಮವಾರವೇ ಬಿಜೆಪಿಯ 2ನೇ ಪಟ್ಟಿ ರಿಲೀಸ್? – ರಾಜ್ಯದ 15 ಅಭ್ಯರ್ಥಿಗಳ ಹೆಸರು ಘೋಷಣೆ ಸಾಧ್ಯತೆ
Advertisement
Advertisement
ಅನಂತಕುಮಾರ್ ಹೆಗಡೆ ಹೇಳಿದ್ದೇನು?
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಲಗೇರಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಂವಿಧಾನ ತಿದ್ದುಪಡಿ ಮಾಡೋದಾದ್ರೆ ಬಹುಮತ ಅವಶ್ಯ, ಕಾಂಗ್ರೆಸ್‌ನವರು ಸಂವಿಧಾನದ ಮೂಲರೂಪವನ್ನ ತಿರುಚಿದ್ರು, ಅದರಲ್ಲಿ ಬೇಡದೇ ಇರೋದನ್ನೆಲ್ಲ ತುರುಕಿದ್ರು, ಇಡೀ ಹಿಂದೂ ಸಮಾಜವನ್ನ ಧಮನಿಸೋ ರೀತಿ ಕಾನೂನು ತಂದಿಟ್ಟಿದ್ದರು. ಇದೆಲ್ಲವೂ ಬದಲಾಗಬೇಕಿದ್ದರೇ ಈ ಅಲ್ಪಮತದಲ್ಲಿ ಆಗುವುದಿಲ್ಲ, ಎರಡೂ ಕಡೆ 2/3 ಬಹುಮತ ಬೇಕಾಗುತ್ತೆ. ಕಾಂಗ್ರೆಸ್‌ನವರು ಜಾಸ್ತಿ ಆದಾಗ ಏನೇ ತಿದ್ದುಪಡಿ ತರೋದಿದ್ರೂ ರಾಜ್ಯಸಭೆಯಲ್ಲಿ ಪಾಸ್ ಆಗಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ: ಹೆಚ್‍ಡಿಕೆ ಗರಂ
Advertisement
ಸಿಎಎಗೆ ರಾಜ್ಯಗಳಿಂದ ಒಪ್ಪಿಗೆ ಬಂದಿಲ್ಲ, ಸಿಎಎ ತರದಿದ್ರೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ನಮ್ಮ ಕೈಲಿ ಇರಲ್ಲ, ಇದೊಂದು ದೇಶದ್ರೋಹಿಗಳ ಆಡಂಬರ ಆಗುತ್ತೆ. ಎಲ್ಲಾ ಕಡೆ 2/3 ಮೆಜಾರಿಟಿ ಬರಲಿ, ಆಮೇಲೆ ನೋಡಿ ಮಾರಿಜಾತ್ರೆ ಹೇಗಿರುತ್ತೆ ಅಂತ. ಜಾತ್ರೆಗೆ ಒಂದು ಕಳೆ ಬರೋದು ಅಷ್ಟರ ನಂತರ, ಗೆದ್ದ ನಂತರ ನಾವು ಮೇಲೆ ಹೋಗಿಬಿಡುತ್ತೇವೆ, ಗ್ರಾಮ ಪಂಚಾಯತಿ, ಲೋಕಸಭೆ, ವಿಧಾನಸಭೆ ಯಾವುದೇ ಇರಲಿ, ನಾನೇ ಅನ್ನೋದು ಬಂದುಬಿಡುತ್ತೆ, ನಾನೇ ದೇವ್ರು ಅನ್ನೋ ಭಾವನೆ ಬಂದುಬಿಡುತ್ತೆ, ಪತನ ಶುರುವಾಗೋದೇ ಅಲ್ಲಿಂದ. ಹಿಂದಿನ ಬಾರಿ 68% ವೋಟು ನಮಗೆ ಬಂದಿತ್ತು. ಒಟ್ಟು ಹಿಂದೂಗಳ 85% ವೋಟ್ ಈ ಕ್ಷೇತ್ರದಲ್ಲಿ ಬಂದಿತ್ತು. ಒಂದು 10% ಸೋಡಾಬಾಟ್ಲಿ ಇರ್ತಾವೆ, ಅದಕ್ಕೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಯಾರೂ ಇಲ್ಲ ಅಂದ್ರೆ ಕುಸ್ತಿ ಯಾರ್ ಹತ್ರ ಆಡೋದು? ನಮ್ಮ ದೇಶ ಸರಿ ಆಗಬೇಕು ಅಂದ್ರೆ ನಮ್ಮವರಿಂದಲೇ ಹೊರತು ಬೇರೆ ಅವರಿಂದ ಸಾಧ್ಯವಿಲ್ಲ.
ಕಾಂಗ್ರೆಸ್‌ನ ಈ ದೇಶದ್ರೋಹಿ ಸರ್ಕಾರ ಹೋಗಬೇಕು. ಜಾತ್ಯತೀತರು ಇದನ್ನ ತೀರ್ಮಾನ ಮಾಡಿಲ್ಲ, ತೀರ್ಮಾನ ಮಾಡಿದವರು ನಮ್ಮ ಹಿಂದೂಗಳು, ಈ ಬಾರಿ ಮೋದಿಯವರು 400ಕ್ಕೂ ಹೆಚ್ಚು ಸೀಟ್ ಗೆಲ್ಲಬೇಕು ಅಂದ್ರು, 400 ಯಾಕೆ? ನಮಗೆ ಲೋಕಸಭೆಯಲ್ಲಿ ಬಹುಮತ ಇದೆ, ರಾಜ್ಯಸಭೆಯಲ್ಲಿ ಇಲ್ಲ, ಸಂವಿಧಾನ ತಿದ್ದುಪಡಿ ಆಗಬೇಕಾದ್ರೆ ಮೆಜಾರಿಟಿ ಬರಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದರು.