ಮೇ 19ಕ್ಕೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ

Public TV
1 Min Read
BJP Flag Final 6

ನವದೆಹಲಿ: ಮೇ 19 ರಂದು ಗುರುವಾರ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಮಹತ್ವದ ಸಭೆ ನವದೆಹಲಿಯಲ್ಲಿ ನಡೆಯಲಿದೆ. ಮುಂಬರುವ ವಿಧಾನ ಪರಿಷತ್‌ ಹಾಗೂ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಈ ಸಭೆ ಆಯೋಜಿಸಲಾಗಿದೆ.

ವಿಧಾನ ಪರಿಷತ್‌ನ 7 ಸ್ಥಾನಗಳ ಪೈಕಿ ಬಿಜೆಪಿ 4 ಸ್ಥಾನಗಳನ್ನು ಪಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಬಿಜೆಪಿ ಕೋರ್‌ ಕಮಿಟಿ 30 ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಿದೆ. ಮಹಿಳಾ ವಿಭಾಗ, ಎಸ್ಸಿ/ಎಸ್ಟಿ ವಿಭಾಗ, ಲಿಂಗಾಯತ-ಒಕ್ಕಲಿಗ ಸೇರಿದಂತೆ ವಿವಿಧ ವರ್ಗಗಳ ನಾಯಕರಿಗೆ ಆದ್ಯತೆ ನೀಡುವಂತೆ ಕೋರ್‌ ಕಮಿಟಿ ಶಿಫಾರಸು ಮಾಡಿದೆ. ಇದನ್ನೂ ಓದಿ: ಅನಿವಾರ್ಯತೆಗಳು ಬಂದಾಗ ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿಯಬೇಕು: ಹೊರಟ್ಟಿ

pm modi amit shah

ಇದೇ ಮೊದಲ ಬಾರಿಗೆ ಕೇಂದ್ರ ಚುನಾವಣಾ ಸಮಿತಿ ಸಭೆಗೆ ರಾಜ್ಯ ನಾಯಕರನ್ನು ಆಹ್ವಾನಿಸಲಾಗಿದ್ದು, ರಾಜ್ಯ ನಾಯಕರ ಅಭಿಪ್ರಾಯವನ್ನು ಮತ್ತೊಮ್ಮೆ ಪಡೆದು ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರು ಅಖೈರುಗೊಳಿಸಲಿದ್ದಾರೆ.

ಜೂ.3ರಂದು ನಡೆಯುವ ಪರಿಷತ್‌ ಚುನಾವಣೆಗೆ ಇಂದು ಅಧಿಸೂಚನೆ ಹೊರಬೀಳಲಿದ್ದು, ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೇ 24 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಅದಕ್ಕೂ ಮುನ್ನ ವರಿಷ್ಠರು ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪಗೆ ಶರಣಾದ ಬಿಜೆಪಿ

Share This Article