ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು 52,148 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರು 5,43,306 ಮತಗಳನ್ನು ಪಡೆದಿದ್ದರೆ, ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ 4,91,158 ಮತಗಳನ್ನು ಗಳಿಸಿದ್ದರು. ಈ ಪ್ರಬಲ ಸ್ಪರ್ಧಿಯ ನಡುವೆಯೂ ಕಣಕ್ಕೆ ಇಳಿದ್ದ ಜೆಡಿಯು ಮಹಿಮಾ ಪಟೇಲ್ 8,713 ಹಾಗೂ ಪಕ್ಷೇತರ ಶಶಿಕುಮಾರ್ ಗೌಡ 17,189 ವೋಟ್‍ಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 10,687 ಮತದಾರರು ನೋಟಾ ಒತ್ತಿದ್ದಾರೆ.
Advertisement
Advertisement
ಇತ್ತ ಮತ ಎಣಿಕೆ ಪ್ರಾರಂಭ ಹಂತವಾದ ಅಂಚೆ ಮತಗಳಲ್ಲಿಯೂ ಬಿ.ವೈ.ರಾಘವೇಂದ್ರ ಮುನ್ನಡೆ ಸಾಧಿಸಿದ್ದರು. ಒಟ್ಟು 86 ಅಂಚೆ ಮತಗಳಲ್ಲಿ, ರಾಘವೇಂದ್ರ 23, ಮಧು ಬಂಗಾರಪ್ಪ 17 ಪಡೆದಿದ್ದರು. ಉಳಿದಂತೆ 46 ಮತಗಳು ತಿರಸ್ಕೃತಗೊಂಡಿವೆ.
Advertisement
2014ರ ಚುನಾವಣೆಯಲ್ಲಿ ಯಡಿಯೂರಪ್ಪ 3,63,305 ಮತಗಳ ಅಂತರದಿಂದ ಜಯಗಳಿಸಿದ್ದರು. ಯಡಿಯೂರಪ್ಪ 6,06,216 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ಸಿನ ಮಂಜುನಾಥ ಭಂಡಾರಿ 2,42,911 ಮತಗಳನ್ನು ಪಡೆದಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv