ಶಿವಮೊಗ್ಗ: ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಹೈವೋಲ್ಟೇಜ್ ಕ್ಷೇತ್ರವಾದ ಶಿವಮೊಗ್ಗದಲ್ಲಿ (Shivamogga) ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ರಾಘವೇಂದ್ರ (BY Raghavendra) ಗೆದ್ದು ಬೀಗಿದ್ದಾರೆ.
7,78,721 ಮತಗಳನ್ನು ಪಡೆದುಕೊಂಡಿರುವ ರಾಘವೇಂದ್ರ ಅವರು 2,43,715 ಮತಗಳ ಅಂತರದಿಂದ 4ನೇ ಬಾರಿಗೆ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಮಾವ ಖರ್ಗೆ ಸೋಲಿಗೆ ಸೇಡು ತೀರಿಸಿಕೊಂಡ ರಾಧಾಕೃಷ್ಣ ದೊಡ್ಡಮನಿ
Advertisement
Advertisement
ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ (Geetha Shivarajkumar) 5,35,006 ಮತಗಳನ್ನ ಪಡೆದುಕೊಂಡು 2,43,715 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಇದು ಅವರ 2ನೇ ಸೋಲು ಸಹ ಆಗಿದೆ. ಇನ್ನೂ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ (KS Eshwarappa) ಕೇವಲ 30,050 ಮತಗಳನ್ನ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.
Advertisement
Advertisement
ಅಂಚೆ ಮತದಲ್ಲೂ ರಾಘವೇಂದ್ರಗೆ ಮೇಲುಗೈ:
ಅಂಚೆ ಮತದಾನದಲ್ಲೂ ಮುನ್ನಡೆ ಕಾಯ್ದುಕೊಂಡ ಬಿ.ವೈ ರಾಘವೇಂದ್ರ ಅವರು ಒಟ್ಟು ಚಲಾವಣೆಯಾದ 5,199 ಮತಗಳ ಪೈಕಿ 2,290 ಮತಗಳನ್ನು ಪಡೆದುಕೊಂಡರು. ಇನ್ನೂ ಪ್ರತಿಸ್ಪರ್ಧಿ ಗೀತಾ ಶಿವರಾಜ್ ಕುಮಾರ್ 1,384 ಮತಗಳನ್ನು ಪಡೆದುಕೊಂಡರೆ, ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಕೇವಲ 91 ಮತಗಳನ್ನು ಪಡೆದರು. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್; ಜನರ ಹೃದಯ ಗೆದ್ದ ಡಾಕ್ಟರ್ – ಮಂಜುನಾಥ್‌ಗೆ ಯಾವ ಕ್ಷೇತ್ರದಲ್ಲಿ ಎಷ್ಟು ವೋಟ್?
ಗೆಲುವಿನ ನಾಗಾಲೋಟ:
2009ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ರಾಘವೇಂದ್ರ 4,82,783 ಮತಗಳನ್ನು ಪಡೆದು ಚೊಚ್ಚಲ ಗೆಲುವು ಕಂಡಿದ್ದರು. 2014ರಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಸ್ಪರ್ಧಿಸಿದ್ದಾರೂ, ಪುನಃ 2019ರಲ್ಲಿ ಕಣಕ್ಕಿಳಿದ ರಾಘವೇಂದ್ರ 7,29,872 ಮತಗಳಿಂದ ಗೆದ್ದಿದ್ದರು. ಇದಕ್ಕೂ ಮುನ್ನ 2018ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ 5,43,306 ಮತಗಳಿಂದ ಜಯಭೇರಿ ಬಾರಿಸಿದ್ದರು. ಇದೀಗ 2024ರಲ್ಲಿ ಗೆಲುವು ಸಾಧಿಸುವ ಮೂಲಕ ತವರು ಕೇತ್ರದಲ್ಲಿ 4ನೇ ಬಾರಿಗೆ ಗೆಲುವು ಸಾಧಿಸಿದ ಹೆಗ್ಗಳಿಗೆ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಸೊಸೆಗೆ ಗೆಲುವು